Ullal; ಡಿವೈಡರ್ ಹಾರಿದ ಕಾರು ಕೂದಲೆಲೆಯ ಅಂತರದಲ್ಲಿ ಪಾರಾದ ಸ್ಕೂಟರ್ ಸವಾರ
Team Udayavani, Jul 29, 2023, 9:50 PM IST
ಉಳ್ಳಾಲ: ಅಪರಿಮಿತ ವೇಗದಿಂದ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚತುಷ್ಪಥ ರಸ್ತೆಯ ಡಿವೈಡರ್ನಿಂದ ದಾಟಿ ಇನ್ನೊಂದು ಬದಿಯ ರಸ್ತೆಯಲ್ಲಿ ಚಲಿಸಿದ್ದು, ಸ್ಕೂಟರ್ ಸವಾರನೋರ್ವ ಕೂದಲೆಲೆಯ ಅಂತರದಿಂದ ಸಣ್ಣ,ಪುಟ್ಟ ಗಾಯದಿಂದ ಪಾರಾದ ಘಟನೆ ರಾ.ಹೆ.66ರ ತೊಕ್ಕೊಟ್ಟು ಕಾಪಿಕಾಡು ಬಳಿ ಇಂದು ಬೆಳಿಗ್ಗೆ ನಡೆದಿದೆ.
ಅಪರಿಮಿತ ವೇಗದಲ್ಲಿ ತೊಕ್ಕೊಟ್ಟಿನಿಂದ ತಲಪಾಡಿಯ ಕಡೆ ಧಾವಿಸುತ್ತಿದ್ದ ಕಾರೊಂದು ರಾ.ಹೆ.66 ರ ಓವರ್ ಬ್ರಿಡ್ಜ್-ಕಾಪಿಕಾಡು ನಡುವಿನ ಡಿವೈಡರ್ ನಿಂದ ನೆಗೆದಿದೆ.ಈ ವೇಳೆ ಕೊಲ್ಯದಿಂದ ತೊಕ್ಕೊಟ್ಟು ಕಡೆ ಸಾಗುತ್ತಿದ್ದ ಸ್ಕೂಟರ್ಗೆ ಕಾರು ಢಿಕ್ಕಿ ಹೊಡೆದಿದ್ದು ಚಾಲಕ ಪವಾಡಸದೃಶವಾಗಿ ಸಣ್ಣ,ಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ಬಲ ಭಾಗದ ರಸ್ತೆಯ ಬದಿಯ ಮೋರಿಯಲ್ಲಿ ಕಾರು ನಿಂತಿದ್ದು ಕಾರಿನ ಚಾಲಕ ಮತ್ತ ಇನ್ನೊರ್ವ ಪ್ರಯಾಣಿಕ ಅಪಘಾತದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಬೆಳಗ್ಗಿನ ಹೊತ್ತಿಗೆ ಕಾಪಿಕಾಡು ಹೆದ್ದಾರಿಯಲ್ಲಿ ವಾಹನ ದಟ್ಟನೆ ಹೆಚ್ಚಿರುತ್ತದೆ,ಅಪಘಾತದ ಸಂದರ್ಭದಲ್ಲಿ ಸ್ಕೂಟರ್ ಹೊರತುಪಡಿಸಿ ಬೇರೆ ಯಾವುದೇ ವಾಹನಗಳಿಲ್ಲದ ಕಾರಣ ದೊಡ್ಡ ಅವಘಡವೊಂದು ತಪ್ಪಿದಂತಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.