ರೆಂಜಲಾಡಿ ಜಮಾಅತ್‌ನಲ್ಲಿ ‘ಹಿಡಿ ಅಕ್ಕಿ’ ಸಂಪ್ರದಾಯ


Team Udayavani, Aug 2, 2018, 10:23 AM IST

2-agust-2.jpg

ನರಿಮೊಗರು: ಮುಸ್ಲಿಂ ಮೊಹಲ್ಲಾ ಅಥವಾ ಜಮಾತ್‌ಗಳಲ್ಲಿ ಸರಿಸುಮಾರು 100 ವರ್ಷಗಳ ಹಿಂದಿನಿಂದಲೂ ಚಾಲ್ತಿಯಲ್ಲಿದ್ದ ‘ಹಿಡಿ ಅಕ್ಕಿ’ ಸಂಗ್ರಹ ಸಂಪ್ರದಾಯವನ್ನು ಐದು ವರ್ಷಗಳಿಂದ ಶೇ. 98 ಜಮಾತ್‌ಗಳಲ್ಲಿ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಆದರೆ ಮುಂಡೂರು ಗ್ರಾ.ಪಂ. ವ್ಯಾಪ್ತಿಯ ಸರ್ವೆ ಗ್ರಾಮದ ರೆಂಜಲಾಡಿ ಬದ್ರಿಯಾ ಜಮಾಅತ್‌ ಕಮಿಟಿಯಲ್ಲಿ ಈಗಲೂ ಜೀವಂತವಾಗಿದೆ! 

ಏನಿದು ‘ಹಿಡಿ ಅಕ್ಕಿ’?
ಜಮಾತ್‌ ಅಥವಾ ಮೊಹಲ್ಲಾದಲ್ಲಿರುವ ಪ್ರತೀ ಮನೆಯಿಂದಲೂ ಮಸೀದಿ/ಮದ್ರಸಗಳಿಗೆ ‘ಹಿಡಿ ಅಕ್ಕಿ’ ಕೊಡುತ್ತಿದ್ದರು. ಮನೆಯಲ್ಲಿ ನಿತ್ಯವೂ ಅನ್ನಕ್ಕೆ ನೀರಿಟ್ಟು, ಅಕ್ಕಿ ತೊಳೆಯುವ ಮೊದಲು ಒಂದು ಹಿಡಿ ಅಕ್ಕಿಯನ್ನು ಮಣ್ಣಿನ ಕುಡಿಕೆಯಲ್ಲಿ ಹಾಕಿ ಇಡುತ್ತಿದ್ದರು. ಹಿರಿಯರು ರೂಪಿಸಿದ್ದ ಈ ಸಂಪ್ರದಾಯ ಒಂದು ಶತಮಾನದಿಂದಲೂ ನಡೆದು ಬಂದಿದೆ. ಜನರೂ ಅನ್ನಕ್ಕೆ ಎಸರಿಡುವ ಮುನ್ನ ಚಾಚೂ ತಪ್ಪದೆ ಹಿಡಿ ಅಕ್ಕಿ ತೆಗೆದಿಡುತ್ತಿದ್ದರು. ತಿಂಗಳಿಗೊಮ್ಮೆ ಮಸೀದಿಯಿಂದ ಬರುವ ಮುಕ್ರಿ ಅದನ್ನು ಮನೆ ಮನೆಯಿಂದ ಸಂಗ್ರಹಿಸಿ, ಮಸೀದಿಗೆ ತಲುಪಿಸುತ್ತಿದ್ದರು.

ಮುಸ್ಲಿಂ ಸಮಾಜ ಆರ್ಥಿಕವಾಗಿ ಸುಧಾರಣೆಯಾದಂತೆ ಕೆಲವೊಂದು ಮಸೀದಿಗಳಲ್ಲಿ ಹಿಡಿ ಅಕ್ಕಿ ಸಂಗ್ರಹ ಪದ್ಧತಿಯನ್ನು ನಿಲ್ಲಿಸಲು ಪ್ರಾರಂಭಿಸಿದರು. ಅಕ್ಕಿಯನ್ನು ವೇತನ ರೂಪದಲ್ಲಿ ಪಡೆಯಲು ಮಸೀದಿಯ ಸಿಬಂದಿ ಒಪ್ಪದ ಕಾರಣ ಕಾಲಕ್ರಮೇಣ ನಗದು ರೂಪದಲ್ಲಿ ವೇತನ ಆರಂಭವಾಗತೊಡಗಿತು. ಕಳೆದ 10 ವರ್ಷಗಳಿಂದ ಶೇ. 98 ಮಸೀದಿಗಳಲ್ಲಿ ಈ ಹಿಡಿ ಅಕ್ಕಿ ಸಂಪ್ರದಾಯಕ್ಕೆ ಕೊಕ್‌ ನೀಡಲಾಗಿದೆ. ಇದಕ್ಕೆ ಕಾರಣ ಅಕ್ಕಿ ಸಂಗ್ರಹ ಮಾಡಲು ಸಿಬಂದಿ ಸಿಗದೇ ಇರುವುದು ಮತ್ತು ಹಳೆಯ ಸಂಪ್ರದಾಯವನ್ನು ಯುವ ಸಮೂಹ ಇಷ್ಟಪಡದೇ ಇರುವುದು. ಈ ಎರಡು ಕಾರಣಕ್ಕೆ ಹಿಡಿ ಅಕ್ಕಿ ಸಂಗ್ರಹಕ್ಕೆ ಬ್ರೇಕ್‌ ಬಿದ್ದಿದೆ. ಅಕ್ಕಿ ಬದಲಿಗೆ ಪ್ರತೀ ತಿಂಗಳು ಒಂದು ಕಿಲೋ ಅಕ್ಕಿಯ ಮೊತ್ತವನ್ನು ಮಸೀದಿಗೆ ಪಾವತಿಸುವ ಸಂಪ್ರದಾಯ ಚಾಲ್ತಿಗೆ ಬಂತು. ಈ ಎಲ್ಲ ಬೆಳವಣಿಗೆಗಳ ನಡುವೆಯೇ ರೆಂಜಲಾಡಿ ಜಮಾಅತ್‌ ಕಮಿಟಿಯೂ ಶತಮಾನಗಳ ಹಿಂದಿನ ಸಂಪ್ರದಾಯವನ್ನು ಈಗಲೂ ಮುಂದುವರಿಸುತ್ತ ಮಾದರಿಯಾಗಿದೆ.

ಹಿಡಿ ಅಕ್ಕಿ ಸಂಪ್ರದಾಯವನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಹಿರಿಯ ವ್ಯಕ್ತಿಗಳಿಂದ ವಿರೋಧವೂ ವ್ಯಕ್ತವಾಗಿತ್ತು. ಪ್ರಾರಂಭದ ಕಾಲಘಟ್ಟದಲ್ಲಿ ಮದ್ರಸ ಮತ್ತು ಮಸೀದಿಗಳನ್ನು ಉಳಿಸಿದ ಹಳೆಯ ಸಂಪ್ರದಾಯವನ್ನು ಏಕಾಏಕಿ ಕಿತ್ತು ಹಾಕುವುದು ಸರಿಯಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗ ರೆಂಜಲಾಡಿ ಜಮಾಅತ್‌ ಕಮಿಟಿ ಸಹಿತ ಶೇ. 2ರಷ್ಟು ಮಸೀದಿಗಳಲ್ಲಿ ಇನ್ನೂ ಈ ಪದ್ಧತಿ ಜೀವಂತವಾಗಿದೆ.

ಮಸೀದಿಗೇಕೆ ಅಕ್ಕಿ?
ಅಂದಿನ ಕಾಲದಲ್ಲಿ ಬಡತನ ಇತ್ತು. ಮಸೀದಿ/ಮದ್ರಸಗಳಲ್ಲಿ ಕೆಲಸ ಮಾಡುತ್ತಿದ್ದ ಸಿಬಂದಿಗೆ ಸಂಬಳ ನೀಡಲು ಹಣ ಇರುತ್ತಿರಲಿಲ್ಲ. ಬಹುತೇಕ ಮಸೀದಿಗಳಲ್ಲಿ ತಿಂಗಳಿಗೊಮ್ಮೆ ಸಂಗ್ರಹವಾದ ಅಕ್ಕಿಯನ್ನೇ ನೀಡುತ್ತಿದ್ದರು. ಅಕ್ಕಿಯೇ ಸಿಬಂದಿಯ ಮೂಲ ವರಮಾನವೂ ಆಗಿತ್ತು. ಅಲ್ಪಸ್ವಲ್ಪ ಆದಾಯ ಇರುವ ಮಸೀದಿಗಳಲ್ಲಿ ಅಕ್ಕಿಯನ್ನು ಏಲಂ ಮಾಡಿ ಅದರ ದುಡ್ಡನ್ನು ಸಿಬಂದಿಗೆ ನೀಡುತ್ತಿದ್ದರು. ಮಕ್ಕಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡುವ ಗುರುಗಳಿಗೂ ಅಕ್ಕಿಯೇ ವೇತನವಾಗಿತ್ತು. ಅಂದಿನ ಹಿರಿಯರು ಮಕ್ಕಳ ಶಿಕ್ಷಣಕ್ಕಾಗಿ ಅಕ್ಕಿಯನ್ನು ದಿನಂಪ್ರತಿ ಹಿಡಿ ರೂಪದಲ್ಲಿ ಸಂಗ್ರಹಿಸಿ ದಾನ ನೀಡಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕಲಿಸುವ ಉದ್ದೇಶವೂ ಇದರ ಹಿಂದಿತ್ತು.

ಸಂಪ್ರದಾಯ ಪುನಶ್ಚೇತನಗೊಳ್ಳಬೇಕಿದೆ
ಇದು ಅತ್ಯಂತ ಹಳೆಯ ಸಂಪ್ರದಾಯ. ಹಿಡಿ ಅಕ್ಕಿ ಸಂಗ್ರಹದಿಂದಲೇ ಒಂದು ಮಸೀದಿಯಲ್ಲಿ ಇಬ್ಬರು ಸಿಬಂದಿಯನ್ನು ನೇಮಿಸಿ ಅದರಿಂದಲೇ ಅವರಿಗೆ ವೇತನವನ್ನು ನೀಡಲಾಗುತ್ತಿತ್ತು. ಶ್ರದ್ಧೆಯಿಂದ ಈ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದ್ದರು. ಕಾಲಕ್ರಮೇಣ ಸಮುದಾಯ ಆರ್ಥಿಕ ಸಬಲರಾದಂತೆ ಸಂಪ್ರದಾಯಕ್ಕೆ ಕೊನೆ ಹಾಡಲಾಯಿತು. ಈ ಸಂಪ್ರದಾಯ ರೆಂಜಲಾಡಿ ಬದ್ರಿಯಾ ಜಮಾತ್‌ ಕಮಿಟಿಯಲ್ಲಿ ಇನ್ನೂ ಜೀವಂತವಾಗಿದೆ. ಸಮಸ್ತದ ನಾಯಕರು ಸೇರಿ ಮಾಡಿರುವ ಈ ನಿಯಮವನ್ನು ಪುನಶ್ಚೇತನಗೊಳಿಸುವ ಜವಾಬ್ದಾರಿ ಯುವಜನತೆ ಮೇಲಿದೆ.
– ಹುಸೈನ್‌ ದಾರಿಮಿ ರೆಂಜಲಾಡಿ
ಧಾರ್ಮಿಕ ವಿದ್ವಾಂಸರು, ಪುತ್ತೂರು

ಪ್ರವೀಣ್‌ ಚೆನ್ನಾವರ

ಟಾಪ್ ನ್ಯೂಸ್

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.