ಹೊಯಿಗೆಬೈಲ್: ರಾಜಕಾಲುವೆಯ ತಡೆಗೋಡೆ, ಮನೆಯ ಆವರಣ ಗೋಡೆ ಕುಸಿತ
Team Udayavani, Jun 22, 2018, 12:13 PM IST
ಮಹಾನಗರ: ಅಶೋಕ ನಗರದ ಹೊಯಿಗೆಬೈಲ್‌ನಲ್ಲಿ ರಾಜಕಾಲುವೆಯ ತಡೆಗೋಡೆ ಹಾಗೂ ಮನೆಯೊಂದರ ಆವರಣ ಗೋಡೆ ಕುಸಿದು ಬಿದ್ದ ಘಟನೆ ಗುರುವಾರ ಸಂಭವಿಸಿದೆ. ಶೆರಿ ಡಿ’ಸೋಜಾ ಅವರ ಎರಡಂತಸ್ತಿನ ಮನೆಯ ಆವರಣ ಗೋಡೆ ಇದಾಗಿದ್ದು, ಬೆಳಗ್ಗೆ 6 ಗಂಟೆ ವೇಳೆಗೆ ದಿಢೀರನೆ ಕುಸಿದಿದೆ. ಇದರಿಂದ ಮನೆಯ ಅಡಿಪಾಯದ ತನಕವೂ ಹಾನಿ ಉಂಟಾಗಿದೆ.
13 ವರ್ಷಗಳ ಹಿಂದೆ 10- 12 ಎತ್ತರಕ್ಕೆ ರಾಜ ಕಾಲುವೆಯ ತಡೆಗೋಡೆಯಾಗಿ ನಿರ್ಮಾಣ ಮಾಡಲಾಗಿತ್ತು. ಧಾರಾಕಾರವಾಗಿ ಸುರಿದ ಮಳೆಯ ಕಾರಣ ಸುಮಾರು 40 ಅಡಿ ಉದ್ದಕ್ಕೆ ಭೂ ಕುಸಿತ ಸಂಭವಿಸಿದೆ. ತಡೆ ಗೋಡೆಯ ಕಲ್ಲುಗಳು ಮಣ್ಣು ಸಮೇತ ಕುಸಿದ ಕಾರಣ ಮನೆಯಂಗಳದ ಹೂಗಿಡಗಳು ನಾಶವಾಗಿವೆ.
ಮಹಾನಗರ ಪಾಲಿಕೆಯ ಸ್ಥಳೀಯ ಕಾರ್ಪೊರೇಟರ್ ರಾಧಾಕೃಷ್ಣ ಮತ್ತು ಪಾಲಿಕೆಯ ಎಂಜಿನಿಯರ್ ನಿತ್ಯಾನಂದ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಾಯದ ಸೂಚನೆ ಇರುವುದರಿಂದ ಮಧ್ಯಾಹ್ನ ಬಳಿಕ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮನೆ ತೆರವು ಮಾಡಲು ಸೂಚನೆ ನೀಡಿದ್ದಾರೆ.
ಮರಳಿನ ಚೀಲ ಇರಿಸಿ ತಾತ್ಕಾಲಿಕ ಪರಿಹಾರ
ಮಳೆಗಾಲ ಆಗಿರುವುದರಿಂದ ಹಾಗೂ ರಾಜ ಕಾಲುವೆಯಲ್ಲಿ ನೀರು ಹರಿಯುತ್ತಿರುವುದರಿಂದ ಮೂರು ತಿಂಗಳ ಕಾಲ ಶಾಶ್ವತ ತಡೆಗೋಡೆ ಕಾಮಕಾರಿ ನಡೆಸುವಂತಿಲ್ಲ. ಹಾಗಾಗಿ ತಾತ್ಕಾಲಿಕವಾಗಿ ಮರಳಿನ ಚೀಲಗಳನ್ನಿಟ್ಟು ತಡೆಗೋಡೆಯನ್ನು ನಿರ್ಮಿಸಲು ಸೂಚಿಸಲಾಗಿದೆ ಎಂದು ಕಾರ್ಪೊರೇಟರ್ ರಾಧಾಕೃಷ್ಣ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.