ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ
Team Udayavani, Jan 24, 2018, 12:47 PM IST
ಮಂಗಳೂರು: ದೇಶದಲ್ಲಿ ಕಾಂಗ್ರೆಸ್ ಆಡಳಿತವಿರುವ ಏಕೈಕ ದೊಡ್ಡ ರಾಜ್ಯ ವಾದ ಕರ್ನಾಟಕದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸೀಟುಗಳನ್ನು ಗೆಲ್ಲುವ ಮೂಲಕ ಚಾರಿತ್ರಿಕ ಜಯ ದಾಖಲಿಸಲಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿಯೇ ಗೆದ್ದು ಬರುವುದು ಖಚಿತ ಎಂದು ಕೇಂದ್ರ ಮಾನವ ಸಂಪದ ಸಚಿವ ಹಾಗೂ ಬಿಜೆಪಿ ಕರ್ನಾಟಕ ಉಸ್ತುವಾರಿ ಪ್ರಕಾಶ್ ಜಾಬ್ಡೇಕರ್ ಹೇಳಿದರು.
ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳ ವಾರ ಆಯೋಜಿಸಲಾದ ಪಕ್ಷದ ಜಿಲ್ಲಾ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಂದಿನ ಚುನಾವಣೆ ಕೇವಲ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿ ಯಲ್ಲ. ಎರಡು ಸಂಸ್ಕೃತಿಗಳ ನಡುವಿನ ಹೋರಾಟ. ಹಣ, ಜಾತಿ ಮತ್ತು ಕೋಮು ತುಷ್ಟೀಕರಣದ ಆಧಾರದಲ್ಲಿಯೇ ರಾಜಕೀಯ ಮಾಡುವ ಕಾಂಗ್ರೆಸ್ ಮತ್ತು ಅಭಿ ವೃದ್ಧಿ ಯೊಂದನ್ನೇ ಮಂತ್ರವನ್ನಾಗಿಸಿಕೊಂಡ ಬಿಜೆಪಿ ಪಕ್ಷದ ನಡುವಿನ ಹೋರಾಟ ಆಗ ಲಿದೆ. ಅಪರಾಧದಲ್ಲಿ ರಾಜ್ಯ ಅಗ್ರಸ್ಥಾನ ದಲ್ಲಿರುವುದು ಸಿದ್ದರಾಮಯ್ಯ ಸರಕಾರದ ಸಾಧನೆ ಎಂದರು.
ಚಹಾ ಮಾರುವವರು ಪ್ರಧಾನಿ ಆಗುವುದು, ದಲಿತ ಸಮುದಾಯದ ವ್ಯಕ್ತಿಯೊಬ್ಬರು ರಾಷ್ಟ್ರಪತಿ ಆಗುವುದು, ಕೃಷಿಕರೊಬ್ಬರು ಉಪ ರಾಷ್ಟ್ರಪತಿ ಆಗುವುದು ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಧ್ಯ. ಕಾಂಗ್ರೆಸ್ ವಿಭಜಿಸಿ ಆಳುವ ನೀತಿಯನ್ನೇ ಅನುಸರಿಸುತ್ತದೆಯೇ ಹೊರತು ವಿಕಾಸದ ಮಾತನಾಡುವುದಿಲ್ಲ. ಈಗ ಸಿದ್ದರಾಮಯ್ಯ ಎಸ್‌ಡಿಪಿಐ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದರು.
ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಕೇಂದ್ರ ಸರಕಾರ 1,000 ಕೋಟಿ ರೂ. ಬಿಡುಗಡೆ ಮಾಡಿದ್ದರೂ ರಾಜ್ಯ ಸರಕಾರ ಮಾತ್ರ ಭೂಸ್ವಾಧೀನಪಡಿ ಸಿಲ್ಲ. ಕುಲಶೇಖರ-ಕಾರ್ಕಳ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಹಣ ಬಿಡುಗಡೆ ಯಾಗಿ ದ್ದರೂ ಭೂ ಸ್ವಾಧೀನ ಮಾಡಿಲ್ಲ. ಈ ಮೂಲಕ ಎಲ್ಲ ಅಭಿವೃದ್ಧಿ ಚಟುವಟಿಕೆಗಳಿಗೆ ರಾಜ್ಯ ಸರಕಾರ ಅಡ್ಡಗಾಲಾಗಿದೆ ಎಂದು ದೂರಿದರು.
28 ದಿನದಲ್ಲಿ 5 ಕೊಲೆ-ಇದು ಉಸ್ತುವಾರಿ ಸಚಿವರ ಆಡಳಿತಕ್ಕೆ ಕನ್ನಡಿ: ಸಂಸದ ನಳಿನ್
ಸಂಸದ ನಳಿನ್ ಕುಮಾರ್ ಕಟೀಲು ಮಾತ ನಾಡಿ, ಮಂಗಳೂರು ನಗರ ವ್ಯಾಪ್ತಿಯಲ್ಲಿಯೇ ಕೇವಲ 28 ದಿನಗಳಲ್ಲಿ 5 ಹತ್ಯೆಗಳಾಗಿವೆ. ಕಾಂಗ್ರೆಸ್ ಆಡಳಿತದ ವೇಳೆ ಜೈಲಿನಲ್ಲಿಯೇ ಡಬ್ಬಲ್ ಮರ್ಡರ್, ಗಲಭೆಗಳು ನಡೆದಿವೆ. ಡ್ರಗ್ಸ್ ಹಾಗೂ ಮರಳು ಮಾಫಿಯಾವೇ ಜಿಲ್ಲೆ ಯಲ್ಲಿ ಅಧಿಕವಾಗಿದೆ. ಜನರು ನೆಮ್ಮದಿಯಿಂದ ಬದುಕುವುದೇ ಕಷ್ಟವಾಗಿದೆ. ಕೆಲವೇ ತಿಂಗಳಿನಲ್ಲಿ ಎಲ್ಲ ದಕ್ಷ ಅಧಿಕಾರಿಗಳನ್ನು ವರ್ಗ ಮಾಡ ಲಾಗಿದೆ. ಇದು ಉಸ್ತುವಾರಿ ಹಾಗೂ ಇನ್ನೊಬ್ಬರು ಸಚಿವರು ಇರುವ ಜಿಲ್ಲೆಯ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಅವರು ಆರೋಪಿಸಿದರು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಎಸ್. ಅಂಗಾರ, ವಿ.ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮುಖಂಡರಾದ ಉದಯ್ ಕುಮಾರ್ ಶೆಟ್ಟಿ, ಮೋನಪ್ಪ ಭಂಡಾರಿ, ಪ್ರತಾಪ್ ಸಿಂಹ ನಾಯಕ್ ಉಪಸ್ಥಿತರಿದ್ದರು.
ಅನ್ನಭಾಗ್ಯ: ಮೋದಿ 28 ರೂ. ಸಿದ್ದರಾಮಯ್ಯ 3 ರೂ.!
ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆ ಯಡಿ ಅಕ್ಕಿ ನೀಡುತ್ತಿದ್ದು ಇದಕ್ಕೆ 28 ರೂ.ಗಳನ್ನು ಮೋದಿಯವರು ನೀಡುತ್ತಿದ್ದಾರೆ. ಉಳಿದ 3 ರೂ. ಮಾತ್ರ ಸಿದ್ದರಾಮಯ್ಯ ನೀಡುತ್ತಿದ್ದಾರೆ. ಹೀಗಾಗಿ ಇದು ಕಾಂಗ್ರೆಸ್‌ನ ಅನ್ನಭಾಗ್ಯವಲ್ಲ. ಮೋದಿ ಅನ್ನಭಾಗ್ಯ ಎಂದು ಪ್ರಕಾಶ್ ಜಾಬ್ಡೇಕರ್ ಹೇಳಿದರು. ಮಂಗಳೂರಿನಲ್ಲಿ ಸಚಿವರು ರೌಡಿ ಗಳೊಂದಿಗೆ ಓಡಾಡುತ್ತಿದ್ದಾರೆ. ಅಪರಾಧ ಹಿನ್ನೆಲೆಯವರು ಎನ್‌ಕೌಂಟರ್ ಆದರೆ ಆತನ ಕುಟುಂಬಕ್ಕೆ ಸರಕಾರ ಪರಿಹಾರ ನೀಡು ತ್ತಿದೆ. ಆದರೆ ಹಿಂದೂಗಳು ಸತ್ತಾಗ ಪರಿಹಾರ ನೀಡಲು ಸರಕಾರ ಮೀನ ಮೇಷ ಎಣಿಸುತ್ತಿದೆ. ಈ ಓಟ್‌ಬ್ಯಾಂಕ್ ರಾಜ ಕಾರಣವನ್ನು ವಿರೋ ಧಿಸ ಬೇಕು ಎಂದು ಅವರು ಹೇಳಿದರು.
ಮೋದಿ-ಶಾ ಭಯದಿಂದ ಕಾಂಗ್ರೆಸ್ ಸಂಚು: ಶೋಭಾ
ಶೋಭಾ ಕರಂದ್ಲಾಜೆ ಮಾತನಾಡಿ, ಮಹಾ ದಾಯಿ ವಿಚಾರದಲ್ಲಿ ಜ. 27ಕ್ಕೆ ನಡೆಯ ಬೇಕಾಗಿದ್ದ ಕರ್ನಾಟಕ ಬಂದ್ ಅನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸುವ ದಿನವಾದ ಜ. 25ರಂದೇ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಮ್ಮಕ್ಕು ನೀಡಿದ್ದಾರೆ. ಫೆ. 4ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುವ ವೇಳೆ ಬೆಂಗಳೂರು ಬಂದ್‌ಗೆ ಸಿದ್ದರಾಮಯ್ಯ ಸಂಚು ರೂಪಿಸಿದ್ದಾರೆ. ಈ ಮೂಲಕ ಕಾನೂನು ವ್ಯವಸ್ಥೆಯನ್ನೇ ದುರುಪಯೋಗ ನಡೆಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ. ಮೋದಿ ಶಾ ಅವರ ಭಯದಿಂದ ಸಿದ್ದರಾಮಯ್ಯ ಹೀಗೆ ಮಾಡುತ್ತಿದ್ದು, ಇಂತಹ ತಂತ್ರಗಳಿಗೆ ಜನರು ಸರಿಯಾದ ಉತ್ತರ ನೀಡಲಿದ್ದಾರೆ ಎಂದರು.
ಎಸ್‌ಪಿ ವರ್ಗಾವಣೆಗೆ ಬಿಜೆಪಿ ಆಕ್ರೋಶ
ಎಸ್‌ಪಿ ಸುಧೀರ್ ರೆಡ್ಡಿ ವರ್ಗಾವಣೆ ಸಂಬಂಧಿಸಿ ಬಿಜೆಪಿ ಮುಖಂಡರು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಕಾಶ್ ಜಾಬ್ಡೇಕರ್ ಮಾತನಾಡಿ, ಅತ್ಯಂತ ದಕ್ಷ ಪೊಲೀಸ್ ಅಧಿಕಾರಿ, ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ರಾಜ್ಯ ಸರಕಾರ ಅವರ ತಾಳಕ್ಕೆ ತಕ್ಕಂತೆ ಕುಣಿಸುವಂತೆ ಮಾಡಲಾಗುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿ ದ.ಕ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಸುಮಾರು 5-6 ಸಲ ವರ್ಗಾವಣೆಯಾಗಿದ್ದಾರೆ. ಇದು ಈ ಸರಕಾರದ ವರ್ಗಾವಣೆ ನೀತಿಯನ್ನು ತೋರಿಸುತ್ತದೆ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಡಿಸಿ, ಎಸ್‌ಪಿ ಗಳು ಎಷ್ಟು ಜನ ಬಂದು ಹೋದರು ಎಂದೇ ಗೊತ್ತಾಗುವುದಿಲ್ಲ. ಅಧಿಕಾರಿಗಳ ಮುಖಪರಿಚಯ ಜನರಿಗೆ ಆಗುವ ಹೊತ್ತಿಗೆ ಅವರನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ದೂರಿದರು. ಸಂಸದ ನಳಿನ್ ಮಾತನಾಡಿ, 6 ತಿಂಗಳಿಗೊಮ್ಮೆ ಎಸ್‌ಪಿಗಳ ವರ್ಗಾವಣೆ ಮಾಡಲಾಗುತ್ತಿದೆ. ಆಡಳಿತದಾರರು ಹೇಳಿದ ಹಾಗೆ ಕೇಳದಿದ್ದರೆ ಅಧಿಕಾರಿಗಳನ್ನೇ ವರ್ಗ ಮಾಡುವ ಕೆಟ್ಟ ಪರಿಪಾಠ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ
Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್ ಆಕರ್ಷಣೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.