40 ಅಂಶದ “ಬೆಂಗಳೂರು ಡಿಕ್ಲರೇಷನ್’
Team Udayavani, Jul 24, 2017, 7:25 AM IST
ಬೆಂಗಳೂರು: ಎಸ್‌ಸಿ-ಎಸ್ಟಿ, ಒಬಿಸಿ, ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿಗೆ ಇಂಗ್ಲಿಷ್ ಶಿಕ್ಷಣ ನೀಡುವುದು, ಜಾತಿ ಮತ್ತು ಸಾಮಾಜಿಕ ಗಣತಿ ಶೀಘ್ರ ಬಿಡುಗಡೆ ಮಾಡುವುದು, ದಲಿತ ಸಮುದಾಯದ ಎಲ್ಲ ಒಳ ಸಮುದಾಯಗಳಿಗೆ ಸಮಾನವಾಗಿ ಒಳ ಮೀಸಲಾತಿ ಕಲ್ಪಿಸುವುದು, ದಲಿತರಿಗೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀಡುವುದು ಸೇರಿ 40 ಅಂಶದ “ಬೆಂಗಳೂರು ಡಿಕ್ಲರೇಷನ್’ ಹೆಸರಿನಲ್ಲಿ ಡಾ.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ನಿರ್ಣಯಗಳನ್ನು ಅಂಗೀಕರಿಸಲಾಗಿದೆ.
ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ ನಿರ್ಣಯಗಳನ್ನು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪವಾಚಿಸಿದರು.
ಪ್ರಮುಖ ಅಂಶಗಳು:
*ಎಸ್ಸಿ, ಎಸ್ಟಿ ಸಮುದಾಯದ ಭೂ ಒಡೆತನವನ್ನು ಖಾತ್ರಿ ಪಡಿಸಲು ಹೊಸ ಕಾನೂನು ಹಾಗೂ ಅವುಗಳ ಕಠಿಣ ಜಾರಿ ಆಗಬೇಕು.
*ಎಸ್ಟಿ ಸಮುದಾಯದಿಂದ ಇತರರು ಪಡೆದಿರುವ ಜಮೀನನ್ನು ಹಿಂಪಡೆಯಲು ಕ್ರಮ ವಹಿಸಬೇಕು.
*ನವೋದಯ ವಿದ್ಯಾಲಯ ಮಾದರಿಯಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಶಾಲೆ ನಿರ್ಮಿಸಬೇಕು.
*ಎಸ್ಸಿ, ಎಸ್ಟಿ ಸಮುದಾಯಗಳಿಗೆ ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿ ನೀಡಬೇಕು.
*ಎಸ್ಸಿ, ಎಸ್ಟಿ ಸಮುದಾಯಗಳಿಗೆ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಬಡ್ತಿ ಮೀಸಲಾತಿ ನೀಡಲು ಕ್ರಮ ಕೈಗೊಳ್ಳಬೇಕು.
*ಮಾಧ್ಯಮಗಳ ಮೇಲಿನ ಹಾಗೂ ಪತ್ರಕರ್ತರ ಮೇಲಿನ ದಾಳಿ ತಡೆಯಲು ಕಠಿಣ ಕಾನೂನು ಜಾರಿಯಾಗಬೇಕು.
*ಮಾಧ್ಯಮ ಸಂಸ್ಥೆಗಳಲ್ಲಿ ಎಸ್ಸಿ,ಎಸ್ಟಿ,ಒಬಿಸಿ ಸಮುದಾಯಗಳ ಪ್ರಾತಿನಿಧ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು.
*ಕರ್ನಾಟಕದಲ್ಲಿ 50 ಲಕ್ಷ ರೂ.ವರೆಗಿನ ಟೆಂಡರ್ನಲ್ಲಿ ದಲಿತರಿಗೆ ನೀಡಿರುವಂತೆ ದೇಶಾದ್ಯಂತ 100 ಲಕ್ಷದ ವರೆಗಿನ ಕಾಮಗಾರಿಯಲ್ಲಿ ಮೀಸಲಾತಿ ನೀಡಬೇಕು.
*ಕರ್ನಾಟಕದಲ್ಲಿ ಜಾರಿಗೆ ತಂದಿರುವಂತೆ ಎಸ್ಸಿ, ಎಸ್ಟಿ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು.
*ಎಸ್ಸಿ, ಎಸ್ಟಿ ಗಳಿಗೆ ಭೂಮಿ ಸುರಕ್ಷತೆ ನೀಡಲು ಲ್ಯಾಂಡ್ ಬ್ಯಾಂಕ್ ಮಾಡಬೇಕು.
*ಹಿಂಸೆಗಳಲ್ಲಿ ತೊಡಗುವವರ ವಿರುದ್ಧ ಮತ, ಜಾತಿ ಭೇದವಿಲ್ಲದೆ ಕ್ರಮ ಕೈಗೊಳ್ಳಬೇಕು.
*ಪೊಲೀಸ್ ವ್ಯವಸ್ಥೆ ರಾಜಕೀಯದಿಂದ ಸಂಪೂರ್ಣ ಮುಕ್ತವಾಗಿಸಿ ಕ್ರಮ ಕೈಗೊಳ್ಳಲು ಅವಕಾಶ ನೀಡಬೇಕು.
*ರಾಜಕೀಯ ಪಕ್ಷಗಳು ಸಂವಿಧಾನದ ಅಂಶಗಳನ್ನು ಎತ್ತಿ ಹಿಡಿಯಲು ಚುನಾವಣಾ ಆಯೋಗಕ್ಕೆ ವಿಸ್ತೃತ ನಿಯಂತ್ರಣ ಶಕ್ತಿ ನೀಡಬೇಕು.
*ಚುನಾವಣಾ ಸ್ಪರ್ಧೆಯಲ್ಲಿ ಮೀಸಲಾತಿಗೆ ಸಾಂವಿಧಾನಿಕ ಮಾನ್ಯತೆ ನೀಡಬೇಕು.
*ಉನ್ನತ ನ್ಯಾಯಾಂಗ ಹು¨ªೆಗಳಲ್ಲಿ ಎಸ್ಸಿ,ಎಸ್ಟಿ,ಒಬಿಸಿ ಸಮುದಾಯಗಳು ಸೂಕ್ತ ಪ್ರಾತಿನಿಧ್ಯ ಗಳಿಸಲು ಕ್ರಮ ಕೈಗೊಳ್ಳಬೇಕು.
*ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತ, ಮಹಿಳೆಯರಿಗೆ ಸಮಾನ ಅವಕಾಶ ಸಿಗುವಂತೆ ಕ್ರಮ ಕೈಗೊಳ್ಳಲು ಸಮಾನ ಅವಕಾಶಗಳ ಆಯೋಗವನ್ನು ಸ್ಥಾಪಿಸಬೇಕು.
*ಶಾಲಾ ಪಠ್ಯದಲ್ಲಿ ಅಂಬೇಡ್ಕರ್, ಜ್ಯೋತಿ ಬಾ ಪುಲೆ, ಸಾವಿತ್ರಿ ಬಾ ಪುಲೆ ಅವರ ಕುರಿತು ಪಠ್ಯ ಅಳವಡಿಸಬೇಕು.
*ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಎಸ್ಸಿ, ಎಸ್ಟಿ, ಒಬಿಸಿಗಳಿಗೆ ಮೀಸಲಾತಿ ನೀಡಬೇಕು.
*ಎಸ್ಸಿ, ಎಸ್ಟಿ, ಒಬಿಸಿ ಸಮುದಾಯದ ಭೂಮಿ ಸಂಪೂರ್ಣ ನೀರಾವರಿ ವ್ಯಾಪ್ತಿಗೆ ಒಳಪಡಿಸಬೇಕು.
*ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರನ್ನು ಹೊರಗುತ್ತಿಗೆ ಬದಲಿಗೆ ಖಾಯಂ ಮಾಡಬೇಕು.
*ಜಾತಿ ಆಧಾರಿತ ಉದ್ಯಮಗಳನ್ನು ಆಧುನಿಕ ಕಾಲಕ್ಕೆ ಅನುಗುಣವಾಗಿ ಬಲಪಡಿಸಬೇಕು.
*ಜಾತಿ ಮತ್ತು ಸಾಮಾಜಿಕ ಜನಗಣತಿಯನ್ನು ಬಹಿರಂಗಪಡಿಸಬೇಕು.
*ಅನ್ನದಾತರ ಆದಾಯ ಖಾತ್ರಿಪಡಿಸಲು ರೈತರ ಆದಾಯ ಆಯೋಗ ಸ್ಥಾಪಿಸಬೇಕು.
*ರಾಜ್ಯ ಜಿಡಿಪಿಯ ಶೇ.6 ಪಾಲು ಶಿಕ್ಷಣ,ಶೇ.3 ಪಾಲು ಆರೋಗ್ಯಕ್ಕೆ ಮೀಸಲಿಡಬೇಕು.
*ಸರ್ಕಾರಿ ಯೋಜನೆಗಳ ಸಾಮಾಜಿಕ ಮೌಲ್ಯಮಾಪನ ನಡೆಯಬೇಕು.
*ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಬೇಕು.
*ಅಸಂಘಟಿತ ಕಾರ್ಮಿಕರಿಗೆ ಜೀವಿಸಲು ವೇತನ(ಲಿವಿಂಗ್ ವೇಜ…)ನೀಡಬೇಕು.
*ಎಲ್ಲ ಖಾಸಗಿ ವಸತಿ ಬಡಾವಣೆಗಳಲ್ಲಿ ಶೇ.20ನ್ನು ಕಡಿಮೆ ದರದ ಮನೆಗಳನ್ನು ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್ ಆಗಲಿ: ವಿ.ಸೋಮಣ್ಣ
BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್
Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…
Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.