ತೋಕೂರು ಫೇಮಸ್ ಯೂತ್ ಕ್ಲಬ್‌ನ ರಜತ ಮಹೋತ್ಸವ
Team Udayavani, Jan 7, 2018, 2:47 PM IST
ತೋಕೂರು: ಗ್ರಾಮೀಣ ಭಾಗದ ಸಂಘ ಸಂಸ್ಥೆಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಉಪಯುಕ್ತ ಮಾಹಿತಿ ಹಾಗೂ ಸಹಾಯ ಹಸ್ತ ನೀಡಿದಾಗ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಮಂಗಳೂರು ಮೇಯರ್ ಕವಿತಾ ಸನಿಲ್ ಹೇಳಿದರು.
ಅವರು 10ನೇ ತೋಕೂರು ಫೇಮಸ್ ಯೂತ್ ಕ್ಲಬ್‌ನ ರಜತ ಮಹೋತ್ಸವ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ಸಾಮಾಜಿಕ ಕಾರ್ಯಕರ್ತೆ ಸಹನಾ ಕುಂದರ್ ದಿಕ್ಸೂಚಿ ಭಾಷಣಗೈದು, ಮಹಿಳಾ ಶಕ್ತಿಯನ್ನು ಜಾಗೃತಿಗೊಳಿಸಿ ಸಮಾಜದಲ್ಲಿ ಬದಲಾವಣೆ ಮಾಡಲು ಸಾಧ್ಯವಿದೆ ಎಂದರು. ಕಿನ್ನಿಗೋಳಿಯ ಯುಗಪುರುಷ ಮಾಸ ಪತ್ರಿಕೆಯ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಂಕರ ಮಾಸ್ಟರ್, ಗೌತಮ್ ಶೆಟ್ಟಿ, ಯತೀಶ್ ಕುಮಾರ್, ರಿತಿಕಾ ಎಚ್. ಪೂಜಾರಿ, ಪ್ರದೀಪ್
ಕುಮಾರ್, ಯೋಗೀಶ್ ಪದಕಣ್ಣಾಯ, ಕಸ್ತೂರಿ ಪಂಜ, ಕವಿತಾ ಸನಿಲ್, ಗುರುರಾಜ್ ಎಸ್. ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ತೋಕೂರಿನ ಸುಧಾಕರ್, ಸರಿತಾ ದಂಪತಿಯ ಪುತ್ರಿ ಸಾಕ್ಷಿ ಅವರಿಗೆ ಆರೋಗ್ಯ ನಿಧಿಯನ್ನು
ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿ ಶಂಬ್ರಿನಾ ಸುಬ್ರಹ್ಮಣ್ಯನಗರ ಅವರಿಗೆ ವಿದ್ಯಾನಿಧಿಯನ್ನು ನೀಡಲಾಯಿತು.
ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್ ದಾಸ್, ಸದಸ್ಯ ದಿನೇಶ್ ಕುಲಾಲ್, ತೋಕೂರು ಅಂಗನವಾಡಿ
ಕೇಂದ್ರದ ಪ್ರೇಮಲತಾ ಯೋಗೀಶ್ ಪೂಜಾರಿ, ಕ್ಲಬ್‌ನ ಅಧ್ಯಕ್ಷ ಸುಧಿಧೀರ್ ಎಂ. ಭಂಡಾರಿ, ಕಾರ್ಯದರ್ಶಿ ದುರ್ಗಾಪ್ರಸಾದ, ಕೋಶಾಧಿಕಾರಿ ಸುಜಿತ್ ಆಚಾರ್ಯ ತೋಕೂರು, ಪದಾಧಿಕಾರಿಗಳಾದ ವಿಶ್ವಜಿತ್ ಆಚಾರ್ಯ, ಪ್ರಮೋದ್‌ಕುಮಾರ್, ನವೀನ್‌ಚಂದ್ರ, ಷರೀಫ್, ನಾಗೇಶ್ ಸಾಲ್ಯಾನ್, ಭೋಜ, ಬಶೀರ್, ಶರತ್, ಸತ್ಯಜಿತ್ ಉಪಸ್ಥಿತರಿದ್ದರು. ಭಾಸ್ಕರ ಅಮೀನ್ ಸ್ವಾಗತಿಸಿ, ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.