ಎಪ್ರಿಲ್-ಮೇ ತಿಂಗಳಿಗೆ ಬುಕ್ಕಿಂಗ್ ಪ್ರಕ್ರಿಯೆ ಇಳಿಮುಖ
Team Udayavani, Apr 12, 2018, 12:05 PM IST
ಮಹಾನಗರ: ಚುನಾವಣೆಯ ಮಾದರಿ ನೀತಿ ಸಂಹಿತೆಯ ಬಿಸಿ ಸಮಾರಂಭಗಳನ್ನು ಆಯೋಜಿಸುವ ಸಭಾಂಗಣಗಳಿಗೂ ತಟ್ಟಿದೆ. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ನಗರದ ಹಲವು ಸಭಾಂಗಣದಲ್ಲಿ ಎಪ್ರಿಲ್ ಮತ್ತು ಮೇ ತಿಂಗಳ ಕಾರ್ಯಕ್ರಮಕ್ಕೆ ಮುಂಗಡ ಸಭಾಂಗಣ ಕಾಯ್ದಿರಿಸುವಿಕೆ ಕಡಿಮೆಯಾಗಿದೆ. ಆದರೆ ಕೆಲವು ಸಭಾಂಗಣಗಳಲ್ಲಿ ಮಾತ್ರ ಯಥಾ ಪ್ರಕಾರ ಬುಕ್ಕಿಂಗ್ ಪ್ರಕ್ರಿಯೆ ನಡೆಯುತ್ತಿದೆ.
ನಗರದಲ್ಲಿ ಪ್ರತಿ ದಿನ ಹಲವಾರು ಕಾರ್ಯಕ್ರಮಗಳು ಆಯೋಜನೆಯಾಗುತ್ತಲೇ ಇರುತ್ತವೆ. ಇದರಿಂದ ಎಲ್ಲ ಸಭಾಂಗಣಗಳು ಪ್ರತಿದಿನ ಗಿಜಿ ಗುಡುತ್ತಲೇ ಇರುತ್ತದೆ. ಎಷ್ಟೆಂದರೆ ಪ್ರಮುಖ ಸಭಾಂಗಣಗಳಲ್ಲಿ ಕೆಲವೊಮ್ಮೆ ಐದಾರು ತಿಂಗಳುಗಳ ಹಿಂದೆಯೇ ಬುಕ್ ಮಾಡಲು ಪ್ರಯತ್ನಿಸಿದರೂ ಸಭಾಂಗಣ ಸಿಗದಂತಹ ಪರಿಸ್ಥಿತಿ ಇರುತ್ತದೆ. ಆದರೆ ಈಗ ನಗರದ ಹಲವು ಸಭಾಂಗಣಗಳಲ್ಲಿ ಮುಂಗಡ ಕಾಯ್ದಿರಿಸುವಿಕೆಯ ಸಂಖ್ಯೆ ಇಳಿಮುಖವಾಗಿದೆ.
ಅಲ್ಲದೆ ಕೆಲವರು ಸಭೆ ಸಮಾರಂಭಗಳಿಗಾಗಿ ಚುನಾವಣೆ ಘೋಷಣೆಗೆ ಮುನ್ನವೇ ಕಾಯ್ದಿರಿಸಿದ್ದು, ಅದರಂತೆ ಆಯಾ ದಿನಾಂಕದಂದು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಆದರೆ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೊಸದಾಗಿ ಯಾವುದೇ ಸಂಘ- ಸಂಸ್ಥೆಗಳ ಕಾರ್ಯಕ್ರಮ, ಇತರ ಸಭೆ- ಸಮಾರಂಭ ಗಳನ್ನು ಆಯೋಜಿಸಲು ಸಭಾಂಗಣಗಳನ್ನು ಕಾಯ್ದಿರಿಸುತ್ತಿರುವುದು ನಡೆಯುತ್ತಿಲ್ಲ. ತೀರಾ ಅವಶ್ಯವಾಗಿ ಸಮಾರಂಭ ಹಮ್ಮಿ ಕೊಳ್ಳಬೇಕಾದವರು ಮಾತ್ರ ಹಾಲ್‌ಗಳನ್ನು ಕಾಯ್ದಿರಿಸುತ್ತಿದ್ದಾರೆ.
ಕೆಲವು ತಿಂಗಳ ಹಿಂದೆಯೇ ಬುಕ್
ಈಗಾಗಲೇ ಎಪ್ರಿಲ್ ತಿಂಗಳ 11,29, ಮತ್ತು ಮೇ ತಿಂಗಳ 2, 6, 12, 13 ಮುಂತಾದ ದಿನಾಂಕಗಳು ಶುಭ ಕಾರ್ಯಗಳಿಗೆ ಪ್ರಶಸ್ತವಾಗಿವೆ. ಮದುವೆ ಸಮಾರಂಭಗಳಿಗಾಗಿ ಈ ದಿನಾಂಕಗಳಿಗೆ ಹಾಲ್ ಗಳನ್ನು ಕೆಲವು ತಿಂಗಳುಗಳ ಹಿಂದೆಯೇ ಕಾಯ್ದಿರಿಸಲಾಗಿದೆ. ಅದು ಬಿಟ್ಟು ಅನೇಕ ಸಂದರ್ಭಗಳಲ್ಲಿ ಎಲ್ಲ ಹಾಲ್ ಗಳಲ್ಲಿಯೂ ನಿರಂತರ ಸಭೆ- ಸಮಾರಂಭಗಳು ನಡೆಯುತ್ತಿದ್ದರೂ ಚುನಾವಣೆ ಘೋಷಣೆಯಾದ ಬಳಿಕ ಹಾಲ್ ಬುಕ್ ಮಾಡುವುದು ತೀರಾ ಕಡಿಮೆಯಾಗಿದೆ ಎನ್ನುತ್ತಾರೆ ಪ್ರಮುಖ ಹಾಲ್‌ಗಳ ಸಿಬಂದಿ. ಹಾಲ್‌ಗಳಲ್ಲಿ ನಗದನ್ನು ನೇರವಾಗಿ ತೆಗೆದುಕೊಳ್ಳದೆ ನೆಫ್ಟ್, ಡಿಡಿಗಳ ಮುಖಾಂ ತರವೇ ತೆಗೆದುಕೊಳ್ಳುವುದರಿಂದ ಆಯೋಜಕರಿಗೆ ಬಿಲ್ ಪಾವತಿಸಲು ಸಮಸ್ಯೆಯಾಗುವುದಿಲ್ಲ.
ಚುನಾವಣೆಯಂದೇ ಮದುವೆ
ನಗರದ ಪ್ರಮುಖ ಸಭಾಂಗಣವಾದ ಪುರಭವನದಲ್ಲಿ ಬುಕ್ಕಿಂಗ್ ಯಥಾಪ್ರಕಾರವಿದೆ. ಕೆಲವು ಹಾಲ್‌ಗಳಲ್ಲಿ ಮೇ 12ರಂದು ವಿವಾಹ, ಮೆಹಂದಿ ಕಾರ್ಯಕ್ರಮವಿದೆ. ಅಲ್ಲದೆ ಚುನಾವಣೆ ಪೂರ್ವದಲ್ಲಿ ನಿಗದಿ ಪಡಿಸಿದಂತೆ ನಗರದ ಇತರ ಕೆಲವು ಹಾಲ್‌ಗಳಲ್ಲಿಯೂ ಚುನಾವಣೆಯಂದು ಸಮಾರಂಭಗಳು ಜರಗುತ್ತಿವೆ.
ನೀತಿ ಸಂಹಿತೆ ಬಗ್ಗೆಯೂ ವಿಚಾರಣೆ
ಮಾದರಿ ನೀತಿ ಸಂಹಿತೆ ಜಾರಿಗೊಂಡ ಬಳಿಕ ಸಭೆ ಸಮಾರಂಭ ಆಯೋಜನೆ, ವಸ್ತುಗಳ ಸಾಗಾಟಕ್ಕೆ ಅನುಮತಿ ಅಗತ್ಯದ ಬಗ್ಗೆ ಸುದ್ದಿಗಳು ಹರಡುತ್ತಿವೆ. ಈ ಹಿನ್ನೆಲೆಯಲ್ಲಿ ಮೊದಲೇ ಸಭಾಂಗಣ ಕಾಯ್ದಿರಿಸಿದವರು ಕೂಡ ಕೆಲವು ಹಾಲ್ ಗಳಲ್ಲಿ ವಿಚಾರಿಸುತ್ತಾರೆ. ಆದರೆ ಪೂರಕ ದಾಖಲೆಯಿದ್ದಲ್ಲಿ ಕಾರ್ಯಕ್ರಮ ಆಯೋಜನೆಗೆ ವಸ್ತುಗಳ ಸಾಗಾಟಕ್ಕೆ ಸಮಸ್ಯೆಯಾಗುವುದಿಲ್ಲ. ಹಾಲ್ ಬುಕ್ಕಿಂಗ್ ಪ್ರಕ್ರಿಯೆ ಕಡಿಮೆಯಾಗಿದ್ದರೂ, ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮಗಳ್ಯಾವುವೂ ಮಾದರಿ ಚುನಾವಣೆ ನೀತಿ ಸಂಹಿತೆ ಯಿಂದಾಗಿ ರದ್ದುಗೊಂಡಿಲ್ಲ ಎನ್ನುತ್ತಾರೆ ನಗರದ ವಿವಿಧ ಸಭಾಂಗಣಗಳ ಸಿಬಂದಿ.
ಏರೆಗಾವುಯೇ ಕಿರಿಕಿರಿ…
ಸಭೆ ಸಮಾರಂಭಗಳ ಆಯೋಜನೆಗೆ ಅನುಮತಿ ಬೇಕೇ ಬೇಡವೇ ಎಂಬ ಗೊಂದಲದಲ್ಲಿ ಈಗಲೂ ಸಾರ್ವಜನಿಕರು ಇದ್ದಾರೆ. ಅನುಮತಿ ಪತ್ರ (ಎನ್‌ಒಸಿ) ತೆಗೆದುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಬಹುದು ಎಂಬುದಾಗಿ ಈ ಹಿಂದೆ ಅಪರ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ. ಅಲ್ಲದೆ ಕಾರ್ಯಕ್ರಮ ಆಯೋಜನೆ ಸಂದರ್ಭ ಖರೀದಿಸಿದ-ಸಾಗಿಸಿದ ಎಲ್ಲ ವಸ್ತುಗಳಿಗೂ ಪೂರಕ ದಾಖಲೆಗಳಿದ್ದರೆ ಏನೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಆದರೆ ಅನುಮತಿ ಪತ್ರಕ್ಕಾಗಿ ವೃಥಾ ಅಲೆದಾಟ, ಸಮಾರಂಭಗಳಿಗೆ ನೀತಿ ಸಂಹಿತೆಯಿಂದಾಗಿ ಏನಾದರೂ ಸಮಸ್ಯೆಯಾದರೆ
ಕಷ್ಟ ಎಂಬ ಲೆಕ್ಕಾಚಾರದಲ್ಲಿ ಕಾರ್ಯಕ್ರಮ ಆಯೋಜಕರಿದ್ದಾರೆ. ಇದಕ್ಕಾಗಿಯೇ ಸ್ವಲ್ಪ ತಡವಾದರೂ ಅಡ್ಡಿ ಇಲ್ಲ ಚುನಾವಣೆ ಬಳಿಕವೇ ಕಾರ್ಯಕ್ರಮ ಆಯೋಜಿಸುವುದು ಒಳಿತು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಯಥಾ ಪ್ರಕಾರವಿದೆ
ಪುರಭವನದಲ್ಲಿ ಕಾರ್ಯ ಕ್ರಮಗಳು ನಡೆಯುತ್ತಲೇ ಇವೆ. ಬುಕ್ಕಿಂಗ್ ಕೂಡ ನಡೆಯುತ್ತಿದೆ. ಚುನಾವಣಾ ನೀತಿಸಂಹಿತೆ ಇಲ್ಲಿ ಕಾರ್ಯಕ್ರಮ ಹಮ್ಮಿ ಕೊಳ್ಳುವುದಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಅಲ್ಲದೆ ಇಂಡೋರ್ ಕಾರ್ಯಕ್ರಮಗಳಿಗೆ ಅನುಮತಿ ಬೇಡ ಎಂದೂ ಸಂಬಂಧ ಪಟ್ಟವರು ಹೇಳಿದ್ದಾರೆ.
-ಹರೀಶ್, ಮ್ಯಾನೇಜರ್,
ಪುರಭವನ ಮಂಗಳೂರು.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.