ಪ್ರವಾಸಿ ಕೇಂದ್ರವಾಗಿ ಚಂದ್ರಗಿರಿ ಕೋಟೆ ಅಭಿವೃದ್ಧಿ
Team Udayavani, Dec 31, 2017, 10:26 AM IST
ಕಾಸರಗೋಡು: ಇತಿಹಾಸ ಪ್ರಸಿದ್ಧ ಚಂದ್ರಗಿರಿ ಕೋಟೆಯನ್ನು ಸಮಗ್ರ ಸಂರಕ್ಷಣೆಯ ಜತೆಗೆ ಅತ್ಯುತ್ತಮ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕಾಗಿ ಪ್ರಥಮ ಹಂತದಲ್ಲಿ 80 ಲಕ್ಷ ರೂ. ಯೋಜನೆ ರೂಪಿಸಲಾಗಿದೆ ಎಂದು ಕೇರಳ ರಾಜ್ಯ ಬಂದರು ಮತ್ತು ಪುರಾತಣ್ತೀ ಖಾತೆ ಸಚಿವ ರಾಮಚಂದ್ರನ್ ಕಡನ್ನಪಳ್ಳ ಹೇಳಿದ್ದಾರೆ.
ಚಂದ್ರಗಿರಿ ಕೋಟೆಯ ಅಭಿವೃದ್ಧಿ ಕಾಮಗಾರಿಯನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು. ಚಂದ್ರಗಿರಿ ಕೋಟೆಯ ಮೂಲ ಸ್ವರೂಪಕ್ಕೆ ಯಾವುದೇ ಹಾನಿಯಾಗದಂತೆ ಸಂರಕ್ಷಿಸಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಕೋಟೆಯನ್ನು ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಲಾಗುವುದು ಎಂದ ಅವರು, ಎಲ್ಲ ಜಿಲ್ಲೆಗಳಲ್ಲೂ ಪಾರಂಪರಿಕ ಮ್ಯೂಸಿಯಂಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ಕಾಸರಗೋಡು ಜಿಲ್ಲೆಯಲ್ಲಿ ಯೋಗ್ಯ ಸ್ಥಳಕ್ಕಾಗಿ ಶೋಧ ನಡೆದಿದೆ. ಉದಿನೂರು ಅರಮನೆಯ ಸಂರಕ್ಷಣೆ ಕಾಮಗಾರಿ ನಡೆಯುತ್ತಿದೆ ಎಂದರು.
ಶಾಸಕ ಕೆ. ಕುಂಞಿರಾಮನ್ ಅಧ್ಯಕ್ಷತೆ ವಹಿಸಿದ್ದರು. ಪುರಾತಣ್ತೀ ಇಲಾಖೆಯ ನಿರ್ದೇಶಕ ಕೆ. ರಜಿ ಕುಮಾರ್ ವರದಿ ಮಂಡಿಸಿದರು. ಕಾಸರಗೋಡು ಜಿ.ಪಂ. ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಶಾನವಾಸ್ ಪಾದೂರು, ಕಾಸರಗೋಡು ಬ್ಲಾಕ್ ಪಂ. ಸದಸ್ಯ ತಾಹಿರಾ ತಾಜುದ್ದೀನ್, ಚೆಮ್ನಾಡ್ ಗ್ರಾ. ಪಂ. ಸದಸ್ಯ ಅಹಮ್ಮದ್, ನಿರ್ದೇಶಕ ಪಿ. ಬಿಜು, ಪ್ರಮುಖರಾದ ಕೆ. ಗಂಗಾಧರನ್, ಎಂ. ಅನಂತನ್ ನಂಬಿಯಾರ್, ಚಂದ್ರನ್ ಕೋಕಾಲ್, ಕೃಷ್ಣನ್ ಚಟ್ಟಂಚಾಲ್, ಶಾಜಿ ಅಬ್ದುಲ್ಲ ಹುಸೈನ್, ತುಳಸೀಧರನ್, ಎಂ. ಸದಾಶಿವನ್, ಮೊದೀನ್ ಕುಂಞಿ ಕಳನಾಡು ಉಪಸ್ಥಿತರಿದ್ದರು. ಚೆಮ್ನಾಡ್ ಗ್ರಾ.ಪಂ. ಅಧ್ಯಕ್ಷ ಕಲ್ಲಟ್ರ ಅಬ್ದುಲ್ ಖಾದರ್ ಸ್ವಾಗತಿಸಿ, ಟಿ.ಕೆ. ಕರುಣಾ ದಾಸ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.