Mangaluru ರಕ್ಷಣೆಗಿದ್ದ “ತಡೆಗೋಡೆ’ಯೇ ಜೀವ ಕಸಿಯುತ್ತಿದೆ!

Team Udayavani, Jun 27, 2024, 6:39 AM IST

Mangaluru ರಕ್ಷಣೆಗಿದ್ದ “ತಡೆಗೋಡೆ’ಯೇ ಜೀವ ಕಸಿಯುತ್ತಿದೆ!

ಮಂಗಳೂರು: ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಮದನಿನಗರದಲ್ಲಿ ಕಾಂಪೌಂಡ್‌ ಕುಸಿದು ಬಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಕರಾವಳಿಯನ್ನು ಬೆಚ್ಚಿ ಬೀಳಿಸಿದೆ.

ಭೂ ಕುಸಿತ, ಕೃತಕ ನೆರೆ, ಗುಡ್ಡ ಜರಿತ ಮೊದಲಾದ ಕಾರಣಗಳಿಗಾಗಿ ಮಳೆ ಬಂದರೆ ನಿದ್ದೆಯಿಲ್ಲದೆ ರಾತ್ರಿ ಕಳೆಯುವವರು ಕರಾವಳಿ ಭಾಗದಲ್ಲಿ ಸಾಕಷ್ಟಿದ್ದಾರೆ.

ಮಂಗಳೂರು ನಗರ- ಗ್ರಾಮಾಂತರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಆತಂಕದ ಸ್ಥಿತಿಯೇ ಇದೆ. ಅದರಲ್ಲೂ ಇಳಿಜಾರು ಪ್ರದೇಶದಲ್ಲಿ ಮನೆ ಕಟ್ಟಿ ಅದರ ಮೇಲೆ-ಕೆಳಗೆ ಮನೆ ಇರುವ ಕಾರಣದಿಂದ ಕಾಂಪೌಂಡ್‌ ಗೋಡೆ ನಿರ್ಮಿಸಿದ ಹಲವು ದೃಶ್ಯವನ್ನು ನಗರ-ಗ್ರಾಮಾಂತರ ಭಾಗದಲ್ಲಿ ಈಗಲೂ ಕಾಣಬಹುದು. ಮದನಿನಗರದಲ್ಲಿ ಸಂಭವಿಸಿದ ದುರಂತಕ್ಕೂ ಇಂಥ ಇಳಿಜಾರು ಪ್ರದೇಶದ ಕಾಂಪೌಂಡ್‌ ಕಾರಣ.

ಇಂಥದ್ದೇ ಘಟನೆ ನಡೆಯುವ ಸನ್ನಿವೇಶ ವಿವಿಧ ಭಾಗಗಳಲ್ಲಿದ್ದು, ಸ್ಥಳೀಯವಾಗಿ ಇದು ಆತಂಕಕ್ಕೂ ಕಾರಣವಾಗಿದೆ. ಮನೆ ಪರಿಸರದಲ್ಲಿ ಇಂತಹ ಅಪಾಯಕಾರಿ ಸನ್ನಿವೇಶ ಇದ್ದರೆ ತತ್‌ಕ್ಷಣವೇ ಮಳೆಗಾಲದಲ್ಲಿ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಸ್ಥಳೀಯ ಆಡಳಿತ ವ್ಯವಸ್ಥೆಗೆ ಈ ಬಗ್ಗೆ ದೂರು ನೀಡಿ ಸಂಬಂಧಪಟ್ಟವರು ಸ್ಥಳಾಂತರವಾದರೆ ಉತ್ತಮ.

ಗುಡ್ಡ ಕುಸಿದ ಕೆಲವು ದುರಂತಗಳು
2022ರ ಜು. 6ರಂದು ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ಹೆನ್ರಿ ಕಾರ್ಲೊ ಅವರಿಗೆ ಸೇರಿದ ಗುಡ್ಡ ಕುಸಿದು ಮನೆಯೊಂದಕ್ಕೆ ಬಿದ್ದ ಪರಿಣಾಮ ಕೇರಳ ಮೂಲದ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು.

2023ರ ಜು. 7ರಂದು ಸಜೀಪಮುನ್ನೂರು ಗ್ರಾಮದ ನಂದಾವರ ಕಟ್ಲೆಮಾರ್‌ ಗುಂಪುಮನೆಯಲ್ಲಿ ಬೃಹತ್‌ ಗುಡ್ಡವೊಂದು ಮನೆಯೊಂದರ ಮೇಲೆ ಬಿದ್ದು, ಮಹಮ್ಮದ್‌ ಅವರ ಪತ್ನಿ ಝರೀನಾ(49) ಹಾಗೂ ಅವರ ಪುತ್ರಿ ಶಫಾ (20) ಮೃತಪಟ್ಟಿದ್ದರು. 2020 ಜು.5ರಂದು ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಗುರುಪುರ ಗ್ರಾ.ಪಂ. ವ್ಯಾಪ್ತಿಯ ಮಠದ ಗುಡ್ಡೆ (ಬಂಗ್ಲೆ ಗುಡ್ಡೆ )ಯಲ್ಲಿ ಸಂಭವಿಸಿತ್ತು. ಗುರುಪುರ ತಾರಿಕರಿಯ ನಿವಾಸಿ ಸಫಾÌನ್‌ (16) ಮತ್ತು ಸಹಲಾ (10) ಮೃತಪಟ್ಟವರು.

ತಡೆಗೋಡೆ ದುರಂತಗಳ ಸರಮಾಲೆ
-ಮನೆಯ ಮೇಲೆ ಸುಮಾರು 20 ಅಡಿ ಎತ್ತರದಲ್ಲಿರುವ ಇನ್ನೊಂದು ಮನೆಯ ಆವರಣ ಗೋಡೆ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಮಂಗಳೂರಿನ ಪಡೀಲ್‌ ಬಳಿಯ ಕೊಡಕ್ಕಲ್‌ನ ಶಿವನಗರದಲ್ಲಿ 2019ರ ಸೆ.8ರಂದು ರಾತ್ರಿ ಸಂಭವಿಸಿತ್ತು. ವರ್ಷಿಣಿ (9) ಹಾಗೂ ವೇದಾಂತ್‌ (7) ಮೃತಪಟ್ಟಿದ್ದರು. ಆವರಣ ಗೋಡೆ ಕುಸಿದಿರುವ ರಭಸಕ್ಕೆ ಮನೆಯ ಆರ್ಧಭಾಗ ಸಂಪೂರ್ಣ ನೆಲಸಮವಾಗಿತ್ತು. -ಪುತ್ತೂರು ನಗರ ಹೆದ್ದಾರಬೈಲಿನಲ್ಲಿ 2018 ಜು.7ರಂದು ಆವರಣ ಗೋಡೆ ಕುಸಿದು ಬಿದ್ದು ಧನುಷ್‌ (11), ಪಾರ್ವತಿ (65) ಮೃತಪಟ್ಟಿದ್ದರು. -ಶಾಲೆಯ ಕಾಂಪೌಂಡ್‌ ಗೋಡೆ ಕುಸಿದು ಉಳ್ಳಾಲ ನ್ಯೂಪಡು³ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಶಾಜಿಯಾ (7) ಮೃತಪಟ್ಟ ಘಟನೆ 2024 ಮೇ 20ರಂದು ಸಂಭವಿಸಿತ್ತು. ಶಾಲೆಯ ಗೇಟಿನ ಬಳಿ ಆಟವಾಡುತ್ತಿದ್ದಾಗ ದುರ್ಘ‌ಟನೆ ಸಂಭವಿಸಿತ್ತು. -2014ರಲ್ಲಿ ದೇರೆಬೈಲ್‌ ಬಳಿ ಬಹುಮಹಡಿ ಕಟ್ಟಡವೊಂದರ ನಿರ್ಮಾಣ ಕಾರ್ಯದಲ್ಲಿ ನಿರತವಾಗಿದ್ದ ವೇಳೆ ರಿಟೈನಿಂಗ್‌ ವಾಲ್‌ ಕುಸಿದು ಓರ್ವ ಮೃತಪಟ್ಟಿದ್ದರು.
-ಬಂಟ್ಸ್‌ಹಾಸ್ಟೆಲ್‌ ಸಮೀಪದ ಕರಂಗಲ್ಪಾಡಿ ಜಂಕ್ಷನ್‌ ಬಳಿ 2020 ಫೆ.28ರಂದು ಮಧ್ಯಾಹ್ನ ನಿರ್ಮಾಣ ಹಂತದ ಬಹು ಮಹಡಿ ಕಟ್ಟಡದ ತಡೆಗೋಡೆ ಸಮೇತ ಭೂಕುಸಿತ ಸಂಭವಿಸಿ ಕಾರ್ಮಿಕರಾದ ಬಾಗಲಕೋಟೆಯ ಭೀಮೇಶ್‌ (30) ಮತ್ತು ಪಶ್ಚಿಮ ಬಂಗಾಲದ ಮಸ್ರಿಗುಲ್‌ (25) ಸಾವನ್ನಪ್ಪಿದ್ದರು.
-2020ರಲ್ಲಿ ಪುತ್ತೂರು ಪರ್ಲಡ್ಕದಲ್ಲಿ ಕಾಂಪೌಂಡ್‌ ಗೋಡೆ ಕುಸಿದು ವಸಂತಿ (49) ಮೃತಪಟ್ಟಿದ್ದರು.

ಟಾಪ್ ನ್ಯೂಸ್

CM,DCM ಬಗ್ಗೆ ಪದೇ ಪದೆ ಹೇಳಿಕೆ ಬೇಡ ; ಮೀರಿದರೆ ಶಿಸ್ತು ಕ್ರಮ: ಡಿಕೆಶಿ

CM,DCM ಬಗ್ಗೆ ಪದೇ ಪದೆ ಹೇಳಿಕೆ ಬೇಡ ; ಮೀರಿದರೆ ಶಿಸ್ತು ಕ್ರಮ: ಡಿಕೆಶಿ

Jaishankar

SCO ಶೃಂಗಕ್ಕೆ ಪ್ರಧಾನಿ ಬದಲಿಗೆ ಸಚಿವ ಜೈಶಂಕರ್‌

Sullia ವಿದೇಶದಿಂದ ಬರಲು ಯುವಕನಿಗೆ ನೆರವಾದ ಸಂಸದ ಬ್ರಿಜೇಶ್‌ ಚೌಟ

Sullia ವಿದೇಶದಿಂದ ಬರಲು ಯುವಕನಿಗೆ ನೆರವಾದ ಸಂಸದ ಬ್ರಿಜೇಶ್‌ ಚೌಟ

Udupi “ದೊಡ್ಡ ಸಾಮಗರ ನಾಲ್ಮೊಗ’ ಗ್ರಂಥ ಲೋಕಾರ್ಪಣೆ

Udupi “ದೊಡ್ಡ ಸಾಮಗರ ನಾಲ್ಮೊಗ’ ಗ್ರಂಥ ಲೋಕಾರ್ಪಣೆ

Student ಇನ್‌ಸ್ಪಾಯರ್‌ ಅವಾರ್ಡ್‌ ಸ್ಪರ್ಧೆ: ಕಾರ್ಕಳದ ಮೂವರು ರಾಷ್ಟ್ರಮಟ್ಟಕ್ಕೆ

Student ಇನ್‌ಸ್ಪಾಯರ್‌ ಅವಾರ್ಡ್‌ ಸ್ಪರ್ಧೆ: ಕಾರ್ಕಳದ ಮೂವರು ರಾಷ್ಟ್ರಮಟ್ಟಕ್ಕೆ

ತೀವ್ರವಾಗಿ ಉದುರುತ್ತಿದೆ ಎಳೆ ಅಡಿಕೆ

ತೀವ್ರವಾಗಿ ಉದುರುತ್ತಿದೆ ಎಳೆ ಅಡಿಕೆ; ಕೃಷಿಕರಲ್ಲಿ ಆತಂಕ

Lokayukta ಭೂ ಮಾಪನ ಅಧಿಕಾರಿ, ಸರ್ವೇಯರ್‌ ಮನೆ, ಕಚೇರಿಗೆ ಲೋಕಾಯುಕ್ತ ಶೋಧ

Lokayukta ಭೂ ಮಾಪನ ಅಧಿಕಾರಿ, ಸರ್ವೇಯರ್‌ ಮನೆ, ಕಚೇರಿಗೆ ಲೋಕಾಯುಕ್ತ ಶೋಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta ಭೂ ಮಾಪನ ಅಧಿಕಾರಿ, ಸರ್ವೇಯರ್‌ ಮನೆ, ಕಚೇರಿಗೆ ಲೋಕಾಯುಕ್ತ ಶೋಧ

Lokayukta ಭೂ ಮಾಪನ ಅಧಿಕಾರಿ, ಸರ್ವೇಯರ್‌ ಮನೆ, ಕಚೇರಿಗೆ ಲೋಕಾಯುಕ್ತ ಶೋಧ

Rain ಕರಾವಳಿಯಲ್ಲಿ ಬಿಡುವು ನೀಡಿದ ಮಳೆ

Rain ಕರಾವಳಿಯಲ್ಲಿ ಬಿಡುವು ನೀಡಿದ ಮಳೆ

Ivan D’Souza”ನೀಟ್‌’ನಿಂದ ರಾಜ್ಯ ಹೊರಗೆ ಬರಲು ನಿಲುವಳಿ ಸೂಚನೆ

Ivan D’Souza”ನೀಟ್‌’ನಿಂದ ರಾಜ್ಯ ಹೊರಗೆ ಬರಲು ನಿಲುವಳಿ ಸೂಚನೆ

Captain Brijesh Chowta ಹಿಂದುತ್ವದ ಆಧಾರದಲ್ಲಿ ವಿಕಸಿತ ದಕ್ಷಿಣ ಕನ್ನಡ

Captain Brijesh Chowta ಹಿಂದುತ್ವದ ಆಧಾರದಲ್ಲಿ ವಿಕಸಿತ ದಕ್ಷಿಣ ಕನ್ನಡ

dc

Electrical failure: ವರದಿ ನೀಡುವಂತೆ ಮೆಸ್ಕಾಂ ಎಂ.ಡಿ.ಗೆ ಜಿಲ್ಲಾಧಿಕಾರಿ ಸೂಚನೆ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

CM,DCM ಬಗ್ಗೆ ಪದೇ ಪದೆ ಹೇಳಿಕೆ ಬೇಡ ; ಮೀರಿದರೆ ಶಿಸ್ತು ಕ್ರಮ: ಡಿಕೆಶಿ

CM,DCM ಬಗ್ಗೆ ಪದೇ ಪದೆ ಹೇಳಿಕೆ ಬೇಡ ; ಮೀರಿದರೆ ಶಿಸ್ತು ಕ್ರಮ: ಡಿಕೆಶಿ

1-ddddd

Delhi ಮುಂಗಾರಿನ ಅಬ್ಬರ: ಮೃತರ ಸಂಖ್ಯೆ 14ಕ್ಕೆ ಏರಿಕೆ

Jaishankar

SCO ಶೃಂಗಕ್ಕೆ ಪ್ರಧಾನಿ ಬದಲಿಗೆ ಸಚಿವ ಜೈಶಂಕರ್‌

Sullia ವಿದೇಶದಿಂದ ಬರಲು ಯುವಕನಿಗೆ ನೆರವಾದ ಸಂಸದ ಬ್ರಿಜೇಶ್‌ ಚೌಟ

Sullia ವಿದೇಶದಿಂದ ಬರಲು ಯುವಕನಿಗೆ ನೆರವಾದ ಸಂಸದ ಬ್ರಿಜೇಶ್‌ ಚೌಟ

J-P-Nadda

BJP ಅಧ್ಯಕ್ಷ: ಮತ್ತೆ ನಡ್ಡಾ ಅವಧಿ ವಿಸ್ತರಣೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.