![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 28, 2020, 10:45 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಪುತ್ತೂರು: ಈ ಕೋವಿಡ್ 19 ಸೋಂಕು ಬಂದಮೇಲೆ ಎಲ್ಲವೂ ಬದಲಾಗಿದೆ.
ಅದರಲ್ಲೂ ಜನಸಾಮಾನ್ಯರ ನಡವಳಿಕೆಗಳಲ್ಲಿ ಮಹತ್ತರವಾದ ಬದಲಾವಣೆಗೆ ಈ ಸೋಂಕು ಕಾರಣವಾಗಿದೆ.
ಮನೆಯಲ್ಲಿರುವ ಮಕ್ಕಳೊಂದಿಗೆ, ಹಿರಿಯರೊಂದಿಗೆ ಹಾಗೂ ನಮ್ಮ ಪ್ರೀತಿ ಪಾತ್ರರೊಂದಿಗೆ ಅನ್ಯೋನ್ಯವಾಗಿರಲೂ ಸಾವಿರ ಸಲ ಯೋಚಿಸುವ ಪರಿಸ್ಥಿತಿಯನ್ನು ಈ ಸೋಂಕು ತಂದೊಡ್ಡಿದೆ.
ಪರಿಸ್ಥಿತಿ ಹೀಗಿರುವಾಗ ರಸಿಕ ತಾತ ಒಬ್ಬರು ಮಹಿಳೆಯೊಬ್ಬರಿಗೆ ‘ಮುತ್ತು’ ನೀಡಿ ತಮಗೆ ಕೋವಿಡ್ 19 ಸೋಂಕು ಅಂಟಿಸಿಕೊಂಡಿರುವ ಘಟನೆಯೊಂದು ಇದೀಗ ಸ್ಥಳೀಯರ ಬಾಯಲ್ಲಿ ತಮಾಷೆಯ ವಿಷಯವಾಗಿ ಹರಿದಾಡುತ್ತಿದೆ.
ಇಷ್ಟಕ್ಕೂ ಈ ಘಾಟಿ ಮುದುನ ತನ್ನ ರಸಿಕತನದಿಂದಲೇ ಊರಲ್ಲಿ ಹೆಸರುವಾಸಿ. ಹೀಗೆ ಕಂಡ ಕಂಡ ಹೆಣ್ಣುಮಕ್ಕಳ ಮೇಲೆಲ್ಲಾ ಕಣ್ಣು ಹಾಕಲು ಹೋಗಿ ಈ ತಾತ ಊರವರಿಂದ ಅದೆಷ್ಟೋ ಸಲ ಉಗಿಸಿಕೊಂಡಿದ್ದಾರೆ ಕೂಡ!
ಇದೀಗ ಕೋವಿಡ್ ಕಾಲದಲ್ಲಿ ತನ್ನ ರಸಿಕತೆಯನ್ನು ತೋರಿಸಲು ಹೋಗಿ ಈ ತಾತಪ್ಪ ತಮಗರಿವಲ್ಲದಂತೆ ಸೋಂಕು ಅಂಟಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಷಯ ಏನಂದರೆ, ತಮ್ಮ ಎಂದಿನ ರಸಿಕತೆಯಲ್ಲಿ ತಾತ ಮಹಿಳೆಯೊಬ್ಬರಿಗೆ ಮುತ್ತಿಕ್ಕಿದ್ದಾರೆ. ಆದರೆ ಆ ಮಹಿಳೆಗೆ ಕೋವಿಡ್ ಸೋಂಕು ತಗಲಿತ್ತು. ಇದನ್ನು ಅರಿಯದೆ ಕಿಸ್ಮತ್ ಪರೀಕ್ಷಿಸಲು ಹೋಗಿದ್ದ ಈ ತಾತನಿಗೂ ಇದೀಗ ಕೋವಿಡ್ ಸೋಂಕು ತಗಲಿ ಅವರೀಗ ಆಸ್ಪತ್ರೆ ಸೇರುವಂತಾಗಿದೆ.
ಒಟ್ಟಿನಲ್ಲಿ ಈ ಮೊದಲೇ ತನ್ನ ಘಾಟಿತನದಿಂದ ಊರಲ್ಲೆಲ್ಲಾ ಚಿರಪರಿಚಿತರಾಗಿದ್ದ ಈ ವ್ಯಕ್ತಿ ಇದೀಗ ಕೋವಿಡ್ ಕಾಲದಲ್ಲಿ ‘ಕಿಸ್ಮತ್’ ಪರೀಕ್ಷೆಗೆ ಪ್ರಯತ್ನಿಸಿ ಊರಿನ ಯುವಕರ ವಲಯದಲ್ಲಿ ಭರ್ಜರಿ ಚರ್ಚೆಯ ವಸ್ತುವಾಗಿದ್ದಾರೆ.
ಒಟ್ಟಿನಲ್ಲಿ ಈ ಸಾಂಕ್ರಾಮಿಕ ಕಾಲದಲ್ಲಿ ಏನೇ ಮಾಡಿದರೂ ಎಚ್ಚರಿಕೆಯಿಂದರಬೇಕು ಎಂಬ ಪಾಠವನ್ನಂತು ಈ ತಾತ ಕಲಿಯುವಂತಾಗಿದೆ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.