ಶಾಲಾರಂಭಕ್ಕೆ ದಿನಗಣನೆ: ಪಠ್ಯ ಪುಸ್ತಕ ಮುದ್ರಣಕ್ಕೇ ಹೋಗಿಲ್ಲ!
Team Udayavani, Jun 24, 2021, 8:00 AM IST
ಮಂಗಳೂರು: ರಾಜ್ಯಾದ್ಯಂತ ಜು. 1ರಿಂದ ಶಾಲಾರಂಭಕ್ಕೆ ಸಿದ್ಧತೆ ನಡೆಯು ತ್ತಿದ್ದರೂ ಪಠ್ಯಪುಸ್ತಕಗಳು ಮಾತ್ರ ಮುದ್ರಣಕ್ಕೇ ಹೋಗಿಲ್ಲ. ಈ ಬಾರಿ ಪುಸ್ತಕಗಳ ಸರಬರಾಜು ವಿಳಂಬ ಬಹುತೇಕ ಖಚಿತ.
ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಒಟ್ಟು 77,738 ಶಾಲೆಗಳ 54,17,409 ಬಾಲಕರು ಮತ್ತು 50,39,241 ಬಾಲಕಿಯರು ಸೇರಿ 1.04 ಕೋಟಿ ಮಕ್ಕಳಿಗೆ ಪಠ್ಯಪುಸ್ತಕ ಕೈ ಸೇರಬೇಕಿದೆ.
ಲಾಕ್‌ಡೌನ್ ಹಿನ್ನೆಲೆ ಯಲ್ಲಿ ಬಹುತೇಕ ಮುದ್ರಣಾ ಲಯ ಗಳಿಗೆ ಬೀಗ ಬಿದ್ದಿರುವುದೇ ವಿಳಂಬವಾಗಲು ಕಾರಣ ಎನ್ನುವುದು ಶಿಕ್ಷಣ ಇಲಾಖೆಯ ಸಮ ಜಾಯಿಷಿ.
ಹೊಸತು ಬರುವ ತನಕ ಹಳೆ ಪುಸ್ತಕ! :
ಈ ಬಾರಿ ಪಠ್ಯಪುಸ್ತಕ ವಿಳಂಬವಾಗುವ ಬಗ್ಗೆ ಮೊದಲೇ ಮಾಹಿತಿ ತಿಳಿದ ಶಿಕ್ಷಣ ಇಲಾಖೆ ಕಳೆದ ಬಾರಿಯಂತೆ ಈ ಹಿಂದಿನ ಸಾಲಿನ ಪಠ್ಯಪುಸ್ತಕಗಳ ಬಳಕೆಗೆ ನಿರ್ಧರಿಸಿದೆ. 2020-21ನೇ ಸಾಲಿನಲ್ಲಿ ಸರಕಾರಿ/ಅನುದಾನಿತ ಶಾಲಾ
ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾದ ಪಠ್ಯಪುಸ್ತಕ ಗಳಲ್ಲಿ ಸುಸ್ಥಿತಿಯಲ್ಲಿರುವ ಪುಸ್ತಕಗಳನ್ನು ಆಯಾ ಶಾಲೆಗಳ “ಬುಕ್ ಬ್ಯಾಂಕ್’ನಲ್ಲಿ ಸಂಗ್ರಹಿಸುವಂತೆ ಮತ್ತು ಅಗತ್ಯಾ ನುಸಾರ ಬಳಸುವಂತೆ ಬಿಇಒಗಳಿಗೆ ಸೂಚಿಸಿದೆ.
ಆದರೆ ಸದ್ಯ ಆನ್‌ಲೈನ್‌ನಲ್ಲಿ ತರಗತಿ ನಡೆಯುವುದರಿಂದ ಪಠ್ಯಪುಸ್ತಕ ಸಕಾಲಕ್ಕೆ ದೊರೆಯದಿದ್ದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗಲಿದೆ ಎಂಬುದು ಪೋಷಕರ ಆತಂಕ.
ಸಾಮಾನ್ಯವಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಪಠ್ಯಪುಸ್ತಕಗಳಿಗೆ ಸಂಬಂಧಿಸಿದ ಕಾರ್ಯ ವಿಧಾನಗಳನ್ನು ಹಿಂದಿನ ಆರ್ಥಿಕ ವರ್ಷದಿಂದಲೇ ಪ್ರಾರಂಭಿಸಲಾಗುತ್ತದೆ. ಮೊದಲಿಗೆ 1ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬೇಕಾಗುವ ಪಠ್ಯಪುಸ್ತಕಗಳ ಅಂಕಿ-ಅಂಶಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆಯಲಾಗುತ್ತದೆ. ಅದರಂತೆ ಮುದ್ರಿಸಿ ಬಿಇಒ ಕಚೇರಿಗೆ ತಲುಪಿಸಲಾಗುತ್ತದೆ. ಈ ಮಧ್ಯೆ ಕೇಂದ್ರ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಜೂ. 15ರಿಂದ ಆರಂಭವಾಗಿದ್ದು, ಕೆಲವರಿಗೆ ಪಠ್ಯಪುಸ್ತಕ ದೊರೆತಿದೆ. ಉಳಿದವರಿಗೆ ವಾರದೊಳಗೆ ದೊರೆಯುವ ನಿರೀಕ್ಷೆಯಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಪುಸ್ತಕಗಳ ಮುದ್ರಣ, ಸರಬರಾಜು ಕೊಂಚ ವಿಳಂಬವಾಗಿರುವುದು ಹೌದು. ಇದೀಗ ಟೆಂಡರ್ ಅಂತಿಮಗೊಳಿಸಿದ್ದು ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ದೊರೆಯುವಂತೆ ಮಾಡುತ್ತೇವೆ. – ಎಂ.ಪಿ. ಮಾದೇಗೌಡ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಪಠ್ಯಪುಸ್ತಕ ಸಂಘ-ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
U. T. Khader: ಹೆಬ್ಟಾಳ್ಕರ್-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
ಮಂಜನಾಡಿ ಗ್ಯಾಸ್ ಸ್ಫೋ*ಟ ಪ್ರಕರಣ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
Mangaluru Kambala; ಬಂಗ್ರಕೂಳೂರಿನಲ್ಲಿ ಚಾಲನೆ, ನಾಳೆ ಸಮಾರೋಪ
Mangaluru: ಕಾಂಕ್ರೀಟ್ ರಸ್ತೆ ನಿರ್ಮಿಸಿದರೂ ಫುಟ್‌ಪಾತ್ ಇಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
U. T. Khader: ಹೆಬ್ಟಾಳ್ಕರ್-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್
Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.