ಆಕಾಶ ಭವನ ರುದ್ರಭೂಮಿ ಇನ್ನು ಸುಂದರ ‘ಶ್ಮಶಾನ ವನ’!
Team Udayavani, Nov 29, 2017, 12:21 PM IST
ಮಹಾನಗರ : ಸಾಮಾನ್ಯವಾಗಿ ರುದ್ರಭೂಮಿ ಅಥವಾ ಶ್ಮಶಾನ ಅಂದರೆ ನಿಷ್ಪ್ರಯೋಜಕ ಭೂಮಿ ಎಂಬ ಭಾವನೆಯಿದೆ. ಅದು ಅಂತ್ಯಕ್ರಿಯೆಗಷ್ಟೇ ಮೀಸಲಿಟ್ಟ ಜಾಗ. ಜನರೇ ಸಂಚರಿಸದ ಇಂತಹ ಶ್ಮಶಾನ ದಲ್ಲೂ ಗಿಡ-ಮರಗಳನ್ನು ಬೆಳೆಸಿ ಪರಿಸರವನ್ನು ಸಂರಕ್ಷಿಸಬೇಕು ಎಂದು ಯೋಚಿಸುವವರು ಬಹಳ ವಿರಳ. ಆ ನಿಟ್ಟಿನಲ್ಲಿ ಯುವಕರ ತಂಡವೊಂದು ಈಗ ನಗರದ ಶ್ಮಶಾನವೊಂದನ್ನು ಹಸಿರು ಮಯಗೊಳಿಸಲು ಅಣಿಯಾಗಿದೆ.
ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ಅವರ 163ನೇ ಜನ್ಮ ದಿನಾಚರಣೆ ಪ್ರಯುಕ್ತ ಅವರ ಹೆಸರಿನಲ್ಲಿ ಮಂಗಳೂರಿನ ಕೋಟಿ ಚೆನ್ನಯ ಯುವ ವೇದಿಕೆ ವತಿಯಿಂದ ಪರಿಸರವಾದಿ ಮಾಧವ ಉಳ್ಳಾಲ್ ನೇತೃತ್ವದಲ್ಲಿ ಆಕಾಶ ಭವನ ಸಮೀಪದ ಆನಂದ ನಗರದಲ್ಲಿರುವ ರುದ್ರಭೂಮಿಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವುದಕ್ಕೆ ತೀರ್ಮಾನಿಸಲಾಗಿದೆ .
ಸರಕಾರದಿಂದ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಹೊಸ ರುದ್ರಭೂಮಿ ನಿರ್ಮಾಣಗೊಂಡಿದ್ದು, ಶೀಘ್ರದಲ್ಲೇ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ. ಈ ಶ್ಮಶಾನದ ಒಂದು ಭಾಗವು ನಾರಾಯಣ ಗುರು ವನವಾಗಿ ಪರಿವರ್ತನೆಯಾಗಲಿದೆ. ನಿರ್ಮಾಣವಾಗುತ್ತಿರುವ ನಾರಾಯಣ ಗುರು ವನ ಒಂದು ಎಕರೆ ಜಾಗ ಹೊಂದಿದೆ. ಇಲ್ಲಿ 163 ಸಸಿ ನೆಡಲಾಗುತ್ತಿದೆ. ಇದ ರಲ್ಲಿ ಹಲವು ಮಾವಿನ ಸಸಿಗಳಿರಲಿವೆ. ಅಲ್ಲದೆ, ನಗರದಲ್ಲಿ ವಿಹರಿಸುವ ಪಕ್ಷಿಗಳಿಗೆ ಆಹಾರವಾಗಿಯೂ ಬೇರೆ ಬೇರೆ ಜಾತಿಯ ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತದೆ. ಉಳಿದಂತೆ ಆಕರ್ಷಣೆಗಾಗಿ ಹೂವಿನ ಗಿಡ ಗಳನ್ನು ಬೆಳೆಸಲಾಗುವುದು. ಸಸಿಗಳನ್ನು ನೆಡುವುದು ಮಾತ್ರವಲ್ಲದೆ, ಅವುಗಳ ಪೋಷಣೆ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ಕೂಡ ಸಂಘಟನೆಯೇ ನೋಡಿಕೊಳ್ಳುತ್ತದೆ. ಸುಮಾರು ನಾಲ್ಕು ವರ್ಷಗಳವರೆಗೆ ಈ ವನವನ್ನು ಪೋಷಿಸುವ ಲೆಕ್ಕಾಚಾರ ಸಂಘಟನೆಯದ್ದಾಗಿದೆ.
ತುಳಸಿವನ
‘ನಾರಾಯಣ ಗುರು ವನ’ದ ಜತೆಗೆ ತುಳಸಿ ವನ ನಿರ್ಮಾಣ ಮಾಡುವ ಯೋಜನೆ ಇದ್ದು, ಈ ನಿಟ್ಟಿನಲ್ಲಿ 50ಕ್ಕೂ ಹೆಚ್ಚಿನ ತುಳಸಿ ಗಿಡವನ್ನು ನೆಡಲಾಗುತ್ತದೆ. ಹಿಂದೂ ಸಂಪ್ರದಾಯದಂತೆ ಶವ ಸಂಸ್ಕಾರ ನೆರವೇರಿಸಲು ಬರುವವರಿಗಾಗಿ ತುಳಸಿ ಗಿಡ ನೆಡುವ ಯೋಚನೆಯನ್ನು ಕೋಟಿ ಚೆನ್ನಯ ಯುವ ವೇದಿಕೆ ಮಾಡುತ್ತಿದೆ.
ಡಿ. 3ಕ್ಕೆ ಉದ್ಘಾಟನೆ
ಆಕಾಶಭವನ ಸಮೀಪದ ಆನಂದನಗರದ ರುದ್ರಭೂಮಿಯಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ವನದ ಉದ್ಘಾಟನೆ ಡಿ. 3ರಂದು ನಡೆಯಲಿದೆ. ಕಾರ್ಯಕ್ರಮಕ್ಕೆ ಶ್ರೀ ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ, ಸಚಿವ ಯು.ಟಿ. ಖಾದರ್, ಮೇಯರ್ ಕವಿತಾ ಸನಿಲ್ ಪಾಲ್ಗೊಳ್ಳಲಿದ್ದಾರೆ. ಶ್ಮಶಾನದ ಉದ್ಘಾಟನೆ ಡಿ. 6ರಂದು ನಡೆಯಲಿದೆ.
ಕೈಜೋಡಿಸಿ
ಸಸಿ ನೆಡಲು ಹಣಕ್ಕಿಂತ ಹೆಚ್ಚು ಶ್ರಮ ಅಗತ್ಯವಿದೆ. ಈ ನಿಟ್ಟಿನಲ್ಲಿ ಪರಿಸರ ಉಳಿಸಲು ಎಲ್ಲರೂ ಕೈಜೋಡಿಸಬೇಕು. ತಲಪಾಡಿಯಿಂದ ನಂತೂರು ರಸ್ತೆಯ ಬದಿಯಲ್ಲಿ ಸಾಲುಮರದ ಯೋಜನೆ ನನ್ನಲ್ಲಿತ್ತು. ಆದರೆ ಕೈತಪ್ಪಿತು. ಜಾಗದ ಹುಡುಕಾಟದಲ್ಲಿದ್ದಾಗ ರುದ್ರಭೂಮಿಯ ಖಾಲಿ ಜಾಗ ಕಣ್ಣಿಗೆ ಬಿತ್ತು. ಬಳಿಕ ಸಮಿತಿಯನ್ನು ಸಂಪರ್ಕಿಸಿ ಅನುಮತಿ ಪಡೆದೆವು.
– ಮಾಧವ ಉಳ್ಳಾಲ್, ಪರಿಸರವಾದಿ
ಅಂತ್ಯಕ್ರಿಯೆಗೆ ಅಡ್ಡಿಯಿಲ್ಲ
ಶ್ಮಶಾನದಲ್ಲಿ ವನ ನಿರ್ಮಾಣ ಮಾಡುವುದರಿಂದ ಅಂತ್ಯಕ್ರಿಯೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ. ಅಂತ್ಯಕ್ರಿಯೆಗೆ ಪ್ರತ್ಯೇಕ ಸ್ಥಳಾವಕಾಶ ಇದೆ. ಪರಿಸರ ಉಳಿಸುವ ನಿಟ್ಟಿನಲ್ಲಿ ಮತ್ತು ಸುತ್ತಲಿನ ಪರಿಸರವನ್ನು ಹಸಿರಾಗಿಡಲು ಗಿಡ ನೆಡುತ್ತೇವೆ.
– ಆನಂದ ಪಾಂಗಳ,
ಪರಿಶಿಷ್ಟ ಜಾತಿ ಮತ್ತು ಪಂಗಡ ಹಿತರಕ್ಷಣ ಸಮಿತಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.