ಕಡಬ ತಾಲೂಕು ಘೋಷಣೆ ಹಿನ್ನೆಲೆ: ಬಿಜೆಪಿ ನೇತೃತ್ವದಲ್ಲಿ ಸಂಭ್ರಮಾಚರಣೆ
Team Udayavani, Mar 16, 2017, 2:57 PM IST
ಕಡಬ : ರಾಜ್ಯ ಬಜೆಟ್‌ನಲ್ಲಿ ಕಡಬ ತಾಲೂಕು ಅನುಷ್ಠಾನಗೊಳಿಸುವ ಸಲುವಾಗಿ ಅನುದಾನ ಒದಗಿಸಿರುವುದನ್ನು ಸ್ವಾಗತಿಸಿ ಬುಧವಾರ ಕಡಬದಲ್ಲಿ ಬಿಜೆಪಿ ನೇತೃತ್ವದಲ್ಲಿ ಪ್ರತ್ಯೇಕ ಸಂಭ್ರಮಾಚರಣೆ ನಡೆಸಲಾಯಿತು. ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷಾಚರಣೆ ಮಾಡಿದರು.
ಕಡಬ ತಾಲೂಕು ಹೋರಾಟ ಸಮಿತಿಯ ಸಂಚಾಲಕ, ಪುತ್ತೂರು ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ ಅವರು ಮಾತನಾಡಿ, ಹೊಸ ತಾಲೂಕುಗಳ ರಚನೆಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಬಜೆಟ್‌ನಲ್ಲಿ ಹಣಕಾಸು ಒದಗಿಸುವ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಮುಖ್ಯಮಂತ್ರಿಗಳು ಪ್ರತಿ ಹೊಸ ತಾಲೂಕುಗಳಿಗೆ ತಲಾ 6.5 ಕೋಟಿ ರೂ. ಅನುದಾನ ಒದಗಿಸುವುದಾಗಿ ಪ್ರಕಟಿಸಿದ್ದಾರೆ. ಅದಕ್ಕಾಗಿ ನಾವು ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂದರು.
ಬಿಜೆಪಿ ಮುಖಂಡರಾದ ಸೀತಾರಾಮ ಗೌಡ ಪೊಸವಳಿಕೆ, ಪುಲಸ್ತಾÂ ರೈ, ಗಿರೀಶ್ ಎ.ಪಿ., ಪ್ರಕಾಶ್ ಎನ್.ಕೆ., ಎ.ಬಿ. ಮನೋಹರ ರೈ, ಚಂದ್ರಶೇಖರ ನೂಜಿ, ಸತೀಶ್ ನಾಯಕ್, ಶಿವಪ್ರಸಾದ್ ರೈ ಮೈಲೇರಿ, ಪಯಾಝ್ ಕೆನರಾ, ಶಾಂತಾರಾಮ ಶೆಟ್ಟಿ ಕೇಪು, ದಯಾನಂದ ಉಂಡಿಲ, ಹರೀಶ್ ಉಂಡಿಲ, ಅಮರನಾಥ ಶೆಟ್ಟಿ ಕುಂಜತ್ತೋಡಿ, ಗೀತಾ ಗೋಪಾಲಕೃಷ್ಣ ಮುಂತಾದವರು ಹರ್ಷಾಚರಣೆಯಲ್ಲಿ ಭಾಗವಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.