ದ.ಕ.: ಮತ್ತೆ ಕಾಣಿಸಿಕೊಂಡ ಮಿದುಳುಊತ ರೋಗ
Team Udayavani, Jan 10, 2018, 6:00 AM IST
ಮಂಗಳೂರು: ಸೊಳ್ಳೆ ಕಡಿತದಿಂದ ಹರಡುವ ಜಪಾನೀಸ್ ಎನ್ಸಫಲೈಟಿಸ್ (ಮಿದುಳು ಉರಿಯೂತ) ಎಂಬ ವೈರಸ್ ಕಾಯಿಲೆ ದ.ಕ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ಏಳು ಮಂದಿಯಲ್ಲಿ ಪತ್ತೆಯಾಗಿದೆ.
ಇತ್ತೀಚೆಗೆ ಈ ರೋಗ ಲಕ್ಷಣ ಜಿಲ್ಲೆಯ ಯಾವುದೇ ಭಾಗಗಳಲ್ಲಿ ಕಂಡುಬಂದಿರಲಿಲ್ಲ. ಆದರೆ ಕಳೆದ ಡಿಸೆಂಬರ್‌ನಲ್ಲಿ ಏಕಾಏಕಿ ಜಿಲ್ಲೆಯ ಇಬ್ಬರಲ್ಲಿ ಈ ರೋಗ ಲಕ್ಷಣ ಕಂಡುಬಂದಿದ್ದು, ತತ್‌ಕ್ಷಣ ತಪಾಸಣೆಗೆ ಒಳಪಡಿಸಿದಾಗ ಜಪಾನೀಸ್ ಎನ್ಸಫಲೈಟಿಸ್ ಎಂಬುದು ಪತ್ತೆಯಾ ಗಿತ್ತು. ರೋಗಿಗಳಿಬ್ಬರಲ್ಲಿ ಪುತ್ತೂರಿನ ಸುಬ್ರಾಯ ಗೌಡ ಅವರು ಸೋಮವಾರ ಈ ಮಾರಕ ರೋಗಕ್ಕೆ ಬಲಿಯಾಗಿದ್ದಾರೆ.
ನಿರ್ಲಕ್ಷ್ಯ ಸಲ್ಲದು
ಈ ಮಾರಕ ರೋಗ ಸೊಳ್ಳೆಗಳ ಕಡಿತದ ಮೂಲಕ ಹರಡುತ್ತದೆ. ರೋಗದ ಲಕ್ಷಣಗಳು ಸಾಮಾನ್ಯ ಜ್ವರದಂತೆಯೇ ಇದ್ದು, ಮುಂಜಾಗ್ರತೆ ವಹಿಸಿ ವೈದ್ಯರನ್ನು ಸಂಪರ್ಕಿಸದೆ ಇದ್ದಲ್ಲಿ ಮೃತ್ಯು ಸಂಭವಿಸುವುದು ಸಾಧ್ಯ. ರೋಗದ ಆರಂಭಿಕ ಹಂತದಲ್ಲಿ ತಲೆನೋವು, ಕೈ-ಕಾಲು ನೋವು, ನಿಶ್ಶಕ್ತಿ ಸೇರಿದಂತೆ ಸಾಮಾನ್ಯ ಜ್ವರದ ಲಕ್ಷಣಗಳೇ ಕಂಡುಬರುತ್ತವೆ. ಇದೊಂದು ಸಾಮಾನ್ಯ ಜ್ವರ ಎಂದು ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ನಿರ್ಲಕ್ಷಿಸದೆ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.
ರಾಜ್ಯದ ಕೆಲವು ಭಾಗಗಳಲ್ಲಿ ಈ ರೋಗ ಕಂಡುಬಂದಿದ್ದರೂ ರಾಜ್ಯದೆಲ್ಲೆಡೆ ಜಪಾನೀಸ್ ಎನ್ಸಫಲೈಟಿಸ್ ರೋಗ ಪತ್ತೆ ಮಾಡುವ ಸೌಲಭ್ಯ ಇಲ್ಲ. ದ.ಕ. ಜಿಲ್ಲೆಯಲ್ಲಿ ಈ ರೋಗ ಪ್ರಕರಣಗಳು ಕಂಡುಬಾರದ ಹಿನ್ನೆಲೆಯಲ್ಲಿ ರೋಗ ಪತ್ತೆ ಮಾಡುವ ವೈದ್ಯಕೀಯ ವ್ಯವಸ್ಥೆ ರೂಪಿಸಲಾಗಿಲ್ಲ.
ಮಣಿಪಾಲದಲ್ಲಿ ತಪಾಸಣೆ, ಚಿಕಿತ್ಸೆ
ಜಪಾನೀಸ್ ಎನ್ಸಫಲೈಟಿಸ್ ರೋಗಕ್ಕೆ ನಿರ್ದಿಷ್ಟ ಔಷಧಿ ಇಲ್ಲ. ರೋಗಲಕ್ಷಣಗಳನ್ನು ಅನುಸರಿಸಿ ಚಿಕಿತ್ಸೆ ನೀಡಲಾಗುತ್ತದೆ. ರೋಗ ಲಕ್ಷಣಗಳು ಕಂಡುಬಂದಾಗ ತತ್‌ಕ್ಷಣ ವೈದ್ಯರ ಸಲಹೆ ಪಡೆಯಬೇಕು. ಈ ರೋಗ ಪರೀಕ್ಷೆ ವ್ಯವಸ್ಥೆ ಜಿಲ್ಲೆಯ ಯಾವುದೇ ಆಸ್ಪತ್ರೆಗಳಲ್ಲಿ ಇಲ್ಲವಾಗಿದ್ದು, ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮಾತ್ರ ಮಾಡಲಾಗುತ್ತದೆ.
ಇದು ಸಿಎಸ್‌ಎಫ್ ಪರೀಕ್ಷೆ (ಸೆರಬೊÅಸ್ಪೈನಲ್ ಫೂÉಯಿಡ್ ಪರೀಕ್ಷೆ) ಆಗಿದ್ದು, ಇದರಲ್ಲಿ ರೋಗ ಪತ್ತೆಗಾಗಿ ಮಿದುಳು ಬಳ್ಳಿಯ ದ್ರವ (ಬೆನ್ನಿನ ನೀರು) ತೆಗೆದು, ಪರೀಕ್ಷಿಸಲಾಗುತ್ತದೆ. ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಜಪಾನೀಸ್ ಎನ್ಸಫಲೈಟಿಸ್ ರೋಗ ಹರಡ ದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದು ಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಸೊಳ್ಳೆ ನಿಯಂತ್ರಣ ಜಾಗೃತಿ ಅಗತ್ಯ
ಜಿಲ್ಲೆಯಲ್ಲಿ ಈ ರೋಗ ಪ್ರಕರಣಗಳು ಹೆಚ್ಚು ಕಂಡುಬಂದಿಲ್ಲ. ಆದರೂ ಪರಿಸರವನ್ನು ಸ್ವತ್ಛವಾಗಿರಿಸಿ, ಸೊಳ್ಳೆ ಉತ್ಪಾದನೆ ಆಗದಂತೆ ಜನರೇ ಹೆಚ್ಚಿನ ಮುತುವರ್ಜಿ ವಹಿಸಬೇಕು. ಆರೋಗ್ಯ ಇಲಾಖೆ ವತಿಯಿಂದ ಫಾಗಿಂಗ್ ಮಾಡಲಾಗುತ್ತಿದೆ. ಸೊಳ್ಳೆಯನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
– ಡಾ| ಅರುಣ್ ಕುಮಾರ್, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.