ಕಾರ್ಯಾಚರಣೆ ಮರುದಿನವೇ ಮತ್ತೆ ರಾರಾಜಿಸಿದ ಬ್ಯಾನರ್‌


Team Udayavani, Dec 6, 2017, 4:43 PM IST

6-Dec-14.jpg

ಪುತ್ತೂರು: ಡಿವೈಡರ್‌ನ ವಿದ್ಯುತ್‌ ಕಂಬದಲ್ಲಿದ್ದ ಫ್ಲೆಕ್ಸ್‌, ಬ್ಯಾನರ್‌ ತೆರವು ಕಾರ್ಯಾಚರಣೆ ಶನಿವಾರವಷ್ಟೇ ನಡೆದಿದೆ. ಇದಾಗಿ ಎರಡು ದಿನ ಕಳೆಯುವಷ್ಟರಲ್ಲಿ ಮತ್ತೆ ಬ್ಯಾನರ್‌ಗಳು ರಾರಾಜಿಸತೊಡಗಿವೆ. 

ಇದು ಪುತ್ತೂರು ಪೇಟೆಯ ಸ್ಥಿತಿ. ಕಾನೂನು ಸಮರ್ಪಕ ಜಾರಿ ಆಗುತ್ತಿಲ್ಲ ಎನ್ನುವುದಕ್ಕೆ ಉದಾಹರಣೆ. ಬ್ಯಾನರ್‌ ಹಾಕುವವರು ಆದೇಶಕ್ಕೆ ಕಿಮ್ಮತ್ತು ಕೊಡುತ್ತಿಲ್ಲ. ಇದನ್ನು ಅರ್ಥ ಮಾಡಿಸುವ ದಾರಿ ಬಗ್ಗೆಯೂ ನಗರಸಭೆ ತಲೆ ಕೆಡಿಸಿಕೊಳ್ಳದ ಪರಿಣಾಮ ತೆರವು ಮಾಡಿದ ಮರುದಿನ ಮತ್ತೆ ಬ್ಯಾನರ್‌ ಹಾಕುವ ಕೆಲಸ ನಿರಂತರವಾಗಿ ನಡೆಯುತ್ತಿದೆ. 

ಹೆಲ್ಮೆಟ್‌, ಸೀಟ್‌ ಬೆಲ್ಟ್ ಹಾಕದವರಿಗೆ, ಹೊಗೆ ತಪಾಸಣೆ ನಡೆಸದೇ ಇದ್ದರೆ ದಂಡ ಹಾಕುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆದರೆ ಅಕ್ರಮಗಳಿಗೆ ಕಡಿವಾಣ ಹಾಕುವ ಕೆಲಸಕ್ಕೆ ಯಾವುದೇ ಉತ್ಸಾಹವಿಲ್ಲ. ಬಡವರಿಗೆ ಹೇರಿಕೆಯಾಗುವ ಕಾನೂನು ಶ್ರೀಮಂತರಿಗೇಕಿಲ್ಲ? ಕಾನೂನು ಜನ ಸಾಮಾನ್ಯರಗೆ ಸೀಮಿತವೇ? ಇದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆ.

ಪುತ್ತೂರು ಪೇಟೆಯಲ್ಲಿ ಅಕ್ರಮ ಕಟ್ಟಡಗಳ ಸಂಖ್ಯೆ ಸಾಕಷ್ಟಿದೆ. ಇದರಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದಿರುವುದು, ಅತಿಕ್ರಮಣ – ಹೀಗೆ ಸಾಕಷ್ಟು ಲೋಪಗಳಿವೆ. ಇದಕ್ಕೆ ಹೊಸ ಸೇರ್ಪಡೆ, ಡಿವೈಡರ್‌ನ ಬ್ಯಾನರ್‌ಗಳು. ಕ್ರಮ ಕೈಗೊಂಡು ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕಾದ ನಗರಸಭೆ ಮೌನ. ಆಗೊಮ್ಮೆ ಈಗೊಮ್ಮೆ ತೆರವು ಕಾರ್ಯಾಚರಣೆ ನಡೆಸಿ ಸುಮ್ಮನಾಗುತ್ತಿದೆ.

ಕೆಲಸಕ್ಕೆ ಅಡ್ಡಿ
ಡಿವೈಡರ್‌ ನಡುವಿರುವ ವಿದ್ಯುತ್‌ ಲೈಟ್‌ಗಳು ಸಾಕಷ್ಟು ಬಾರಿ ಕೈಕೊಡುತ್ತವೆ. ನಗರಸಭೆ ತುರ್ತು ಕಾಮಗಾರಿಗೆ ಮುಂದಾಗುತ್ತವೆ. ಇಂತಹ ಸಂದರ್ಭ ಬ್ಯಾನರ್‌, ಧ್ವಜಗಳು ವಿದ್ಯುತ್‌ ಕಂಬ ಏರಲು ಅಡ್ಡಿಯಾಗುತ್ತವೆ. ರಾತ್ರಿ ವೇಳೆಯಂತೂ ಇಂತಹ ಅಡಚಣೆ ಎದುರಾದರೆ, ಕಾರ್ಮಿಕರು ಅರ್ಧದಲ್ಲೇ ಕೆಲಸ ಬಿಟ್ಟು ಹೋಗುವಂತಾಗುತ್ತದೆ.

ಪುನರಾವರ್ತನೆ ಏಕೆ?
ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್‌ ಹಾಕಿದರೆ, ಕಾರ್ಯಕ್ರಮ ಮುಗಿದ ತಕ್ಷಣ ತೆರವು ಮಾಡುವ ಜವಾಬ್ದಾರಿ ಸಂಘಟಕರದ್ದು. ಅನುಮತಿ ಪಡೆದುಕೊಂಡೇ ಬ್ಯಾನರ್‌ ಹಾಕಬೇಕೆಂಬ ಕರಾರಿದೆ. ಇದೇ ರೀತಿ ಡಿವೈಡರ್‌ನ ವಿದ್ಯುತ್‌ ಕಂಬಗಳಿಗೂ ನಿಯಮವಿದೆ. ಆದರೆ ಕಾರ್ಯಕ್ರಮ ಮುಗಿದ ಬಳಿಕ ನಗರಸಭೆಯೇ ತೆರವು ಮಾಡುತ್ತದೆ ಎಂಬ ಉದಾಸೀನವೂ ಇದರ ಹಿಂದಿರಬಹುದು. ಪದೇ ಪದೇ ಬ್ಯಾನರ್‌ ಹಾಕುತ್ತಿದ್ದರೂ, ನಗರಸಭೆ ಮೌನವಾಗಿರುವುದು ಪುನರಾವರ್ತನೆಗೆ ಕಾರಣ ಎನ್ನಲಾಗಿದೆ.

ಬೇಕಿದೆ ಶಾಶ್ವತ ಪರಿಹಾರ
ಡಿವೈಡರ್‌ ನಡುವಿರುವ ಖಾಲಿ ಜಾಗದಲ್ಲಿ ಜಾಹೀರಾತು ಫಲಕ ಅಳವಡಿಸಲು ಅವಕಾಶ ಇದೆ. ಆದರೆ ಅದಕ್ಕೆ ಕೆಲ ಮಾನದಂಡಗಳಿವೆ. ನಗರಸಭೆ ಅನುಮತಿ ಪಡೆದುಕೊಂಡು, ವಾಹನಗಳ ಸಂಚಾರಕ್ಕೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ರಸ್ತೆಗೆ ಅಡ್ಡವಾಗಿ ಫಲಕ ಹಾಕುವಂತಿಲ್ಲ. ಈಗ ಇರುವ ಎಲ್ಲ ಬ್ಯಾನರ್‌ಗಳು ರಸ್ತೆಗೆ ಅಡ್ಡವಾಗೇ ಇವೆ. ಇದಕ್ಕೆ ನಗರಸಭೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು, ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂಬ ಆಗ್ರಹ ಸಾರ್ವಜನಿಕರದ್ದು.

ಏಕೆ ಅಪಾಯ?
ಡಿವೈಡರ್‌ನಲ್ಲಿ ಫ್ಲೆಕ್ಸ್‌, ಬ್ಯಾನರ್‌, ಧ್ವಜ ಅಳವಡಿಸಿದರೆ ಎದುರಾಗುವ ಅಪಾಯದ ಬಗ್ಗೆ ‘ಸುದಿನ’ ಸಾಕಷ್ಟು ಬಾರಿ ವರದಿ ಪ್ರಕಟಿಸಿದೆ. ಬ್ಯಾನರ್‌ನ ಮೇಲ್ಭಾಗ ಮಾತ್ರ ಕಟ್ಟಲಾಗುತ್ತದೆ. ಇದು ಗಾಳಿಗೆ ವಾಲಾಡುತ್ತಾ, ದ್ವಿಚಕ್ರ ವಾಹನ ಸವಾರರ ಮುಖಕ್ಕೆ ಬಡಿಯುತ್ತದೆ. ಒಂದು ವೇಳೆ ಕೆಳಭಾಗದಿಂದಲೂ ಕಟ್ಟಿದ್ದರೆ, ಸ್ವಲ್ಪ ದಿನದಲ್ಲೇ ಗಾಳಿಯ ಒತ್ತಡಕ್ಕೆ ಮುರಿದು ಬೀಳುತ್ತದೆ. ಇದಕ್ಕೆ ಉದಾಹರಣೆ, ಕಂಬದ ಬದಿಯಲ್ಲೇ ರಾಶಿ ಬಿದ್ದಿರುವ ಬ್ಯಾನರ್‌ಗಳು. ದ್ವಿಚಕ್ರ ವಾಹನ ಸವಾರರ ಹಿತ ಕಾಯಬೇಕಾದ ಜವಾಬ್ದಾರಿ ನಗರಸಭೆ ಮೇಲಿದೆ.

ಶಾಶ್ವತ ಪರಿಹಾರಕ್ಕೆ ಚಿಂತನೆ
ಡಿವೈಡರ್‌ ವಿದ್ಯುತ್‌ ಕಂಬದಲ್ಲಿರುವ ಬ್ಯಾನರ್‌ಗಳು ಪುತ್ತೂರು ಪೇಟೆಯ ಅಂದಗೆಡಿಸುತ್ತಿವೆ. ಮಾತ್ರವಲ್ಲ ಇದು ದ್ವಿಚಕ್ರ ಸವಾರರಿಗೆ ತುಂಬಾ ಅಪಾಯಕಾರಿ. ಈ ಹಿನ್ನೆಲೆಯಲ್ಲಿ ಈಗಾಗಲೇ ಬ್ಯಾನರ್‌ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಆದರೆ ಮತ್ತೆ ಪುನಃ ಬ್ಯಾನರ್‌ ಹಾಕಲಾಗಿದೆ. ಈ ಬಗ್ಗೆ ಶಾಶ್ವತ ಪರಿಹಾರ ಕೈಗೊಳ್ಳಲು ಚಿಂತನೆ ನಡೆಸುತ್ತಿದ್ದೇವೆ.
ಜಯಂತಿ ಬಲ್ನಾಡ್‌,
  ಅಧ್ಯಕ್ಷೆ, ಪುತ್ತೂರು ನಗರಸಭೆ

ಗಣೇಶ್‌ ಎನ್‌. ಕಲ್ಲರ್ಪೆ 

ಟಾಪ್ ನ್ಯೂಸ್

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

Forest

2 ವರ್ಷಗಳಲ್ಲಿ ಕರ್ನಾಟಕದಲ್ಲಿ 459 ಚ.ಕಿ.ಮೀ. ಅರಣ್ಯ ನಾಶ

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

1-vvv

Virtual university ಸ್ಥಾಪಿಸಿ: ಚಿದಾನಂದ ಗೌಡ ಒತ್ತಾಯ..ಏನಿದು?

1-ausi

Australia; ‘ವನ್‌ ಡೇ ಕಪ್‌’ಗೆ ಡೀನ್‌ ಜೋನ್ಸ್‌  ಹೆಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2(1

Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್‌ ಆಕರ್ಷಣೆ!

1

Belthangady: ಕಾನನ ವಾಸಿಗಳಿಗೆ ಮೆಸ್ಕಾಂ ಬೆಳಕು!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Belthangady: ಅಪಘಾತದಲ್ಲಿ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ಮಾಡಿದ್ದ ಶಿಕ್ಷಕಿ ಸಾವು

Belthangady: 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

Forest

2 ವರ್ಷಗಳಲ್ಲಿ ಕರ್ನಾಟಕದಲ್ಲಿ 459 ಚ.ಕಿ.ಮೀ. ಅರಣ್ಯ ನಾಶ

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.