ಚೌತಿ ಹಬ್ಬದ ಹೊಸ್ತಾರೋಗಣೆ, ತೆನಹಬ್ಬಕ್ಕೆ ಸಜ್ಜಾಗಿದೆ ಭತ್ತದ ತೆನೆ
Team Udayavani, Aug 22, 2017, 7:20 AM IST
ಬಂಟ್ವಾಳ : ಚೌತಿ ಮತ್ತು ಕನ್ಯಾ ಮರಿಯಮ್ಮ ಹಬ್ಬದ ದಿನ ನಡೆಯುವ ತೆನೆ ಹಬ್ಬಕ್ಕೆ ತೆನೆಗೆ ದೇಶ ವಿದೇಶದಿಂದ ಬೇಡಿಕೆ ಇದೆ ಎಂದರೆ ನಂಬಲೇ ಆಗುತ್ತಿಲ್ಲವಾದರೂ ಇದು ಸತ್ಯ.
ಸಾಮಾನ್ಯವಾಗಿ ಕರಾವಳಿ ಜಿಲ್ಲೆಯಲ್ಲಿ ಹಿಂದೂ ಮತ್ತು ಕ್ರೈಸ್ತರು ಆಚರಿಸುವ ತೆನೆ ಹಬ್ಬ ಅಥವಾ ಹೊಸ್ತಾರೋಗಣೆ ಸಂದರ್ಭ ಭತ್ತದ ತೆನೆಗಾಗಿ ಹೊರ ಜಿಲ್ಲೆಗಳಿಂದ, ಹೊರ ರಾಜ್ಯಗಳಿಂದ,ವಿದೇಶದಿಂದಲೂ ಬೇಡಿಕೆ ಇದೆ ಎನ್ನುತ್ತಾರೆ ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮ ಪಚ್ಚಿನಡ್ಕ ನಿವಾಸಿ ವಿನೆಡ್ ಡಿ’ಸೋಜಾ ಅವರು.
ತೆನೆ ಸರಬರಾಜು
ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ನಡೆಯುವ ಚೌತಿ ಹಬ್ಬದ ದಿನದ ತೆನೆ ಹಬ್ಬಕ್ಕೆ, ಕ್ರೈಸ್ತ ಚರ್ಚ್‌ಗಳಲ್ಲಿ ನಡೆ ಯುವ ಕನ್ಯಾ ಮರಿಯಮ್ಮ ಹುಟ್ಟು ಹಬ್ಬಕ್ಕೆ ದೊಡ್ಡ ಮಟ್ಟದಲ್ಲಿ ಭತ್ತದ ತೆನೆ ಸರಬರಾಜು ಆಗುವುದು ಇಲ್ಲಿಂ ದಲೇ ಎಂಬುದು ಕುತೂಹಲಕಾರಿ ವಿಚಾರ.
ಕಳ್ಳಿಗೆ ಗ್ರಾಮ ಪಚ್ಚಿನಡ್ಕ ನಿವಾಸಿ ವಿಲ್ಫೆಡ್ ಡಿ’ ಸೋಜಾ ಮತ್ತು ಅರ್ಕುಳ ತುಪ್ಪೆಕಲ್ಲು ನಿವಾಸಿ ಉಮೇಶ ಸೇಮಿತರು ತಮ್ಮ ಗದ್ದೆ ಯಲ್ಲಿ ಭತ್ತದ ಪೈರನ್ನು ಇದೇ ಉದ್ದೇಶದಿಂದ ಬೆಳೆಸುತ್ತಾರೆ.ಸುಮಾರು 65ರ ಹರೆಯದ ಅವರಿಗೆ ನಿರ್ದಿಷ್ಟವಾಗಿ ಎಷ್ಟು ವರ್ಷಗಳಿಂದ ತೆನೆಯನ್ನು ನೀಡುತ್ತಾ ಬಂದಿದ್ದಾರೆ ಎಂಬುದು ಸರಿಯಾಗಿ ನೆನಪಿಲ್ಲವಂತೆ.
ಸೇಮಿತರು ಫರಂಗಿಪೇಟೆ ಸೇವಾಂಜಲಿ ಸಮಿತಿಯ ಬೇಡಿಕೆಯಂತೆ ಭತ್ತದ ಕೃಷಿಯನ್ನು ಸುಮಾರು ಒಂದೂವರೆ ದಶಕದ ಹಿಂದಿನಿಂದ ತೆನೆ ಹಬ್ಬದ ಉದ್ದೇಶದಿಂದ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಭತ್ತದ ಕೃಷಿಯ ಕುಸಿತದ ನಂತರ ನಮ್ಮಲ್ಲಿ ಭತ್ತದ ಬೆಳೆಯನ್ನು ತೆನೆ ಹಬ್ಬದ ಉದ್ದೇಶಕ್ಕೆ ಆರಂಭಿಸಿದ್ದಾಗಿ ಹೇಳುತ್ತಾರೆ.
ಚೌತಿಯ ದಿನ ವ್ಯತ್ಯಾಸವಾದಂತೆ ಬಿತ್ತನೆಯ ದಿನವೂ ವ್ಯತ್ಯಾಸ ಆಗುತ್ತದೆ 2016ರಲ್ಲಿ ಮೇ 25ರಂದು ಭತ್ತದ ಬೀಜ ಬಿತ್ತಲಾಗಿತ್ತು.
ಸುಮಾರು ಒಂದು ಎಕ್ರೆ ಜಮೀನಿನಲ್ಲಿ ಚೌತಿ ಮತ್ತು ಮರಿಯಮ್ಮ ಹಬ್ಬಕ್ಕೆ ತೆನೆ ನೀಡುವ ಉದ್ದೇಶದಿಂದಲೇ ಅವರು ಒಂದು ಬೆಳೆಯನ್ನು ಮಾಡುತ್ತಾರೆ. ಸಾವಯವ ಪದ್ದತಿಯ ಕ್ರಮದಲ್ಲಿ ಕೃಷಿ ಮಾಡಿದರೂ, ರೋಗ ಬಾಧೆ ಕಂಡಾಗ ರಸಾಯನಿಕ ಔಷಧಿ ಸಿಂಪಡಿಸುವುದು ಅವಶ್ಯವಾಗಿದೆ. ಬಿಳಿ ಜಯ ಭತ್ತದ ತಳಿವನ್ನು ಇಲ್ಲಿ ಬಳಸುತ್ತಾರೆ . ಇದು ನಿರ್ದಿಷ್ಟ ಅವಧಿಯಲ್ಲಿ ತೆನೆ ಹೊರಬಂದು ತೆನೆ ತುಂಬುವುದು. ತೆನೆಯು ಇತರ ಭತ್ತದ ತಳಿಗಿಂತ ಹೆಚ್ಚುವರಿ ಉದ್ದವನ್ನು ಹೊಂದಿರುವುದು ಇದರ ವೈಶಿಷ್ಟÂ.
ಒಂದು ಕಟ್ಟು (ಸೂಡಿ) ಪೈರಿಗೆ ಸುಮಾರು 30 ರೂ. ಮೌಲ್ಯವನ್ನು ನಿಗದಿ ಮಾಡಿದ್ದಾರೆ. ದೇವಸ್ಥಾನ, ಚರ್ಚ್‌ಗಳಿಗೆ 25 ಸೂಡಿಗಳ ಒಂದು ಕೂಟವನ್ನು ಮಾಡುತ್ತಾರೆ. ಸಾಮಾನ್ಯವಾಗಿದೇವಸ್ಥಾನಗಳಿಗೆ ಸುಮಾರು ಮೂರು ಕೂಟದಷ್ಟು ತೆನೆ ಬೇಕಾಗುತ್ತದೆ. ಹಾಗಿ ಪ್ರತೀ ಕಟ್ಟಿಗೆ (ಸೂಡಿ) 25 ರೂ.ನಂತೆ ನೀಡುತ್ತಾರೆ.
ಅಪಾರ ಬೇಡಿಕೆ
ಜಿಲ್ಲೆಯ 14 ದೇವಸ್ಥಾನಗಳಿಂದ ಅವರಿಗೆ ಈಗಾಗಲೇ ಬೇಡಿಕೆ ಬಂದಿದೆ. ಅದರಲ್ಲಿ ಪ್ರಮುಖವಾಗಿ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ, ಮಂಗಳೂರು ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ, ಕಾಟಿಪಲ್ಲದ ಶ್ರೀ ಗಣೇಶ ಮಂದಿರ, ಕೊಂಚಾಡಿ ದೇವಸ್ಥಾನಕ್ಕೆ ಕೊಂಡು ಹೋಗುತ್ತಾರೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಳೆದ ವರ್ಷ ಮತ್ತು ಈ ವರ್ಷವೂ ಬೇಡಿಕೆ ಇದೆ. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಆ. 30ರಂದು ತೆನೆ ಹಬ್ಬಕ್ಕಾಗಿ ಕೇಳಿದ್ದಾರೆ. ಉಳ್ಳಾಲ ಸೋಮನಾಥೇಶ್ವರ ದೇವಸ್ಥಾನದಿಂದಲೂ ಈ ಸಲ ಬೇಡಿಕೆ ಬಂದಿದೆ. ಜಿಲ್ಲೆಯಲ್ಲಿ ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ, ಕೃಷ್ಣನಗರ ಆಶ್ರಯದ ಗಣೇಶೋತ್ಸವ ಸಂದರ್ಭ ಹೊಸ್ತಾರೋಪಣೆಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಭತ್ತದ ತೆನೆಯನ್ನು ಕೊಂಡು ಹೋಗುತ್ತಾರೆ.
ತೆನೆ ಹಬ್ಬಕ್ಕಾಗಿ ನೀಡುವ ಭತ್ತವನ್ನು ಮೂರು ಆಥವಾ ನಾಲ್ಕು ದಿನಗಳ ಮೊದಲು ಕೊçಲು ಮಾಡಲಾಗುತ್ತದೆ. ಪ್ರಸ್ತುತ ವರ್ಷದ ಚೌತಿ ಆ. 25ರಂದು ನಡೆಯುವುದರಿಂದ ಆ. 22 ಮತ್ತು 23ರಂದು ಕೊçಲು ಮಾಡಲಾಗುತ್ತದೆ. ಅದನ್ನು ಸೂಡಿ ತಂದು ಸ್ವತ್ಛಗೊಳಿಸಿ, ಕಟ್ಟು ಮಾಡಿ ತರುವುದಕ್ಕೆ ಕನಿಷ್ಟ ಎರಡು ಮೂರು ದಿನಗಳ ಅಂತರ ಬೇಕಾಗುವುದರಿಂದ ಇದೇ ಮಂಗಳವಾರ ಕೊçಲು ಆರಂಭವಾಗುತ್ತದೆ.
ತೆನೆ ಹಬ್ಬವು ಹಿಂದೂಗಳಲ್ಲಿ ಚೌತಿ, ನೋಂಪು-(ಚೌತಿಯ ನಂತರದ 10ನೇ ದಿನ) ಷಷ್ಠಿ, ನವರಾತ್ರಿ ಸಂದರ್ಭದಲ್ಲಿ ಮನೆ ತುಂಬಿಸುವುದು ಎಂಬ ಕ್ರಮದಲ್ಲಿ ನಡೆಯುತ್ತದೆ. ಕ್ರೈಸ್ತರಲ್ಲಿ ಕನ್ಯ ಮರಿಯಮ್ಮ ಜನ್ಮ ದಿನಾಚರಣೆ ಉದ್ದೇಶವಾಗಿ ಕರಾವಳಿ ಜಿಲ್ಲೆಯಲ್ಲಿ ಹೆಚ್ಚಾಗಿ ಆಚರಿಸುತ್ತಾರೆ.
ಹಬ್ಬಗಳಿಗಾಗಿಯೇ ತೆನೆ
ಚೌತಿಹಬ್ಬಕ್ಕೆ ತೆನೆ ಬೇಕಾದರೆ ನಿರ್ದಿಷ್ಟವಾಗಿ ಸುಮಾರು 110 -120ದಿನಗಳ ಬೆಳವಣಿಗೆ ಪಡೆದು ತೆನೆ ಬಾಗಿದ ಗಿಡವನ್ನೇ ನೀಡಬೇಕಾಗಿದೆ. ಚೌತಿ ಹಬ್ಬಕ್ಕಾಗಿ ಕಳೆದ ಮೇ ತಿಂಗ ಳಂದು ಭತ್ತದ ನಾಟಿಯನ್ನು ಮಾಡಲಾಗಿದೆ. ಕನ್ಯಾಮರಿಯಮ್ಮ ಹಬ್ಬ ಮೊದಲೇ ನಿಗದಿ ಇರುವುದರಿಂದ ಅದಕ್ಕೆ ಸರಿಯಾಗಿ ದಿನ ಲೆಕ್ಕ ಹಾಕಿ ಭತ್ತದ ಕೃಷಿಯನ್ನು ಮಾಡುವುದಾಗಿ ಡಿ’ಸೋಜಾ ಹೇಳುತ್ತಾರೆ.
ಭತ್ತದ ತೆನೆಗೆ ಬೇಡಿಕೆ
ಒಂದು ಕಾಲದಲ್ಲಿ ಎಲ್ಲಿಯೂ ಭತ್ತದ ಬೆಳೆ ಇಲ್ಲದಿದ್ದ ಸಂದರ್ಭದಲ್ಲಿ ಫರಂಗಿಪೇಟೆ ಸೇವಾಂಜಲಿ ಸಂಸ್ಥೆಯು ಭತ್ತದ ತೆನೆಗಾಗಿ ನನ್ನನ್ನು ಸಂಪರ್ಕಿಸಿತ್ತು. ಅವರು ಕೊಂಡು ಹೋಗಲು ಆರಂಭಿಸಿದ ಬಳಿಕ ನಾನು ಚೌತಿ ಅವಧಿಗೆ ಪೂರಕವಾಗುವಂತೆ ಭತ್ತದ ಕೃಷಿ ಮಾಡುತ್ತಿದ್ದೆ. ಪ್ರಸ್ತುತ ಜಿಲ್ಲೆಯ ವಿವಿಧ ಧಾರ್ಮಿಕ ಕೇಂದ್ರಗಳು, ಭಜನಾ ಮಂದಿರ, ಸಂಘಸಂಸ್ಥೆಗಳಿಂದ ಭತ್ತದ ತೆನೆಯನ್ನು ತೆಗೆದುಕೊಳ್ಳುತ್ತಿದ್ದಾರೆ.
-ವಿಲ್ಫೆಡ್ ಡಿ’ಸೋಜಾ,
ಪಚ್ಚಿನಡ್ಕ, ಕೃಷಿಕ
35ವರ್ಷಗಳಿಂದ ಹೊಸ್ತಾ ರೋಗಣೆ
ಫರಂಗಿಪೇಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ 35 ವರ್ಷಗಳ ಹಿಂದೆಯೇ ಹೊಸ್ತಾರೋಗಣೆ ಆರಂಭಿಸಿತ್ತು. ಕಾಲಕ್ರಮದಲ್ಲಿ ಭತ್ತದ ಕೃಷಿ ಕಡಿಮೆ ಆಗುತ್ತಾ ಬಂದಿದ್ದು ಭತ್ತದ ತೆನೆ ಕಡಿಮೆ ಆದಾಗ ವಿಲ್ಫೆ†ಡ್ ಡಿ’ಸೋಜಾರಿಂದ ತೆನೆಯನ್ನು ಪಡೆಯುತ್ತಿದ್ದೆವು. ದಶಕದಿಂದ ಈಚೆಗೆ ನಮ್ಮದೇ ನೇತೃತ್ವದಲ್ಲಿ ತುಪ್ಪೆಕಲ್ಲಿನಲ್ಲಿ ಭತ್ತದ ಕೃಷಿ ಮಾಡಿಸಿ ಜಿಲ್ಲೆಯ 35ಕ್ಕೂ ಅಧಿಕ ಧಾರ್ಮಿಕ ಕೇಂದ್ರಗಳಿಗೆ ನೀಡುತ್ತಿದ್ದೇವೆ.
-ಕೆ. ಕೃಷ್ಣ ಕುಮಾರ್ ಪೂಂಜ,
ಕಾರ್ಯದರ್ಶಿ, ಗಣೇಶೋತ್ಸವ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಅರ್ಜಿ ತಿರಸ್ಕೃತ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.