ಮುಖ್ಯಮಂತ್ರಿ ಪರಿಹಾರ ನಿಧಿಯೂ ಸಿಗಲಿಲ್ಲ ; ಪ್ರಧಾನಿ ನಿಧಿಯೂ ಸಿಗಲಿಲ್ಲ


Team Udayavani, Jan 28, 2018, 3:36 PM IST

28-Jan–17.jpg

ಮಹಾನಗರ: ಕಾಲುಗಳು ಸ್ವಾಧೀನ ಕಳೆದುಕೊಂಡದ್ದಲ್ಲದೆ, ಮಾನಸಿಕ ಅಸ್ವಸ್ಥಳಾಗಿ ಏಳು ವರ್ಷದಿಂದ ಹಾಸಿಗೆ ಹಿಡಿದಿರುವ ಪತ್ನಿ. ಸೂಕ್ತ ಚಿಕಿತ್ಸೆ ಕೊಡಿಸಲು ಬಡತನ ಅಡ್ಡಿಯಾದರೂ ಪ್ರೀತಿಯನ್ನು ಕಡಿಮೆ ಮಾಡದೇ ಪುಟ್ಟ ಮಗುವನ್ನು ಆರೈಕೆ ಮಾಡಿದಂತೆ ನೋಡಿಕೊಳ್ಳುತ್ತಿರುವ ಪತಿ.

ಆಸ್ಪತ್ರೆ ಖರ್ಚಿಗಾಗಿ ದಿಲ್ಲಿಯವರೆಗೂ ಮೊರೆ ಇಟ್ಟರೂ ಪ್ರಯೋಜನವಾಗಲಿಲ್ಲ. ಆದರೂ ಭರವಸೆಯನ್ನು ಕಳೆದುಕೊಂಡಿಲ್ಲ. ಪತ್ನಿಯನ್ನು ಉಳಿಸಿಕೊಳ್ಳುವ ಸಲುವಾಗಿ ನೆರವು ಕೋರಿ ಊರೂರು ಅಲೆಯುತ್ತಿದ್ದಾರೆ ಗದಗದ ಕಾಶೀನಾಥರು.

ನಗರದ ಉದಯವಾಣಿ ಕಚೇರಿಯಲ್ಲಿ ತಮ್ಮ ಕಷ್ಟವನ್ನು ಹೇಳಿಕೊಂಡ ಕಾಶೀನಾಥರ ಪತ್ನಿ ಗಂಗೂಬಾಯಿಗೆ 56 ವರ್ಷ. ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡು ಏಳು ವರ್ಷದಿಂದ ಮಲಗಿಯೇ ದಿನ ದೂಡುತ್ತಿದ್ದಾರೆ. ಕಾಶೀನಾಥರ ವಯಸ್ಸೂ 65. ಇಳಿವಯಸ್ಸಿನಲ್ಲಿ ಶಾಂತಿ-ನೆಮ್ಮದಿಯ ಬದುಕನ್ನು ಅನುಭವಿಸಬೇಕಿದ್ದ ಕಾಶೀನಾಥ ಚಿತ್ರಗಾರರಿಗೆ ಈಗ ಹಣ ಹೊಂದಿಸುವ ಚಿಂತೆ. ಆಸ್ಪತ್ರೆಯ ವೈದ್ಯರ ಪ್ರಕಾರ ಪತ್ನಿ ಎಂದಿನಂತೆ ನಡೆದಾಡಲು ಸಾಧ್ಯವಾಗಬೇಕಾದರೆ ಕನಿಷ್ಠ 4-5 ಲಕ್ಷ ರೂ. ಚಿಕಿತ್ಸೆಗೆ ಬೇಕು.

ದಿನದೂಟಕ್ಕೂ ಕಷ್ಟ ಪಡುತ್ತಿರುವ ಬಡಗಿ ವೃತ್ತಿ ನಿರ್ವಹಿಸುತ್ತಿರುವ ಕಾಶಿನಾಥರಿಗೆ ಇಷ್ಟೊಂದು ಹಣ ಹೊಂದಿಸುವುದು ಕಷ್ಟ. ಇದರೊಂದಿಗೆ ಪತ್ನಿ ಮಾನಸಿಕವಾಗಿ ನೊಂದು ಸ್ಥಿಮಿತ ಕಳೆದುಕೊಂಡಿರುವುದು ಕಷ್ಟದ ತೀವ್ರತೆಯನ್ನು ಹೆಚ್ಚಿಸಿದೆ. ‘ಇಹಲೋಕದ ಪರಿವೆ ಇಲ್ಲದೇ ಕೂಗಾಡುವುದು, ಅಸ್ಪಷ್ಟ ಧ್ವನಿ ಹೊರಡಿಸುವುದನ್ನೆಲ್ಲ ಮಾಡುತ್ತಿರುತ್ತಾರೆ. ಪತ್ನಿಯ ಈ ಪರಿಸ್ಥಿತಿಯನ್ನು ಕಣ್ಣಾರೆ ನೋಡುತ್ತಾ ಅಸಹಾಯಕನಾಗಿ ದಿನದೂಡುವಂತಾಗಿದೆ’ ಎಂದು ಕಣ್ಣೀರಿಡುತ್ತಾರೆ ಕಾಶೀನಾಥರು.

‘ಈಗಾಗಲೇ ಔಷಧಕ್ಕಾಗಿ ಸಾವಿರಾರು ರೂ. ಖರ್ಚಾಗಿದೆ. ನನ್ನ ಬಳಿ ಜಮೀನು, ಆಸ್ತಿ ಇಲ್ಲ. ಮೂವರು ಗಂಡು ಮಕ್ಕಳಲ್ಲಿ ಇಬ್ಬರಿಗೆ ಮದುವೆಯಾಗಿದ್ದು, ಕೊನೆಯ ಪುತ್ರ ಟಿಸಿಎಚ್‌ ಮಾಡಿದರೂ ನೌಕರಿ ಸಿಕ್ಕಿಲ್ಲ. ಮಕ್ಕಳು ಸಣ್ಣ ಪುಟ್ಟ ಕೆಲಸ ನಿರ್ವಹಿಸುತ್ತಿದ್ದು, ಅವರ ಖರ್ಚಿಗೇ ಕಷ್ಟ. ಮುಖ್ಯಮಂತ್ರಿ ಪರಿಹಾರ ನಿಧಿ ಕೋರಿ ಅರ್ಜಿ ಸಲ್ಲಿಸಿ ನಾಲ್ಕೈದು ತಿಂಗಳಾಯಿತು. ಆದರೆ ಇದುವರೆಗೆ ನೆರವು ದೊರಕಿಲ್ಲ’ ಎನ್ನುತ್ತಾರೆ ಅವರು.

ಇವರಿಗೆ ಸಹಾಯ ಮಾಡುವವರು
ಕಾಶಿನಾಥ ಗಣಪತರಾವ್‌ ಚಿತ್ರಗಾರ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌, ಖಾತೆ ಸಂಖ್ಯೆ: 17194029499, ಐಎಫ್‌ಎಸ್‌ಸಿ ಕೋಡ್‌: kvgb0006311ಗೆ ನೆರವು ಹಣ ಜಮೆ ಮಾಡಬಹುದು.

ನೆರವಿನ ಮೊರೆಗೆ 50 ಸಾವಿರ ರೂ. ಖರ್ಚು! 
ಪತ್ನಿಯ ಚಿಕಿತ್ಸೆಗೆ ನೆರವು ಕೋರಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಥಳೀಯ ಶಾಸಕರೂ ಸೇರಿದಂತೆ ವಿವಿಧ ಮುಖಂಡರಿಗೆ ಮನವಿ ನೀಡಿದ್ದಾರೆ.ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಅನಿವಾರ್ಯವಾಗಿ ಸಾರ್ವಜನಿಕರ ಮೊರೆ ಹೋಗಿದ್ದಾರೆ ಕಾಶೀನಾಥರು. ಸುಮಾರು ಆರು ತಿಂಗಳಿನಿಂದ ಹುಬ್ಬಳ್ಳಿ, ಗದಗ, ಮಂಗಳೂರು ಹೀಗೆ ಊರೂರು ಅಲೆಯುತ್ತಿದ್ದಾರೆ. ತಾವು ಗಳಿಸಿದ ಹಣದಲ್ಲೇ 50 ಸಾವಿರ ರೂ. ಗಳನ್ನು ಈ ಓಡಾಟಕ್ಕೆ, ಮನವಿ ಸಲ್ಲಿಕೆಗೆ ವೆಚ್ಚ ಮಾಡಿದ್ದಾರೆ.

ಸಾರ್ವಜನಿಕರೇ  ನೆರವು ನೀಡಿ
ನನ್ನ ಪತ್ನಿ ಮೊದಲಿನಂತಾಗಬೇಕು ಸರಕಾರ ಬಡವರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ನಮ್ಮಂಥ ಬಡವರಿಗೆ ಸಿಗುತ್ತಿಲ್ಲ. ಜನಪ್ರತಿನಿಧಿಗಳಲ್ಲಿ ಕಷ್ಟ ಹೇಳಿಕೊಂಡರೂ ಉಪಯೋಗವಾಗಿಲ್ಲ. ಸಾರ್ವಜನಿಕರಾದರೂ ಸಹಕರಿಸಿದರೆ ನನ್ನ ಪತ್ನಿ ಮತ್ತೆ ಮೊದಲಿನಂತಾಗಬಹುದು ಎಂಬ ಆಸೆಯಿದೆ.
ಕಾಶಿನಾಥ, ಚಿತ್ರಗಾರ,
  ಗಂಗೂಬಾಯಿ ಅವರ ಪತಿ

ಟಾಪ್ ನ್ಯೂಸ್

1-vitla

Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ

1-donald

Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…

Yakshagana

Yakshagana: ಕಾಲಮಿತಿ, ಕಾಲಗತಿಯ ಕಾಲದ ಯಕ್ಷಗಾನ-ಚಿಂತನೆ

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Cong-CM-Dinner-Meet

Dinner Politics: ಡಿಸಿಎಂ ಡಿಕೆಶಿ ದೂರು; ಕಾಂಗ್ರೆಸ್‌ ಡಿನ್ನರ್‌ಗೆ ಹೈ ಕಮಾಂಡ್‌ ತಡೆ

Naxal-Meeting

Naxal Surrender: ಕೊನೆಗೂ ಕರ್ನಾಟಕ ರಾಜ್ಯ ಸಂಪೂರ್ಣ ನಕ್ಸಲ್‌ ಮುಕ್ತವಾಯಿತೇ?

R.Ashok

Budget Allocation: ಇನ್ನೆರಡು ತಿಂಗಳಲ್ಲಿ ಶೇ. 45 ಪ್ರಗತಿ ಸಾಧ್ಯವೇ?: ಆರ್‌.ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್‌

Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್‌

ಕ್ಯುಆರ್‌ ಕೋಡ್‌ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ

ಕ್ಯುಆರ್‌ ಕೋಡ್‌ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ

Tannirbhavi: ಜ. 11, 12ರ ಬೀಚ್‌ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ

Tannirbhavi: ಜ. 11, 12ರ ಬೀಚ್‌ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ

Mangaluru ಎಚ್‌ಎಂಪಿ ವೈರಸ್‌; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ

Mangaluru ಎಚ್‌ಎಂಪಿ ವೈರಸ್‌; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-vitla

Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ

1-donald

Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…

Yakshagana

Yakshagana: ಕಾಲಮಿತಿ, ಕಾಲಗತಿಯ ಕಾಲದ ಯಕ್ಷಗಾನ-ಚಿಂತನೆ

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Cong-CM-Dinner-Meet

Dinner Politics: ಡಿಸಿಎಂ ಡಿಕೆಶಿ ದೂರು; ಕಾಂಗ್ರೆಸ್‌ ಡಿನ್ನರ್‌ಗೆ ಹೈ ಕಮಾಂಡ್‌ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.