ಫಿಲೋಮಿನಾ ಕ್ಯಾಂಪಸ್‌ನಲ್ಲಿ ಕ್ರಿಸ್ಮಸ್ ಗೋದಲಿ ಉದ್ಘಾಟನೆ
Team Udayavani, Dec 24, 2017, 4:17 PM IST
ದರ್ಬೆ: ಏಸು ಕ್ರಿಸ್ತನ ಜನ್ಮ ವೃತ್ತಾಂತವನ್ನು ದೃಶ್ಯಾವಳಿಯ ರೂಪದಲ್ಲಿ ಸಾದರ ಪಡಿಸುವ ಗೋದಲಿಯ ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್‌ನಲ್ಲಿ ಶನಿವಾರ ನಡೆಯಿತು.
ಉದ್ಘಾಟನೆ ನೆರವೇರಿಸಿ ಶುಭ ಸಂದೇಶ ನೀಡಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊ, ವಿಶ್ವಾದ್ಯಂತ ಆಚರಿಸಲ್ಪಡುವ ಕ್ರಿಸ್ಮಸ್ ಹಬ್ಬವು ಜನರಲ್ಲಿ ಶಾಂತಿ, ಪ್ರೀತಿ, ಸಹಿಷ್ಣುತೆಯ ಪ್ರತೀಕವಾಗಿದೆ. ಈ ಹಬ್ಬದ ಆಚರಣೆಯು ನಾಡಿನ ಜನರಲ್ಲಿ ನೆಮ್ಮದಿ ಮತ್ತು ಸಹೋದರತಾ ಭಾವನೆಯನ್ನು ಉಂಟು ಮಾಡುವಂತಾಗಲಿ ಎಂದು ಹೇಳಿದರು.
ಗೋದಲಿ ನಿರ್ಮಾಣದ ಹಿನ್ನೆಲೆ
ಗೋದಲಿ ಬಗ್ಗೆ ಮಾತನಾಡುತ್ತಾ, ಏಸುವಿನ ಜನನದ ಘಟನಾವಳಿ ಪ್ರಕಾರ, ತುಂಬು ಗರ್ಭಿಣಿ ಮಾತೆ ಮರಿಯಾ ಮತ್ತು ಆಕೆಯ ಪತಿ ಜೋಸೆಫ್, ಜನಗಣತಿಗೆ ಹೆಸರು ನೋಂದಾಯಿಸಲು ತಮ್ಮ ಹುಟ್ಟೂರಾದ ಬೆತ್ಲೆಹೆಮ್‌ಗೆ ಹೋಗುತ್ತಾರೆ. ಅವರಿಗೆ ಅಲ್ಲೆಲ್ಲೂ ಸೂಕ್ತ ನೆಲೆ ಸಿಗದೆ, ಕೊನೆಗೆ ಊರ ಹೊರಗಿನ ಹಟ್ಟಿಯೊಂದರಲ್ಲಿ ವಿಶ್ರಮಿಸುತ್ತಾರೆ. ಆ ಸಂದರ್ಭ ಅತ್ಯಂತ ಬಡ ಪರಿಸರದಲ್ಲಿ ಏಸುವಿನ ಜನನವಾಗುತ್ತದೆ. ಈ ವೃತ್ತಾಂತವನ್ನು ಸಾದರಪಡಿಸುವ ಸಂಪ್ರದಾಯ ಕ್ರಿ.ಶ. 13ನೇ ಶತಮಾನದಲ್ಲಿ ಆರಂಭಗೊಂಡಿತು.
ಅಂದಿನಿಂದ, ಗೋದಲಿಯ ರಚನೆ ಮತ್ತು ಶೃಂಗಾರ ಕ್ರಿಸ್ಮಸ್ ಆಚರಣೆಯ ಒಂದು ಭಾಗವಾಗಿ ವಿಶ್ವಾದ್ಯಾಂತ ಜನಪ್ರಿಯವಾಗಿದೆ. ಸಂತ ಫಿಲೋಮಿನಾ ಕ್ಯಾಂಪಸ್ ನ ಗೋದಲಿಯು ನೈಸರ್ಗಿಕ ಪರಿಸರದಲ್ಲಿಯೇ ನಿರ್ಮಾಣಗೊಂಡಿದೆ. ಕಾಲೇಜಿನ ದಿವ್ಯ ಚೇತನ ಸಂಘದ ಸದಸ್ಯರ ಅವಿರತ ಶ್ರಮದ ಫಲವಾಗಿ ರಚನೆಯಾದ ಈ ಗೋದಲಿಯು ನೋಡುಗರ ಕಣ್ಮನ ಸೆಳೆಯುತ್ತದೆ ಎಂದು ಹೇಳಿದರು.
ದಿವ್ಯ ಚೇತನ ಸಂಘದ ನಿರ್ದೇಶಕ ವಂ| ರಿತೇಶ್ ರೋಡ್ರಿಗಸ್, ಸದಸ್ಯರನ್ನು ಅಭಿನಂದಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಪ್ರೊ| ಲಿಯೊ ನೊರೊನ್ಹಾ, ಕಚೇರಿ ಅ ಧೀಕ್ಷಕ ವಿಕ್ಟೋರಿಯನ್ ಫೆರ್ನಾಂಡಿಸ್, ಸಿಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.