ವಿವಿಧೆಡೆ ಸಂಭ್ರಮದ ಈದುಲ್‌ಫಿತ್ರ್ ಆಚರಣೆ
Team Udayavani, Jun 16, 2018, 10:02 AM IST
ಮಹಾನಗರ: ನಗರದ ಮುಸ್ಲಿಮರು 29 ದಿನಗಳ ಉಪವಾಸ ವ್ರತಾಚರಣೆಯ ಬಳಿಕ ಶುಕ್ರವಾರ ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ನಗರದ ಬಾವುಟಗುಡ್ಡೆಯ ಈದ್ಗಾ ಪ್ರಾರ್ಥನ ಮಂದಿರದಲ್ಲಿ ಬೆಳಗ್ಗೆ 8 ಗಂಟೆಗೆ ನಮಾಝ್ ನೆರವೇರಿತು. ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಈದ್ ನಮಾಝ್ಗೆ ನೇತೃತ್ವ ನೀಡಿದರು. ಬಳಿಕ ಖುತುಬಾ ಪ್ರವಚನ ನೀಡಿದರು. ಈದ್ಗಾ ಮತ್ತು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಹಾಗೂ ಈದ್ಗಾದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗಣ್ಯ
ಅತಿಥಿಗಳು ಭಾಗವಹಿಸಿ ನೀಡಿ ಮುಸ್ಲಿಂ ಬಾಂಧವರಿಗೆ ಈದ್ ಶುಭಾಶಯ ಸಲ್ಲಿಸಿದರು.
ಕೇರಳ ಕಲ್ಲಿಕೋಟೆ ಸಮೀಪದ ಕಾಪಾಡ್ ಎಂಬಲ್ಲಿ ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಶವ್ವಾಲ್‌ನ ಪ್ರಥಮ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಶುಕ್ರವಾರ ಈದುಲ್ ಫಿತ್ರ್ ಆಚರಿಸಲಾಯಿತು. ಇದೇ ವೇಳೆ ಮಂಗಳೂರಿನ ಪಂಪ್ ವೆಲ್‌ನ ತಕ್ವಾ ಮಸೀದಿಯಲ್ಲಿ ನಡೆದ ನಮಾಝ್ ಕಾರ್ಯಕ್ರಮದಲ್ಲಿ ಖತೀಬ್ ಅಬ್ದುಲ್ ರಹಿಮಾನ್ ಸಖಾಫಿ ಅವರು ನೇತೃತ್ವ ವಹಿಸಿದ್ದರು. ಹಂಪನಕಟ್ಟೆಯ ನೂರ್ ಮಸೀದಿ, ಕಂಕನಾಡಿಯ ರಹ್ಮಾನಿಯಾ ಮಸೀದಿ, ಕುದ್ರೋಳಿಯ ಜಾಮಿಯಾ
ಮಸೀದಿಗಳಲ್ಲಿಯೂ ಈದ್ ನಮಾಝ್ ಕಾರ್ಯಕ್ರಮ ನಡೆಯಿತು.
ವಿವಿಧೆಡೆ ಸಂಭ್ರಮ
ಮೂಲ್ಕಿ, ಹಳೆಯಂಗಡಿ, ಉಳ್ಳಾಲ, ಕಿನ್ನಿಗೋಳಿ, ಬಜಪೆ, ಸುರತ್ಕಲ್, ಕೃಷ್ಣಾಪುರ, ಮುಕ್ಕ, ಕಾಟಿಪಳ್ಳ, ಬೊಳ್ಳೂರು,
ಪುನರೂರು, ತೊಕ್ಕೊಟ್ಟು, ಗುರುಪುರ, ಗಂಜಿಮಠ, ಗುತ್ತಕಾಡು ವ್ಯಾಪ್ತಿಯ ದರ್ಗಾ ಮತ್ತು ಮಸೀದಿಗಳಲ್ಲಿ ಈದುಲ್ ಫಿತ್ರ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.