ನಗರದ 11 ಕಡೆ ಬಸ್‌ ಬೇ ನಿರ್ಮಾಣ 


Team Udayavani, Apr 19, 2017, 12:00 PM IST

19-MNG-5.jpg

ಮಹಾನಗರ: ವಾಹನ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ನಗರದ 11 ಕಡೆಗಳಲ್ಲಿ ಸುಸಜ್ಜಿತ ಬಸ್‌ ಬೇ ನಿರ್ಮಿಸಲು ಮಹಾನಗರ ಪಾಲಿಕೆ ಉದ್ದೇಶಿಸಿದೆ.

ಈ ಸಂಬಂಧ ಮೇಯರ್‌ ಕವಿತಾ ಸನಿಲ್‌ ಅವರ ನೇತೃತ್ವದಲ್ಲಿ ಶಾಸಕ ಜೆ.ಆರ್‌.ಲೋಬೋ, ಉಪಮೇಯರ್‌ ರಜನೀಶ್‌, ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್‌ ರವೂಫ್‌, ಮುಖ್ಯಸಚೇತಕ ಎಂ.ಶಶಿಧರ ಹೆಗ್ಡೆ, ಆಯುಕ್ತ ಮೊಹಮ್ಮದ್‌ ನಝೀರ್‌ ಅವರು ಇತ್ತೀಚೆಗೆ ಸ್ಥಳ ಸಮೀಕ್ಷೆ ನಡೆಸಿದ್ದಾರೆ. ಪ್ರಮುಖ 11 ಸ್ಥಳಗಳಲ್ಲಿ ಬಸ್‌ ಬೇ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬಸ್‌ ಬೇ ನಿರ್ಮಾಣವಾಗುವ ಸ್ಥಳದಲ್ಲಿ ಖಾಸಗಿ ಭೂಮಿ ಇದ್ದರೆ ಸಂಬಂಧಪಟ್ಟವರ ಜತೆಗೆ ಪಾಲಿಕೆ ವತಿಯಿಂದ ಮಾತುಕತೆ ನಡೆಸಲಾಗುತ್ತದೆ. ಇಕ್ಕಟ್ಟಾಗುವ ಸ್ಥಳದಲ್ಲಿ ಅಗತ್ಯಕ್ಕೆ ತಕ್ಕಂತೆ ಬಸ್‌ ಬೇ ನಿರ್ಮಿಸ ಲಾಗುತ್ತದೆ. ಬಲ್ಲಾಳ್‌ಬಾಗ್‌ ಬಳಿಯ ಚಿನ್ನದ ಅಂಗಡಿಯ ಮುಂಭಾಗದ ಮರವನ್ನು ಉಳಿಸಿ ಹೊರಗಿನಿಂದ ಬಸ್‌ಬೇ ನಿರ್ಮಾಣ, ಪಿವಿಎಸ್‌ನಿಂದ ಬಂಟ್ಸ್‌ಹಾಸ್ಟೆಲ್‌ನಲ್ಲಿ ಹೋಗುವ ಸ್ಥಳದಲ್ಲಿರುವ ಬಸ್‌ ನಿಲ್ದಾಣವನ್ನು ರಿಕ್ಷಾ ಪಾರ್ಕ್‌ ಬಳಿ ತರುವುದು, ಬಂಟ್ಸ್‌ ಹಾಸ್ಟೆಲ್‌ ಈಗಿನ ನಿಲ್ದಾಣಕ್ಕಿಂತ ಮೊದಲು ಹೊಸ ಬಸ್‌ ಬೇ ನಿರ್ಮಿಸುವುದು ಸಹಿತ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಈಗಿನ ಬಸ್‌ ನಿಲ್ದಾಣಗಳ ತೆರವು
ಮೊದಲಿಗೆ ಬಸ್‌ ಬೇ ಆಗಿ, ಬಳಿಕ ಬಸ್‌ ಶೆಲ್ಟರ್‌ ನಿರ್ಮಿಸಲಾಗುತ್ತದೆ. ಈ ಸಂದರ್ಭ ಅಲ್ಲಿ ಕುಡಿಯುವ ನೀರು, ಶೌಚಾಲಯ ಸಹಿಧಿತ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ಹಂತದಲ್ಲಿ  ಅವೈಜ್ಞಾನಿಕವಾಗಿರುವ ಈಗಿನ ಬಸ್‌ ನಿಲ್ದಾಣಗಳನ್ನು ತೆರವುಗೊಳಿಸಲಾ ಗುವುದು. ನಗರದಲ್ಲಿರುವ ಬಸ್‌ ನಿಲ್ದಾಣಗಳು ಅವೈಜ್ಞಾನಿಕವಾಗಿದ್ದು, ಜನ ಕೈ ತೋರಿಸುವಲ್ಲಿ ಬಸ್‌ ನಿಲುಗಡೆ ಎಂಬಂತಾಗಿದೆ. ಕೆಲವೆಡೆ ನಿಲ್ದಾಣಗಳೇ ಇಲ್ಲ. ಇದೆಲ್ಲದರ ಪರಿಣಾ ಮವಾಗಿ ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಕಾಡು ತ್ತಿದೆ. ಹೀಗಾಗಿ ಎಲ್ಲ ಕಡೆಗಳಲ್ಲೂ ಬಸ್‌ ಬೇ ನಿರ್ಮಿಸುವ ಕನಸನ್ನು ಪಾಲಿಕೆ ಕಂಡಿತ್ತು.

ಬಸ್‌ ಬೇ ಇದ್ದರೂ…
ಬಾವುಟ ಗುಡ್ಡದಲ್ಲಿ ಪ್ರಸ್ತುತ ಸುಸಜ್ಜಿತ ಬಸ್‌ಬೇ ನಿರ್ಮಾಣವಾಗಿದೆ. ಮುಖ್ಯ ರಸ್ತೆಯ ಪಕ್ಕ ಅರ್ಧವೃತ್ತಾಕಾರದಲ್ಲಿ ಬಸ್‌ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಆಕರ್ಷಕ ಶೈಲಿಯಲ್ಲಿದೆ. ಬಸ್‌ಗಳು ಬಸ್‌ ಬೇ ಒಳಗೆ ಬಂದು ಹೋಗಬೇಕೆಂಬುದು ಪಾಲಿಕೆ ನಿಯಮ. ಆದರೆ ವಿಪರ್ಯಾಸವೆಂದರೆ ಬಹುತೇಕ ಬಸ್‌ಗಳು ಇದನ್ನು ಪಾಲಿಸುತ್ತಿಲ್ಲ.

ಬಸ್‌ ಬೇ ಅಂದರೇನು?
ಬಸ್‌ ನಿಲ್ದಾಣದ ಬಳಿ ಬಸ್‌ ನಿಲ್ಲಿಸಲೆಂದೇ ಪ್ರತ್ಯೇಕವಾಗಿ ನಿಗದಿಪಡಿಸಿಟ್ಟ ಸ್ಥಳ. ರಸ್ತೆಯನ್ನು ಅರ್ಧವೃತ್ತಾಕಾರದಲ್ಲಿ ವಿಸ್ತರಿಸಲಾಗುತ್ತದೆ. ಇದರಲ್ಲಿ ಬಸ್‌ ನಿಲ್ಲಿಸಿದರೆ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗದು. ಬಸ್‌ ಬೇ ಆಗುವ ಸ್ಥಳಕ್ಕೆ ಕಾಂಕ್ರೀಟು ಹಾಸುವುದು ಸಹಿತ ಅಲ್ಲಿಯೇ ಸುಸಜ್ಜಿತ ಬಸ್‌ ಶೆಲ್ಟರ್‌ ಅನ್ನೂ ನಿರ್ಮಿಸಲಾಗುವುದು. ಇದಕ್ಕೆ ಖಾಸಗಿ ಸಹಭಾಗಿತ್ವವನ್ನೂ ನಿರೀಕ್ಷಿಸಲಾಗುತ್ತಿದೆ. 

ಎಲ್ಲ ಕಡೆಗೂ ಯೋಜನೆ
ನಗರದ ಸಂಚಾರ ದಟ್ಟಣೆಗೆ ಇತಿಶ್ರೀ ಹಾಡಲೆಂದೇ ಎಲ್ಲ  ಕಡೆಗಳಲ್ಲಿ ಬಸ್‌ ಬೇ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿದೆ. ಇದರಂತೆ 11 ಸ್ಥಳ ಸಮೀಕ್ಷೆಯನ್ನು ಸೋಮವಾರ ಶಾಸಕ ಜೆ.ಆರ್‌.ಲೋಬೋ ಉಪಸ್ಥಿತಿಯಲ್ಲಿ ನಡೆಸಲಾಗಿದೆ. ಶೀಘ್ರದಲ್ಲಿ ಬಸ್‌ ಬೇ ಕಾಮಗಾರಿ ಆರಂಭಿಸಿ ಬಸ್‌ ಶೆಲ್ಟರ್‌ ನಿರ್ಮಿಸಲಾಗುವುದು.
ಕವಿತಾ ಸನಿಲ್‌,  ಮೇಯರ್‌

ಸಮೀಕ್ಷೆ ನಡೆಸಿದ ಸ್ಥಳ
ಬಲ್ಲಾಳ್‌ಬಾಗ್‌
ಕೆನರಾ ಕಾಲೇಜು ಹತ್ತಿರ
ಪಿವಿಎಸ್‌
ಬಂಟ್ಸ್‌ಹಾಸ್ಟೆಲ್‌ 
ಜ್ಯೋತಿ, ಬಲ್ಮಠ
ಬೆಂದೂರ್‌ವೆಲ್‌ 
ಕಂಕನಾಡಿ
ಆ್ಯಗ್ನೆಸ್‌
ಶಿವಬಾಗ್‌
ನಂತೂರು

ಟಾಪ್ ನ್ಯೂಸ್

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-KDP

Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ

police

Bajpe; ದನಗಳನ್ನು ಕಳವು ಮಾಡಿ ವ*ಧೆ: ಇಬ್ಬರ ಬಂಧನ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.