ನಗರದಲ್ಲಿ ಧನ ಸಂಗ್ರಹ ಜಾಥಾ
Team Udayavani, Nov 22, 2017, 3:41 PM IST
ನಗರ: ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಚಿಕಿತ್ಸೆ ಸಿಗದೇ ಮೃತಪಟ್ಟ ವಿದ್ಯಾರ್ಥಿನಿ ಪೂಜಾಳ ಕುಟುಂಬಕ್ಕೆ ಧನಸಹಾಯ ನೀಡುವ ಉದ್ದೇಶದಿಂದ ಸಾರ್ವಜನಿಕ ಹಿತರಕ್ಷಣಾ ವೇದಿಕೆ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಪುತ್ತೂರು ಪೇಟೆಯಲ್ಲಿ ಧನ ಸಂಗ್ರಹ ಜಾಥಾ ನಡೆಯಿತು.
ರಾಜ್ಯಸರಕಾರ ನೇರ ಹೊಣೆ
ಹಿಂದೂ ಸಂಘಟನೆ ಮುಖಂಡ ಡಾ| ಪ್ರಸಾದ್ ಭಂಡಾರಿ ಜಾಥಾಕ್ಕೆ ದರ್ಬೆಯಲ್ಲಿ ಚಾಲನೆ ನೀಡಿ, ಮಾತನಾಡಿ ಪೂಜಾಳ ಸಾವಿಗೆ ಸಿದ್ಧರಾಮಯ್ಯ ಸರಕಾರವೇ ಕಾರಣ. ಕಬಕ ವಿದ್ಯಾಪುರ ನಿವಾಸಿ ಪೂಜಾ ಅವರ ಸಾವಿಗೆ ವೈದ್ಯರ ಮುಷ್ಕರ ಕಾರಣವಲ್ಲ. ಸರಕಾರದ ನೀತಿಯೇ ಕಾರಣ ಎಂದರು.
ಆಡಳಿತ ವೈಫಲ್ಯ
ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ವೈದ್ಯರ ಮುಷ್ಕರದ ಸಂದರ್ಭ ರಾಜ್ಯ ಸರಕಾರ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಪೂಜಾ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಳ್ಳಬೇಕಾಯಿತು. ಸರಕಾರದ ಆಡಳಿತ ವೈಫಲ್ಯದಿಂದ ಇಂತಹ ಅಮಾಯಕರು ಪ್ರಾಣ ತೆರಬೇಕಾಯಿತು. ಈ ಜಾಥದ ಮೂಲಕ ದೊಡ್ಡ ಮೊತ್ತ ಸಂಗ್ರಹಿಸಿ ಸರಕಾರಕ್ಕೆ ಜನಸಾಮಾನ್ಯನ ಶಕ್ತಿ ಗೊತ್ತು ಮಾಡಿಸಬೇಕು ಇವತ್ತು ನಡೆಯುವ ಧನ ಸಂಗ್ರಹ ಜಾಥಾದಲ್ಲಿ ಸಾಕಷ್ಟು ಮೊತ್ತವನ್ನು ಸಂಗ್ರಹಿಸಿ ಇಂದೇ ಸಂಜೆ ಪೂಜಾಳ ಮನೆಗೆ ಹೋಗಿ ಅದನ್ನು ಹಸ್ತಾಂತರಿಸಲಾಗುವುದು ಎಂದರು.
ನಗರಸಭೆ ಉಪಾಧ್ಯಕ್ಷ ವಿಶ್ವನಾಥ ಗೌಡ, ನಗರಸಭೆ ಸದಸ್ಯರಾದ ರಾಜೇಶ್ ಬನ್ನೂರು, ಸುಜೀಂದ್ರ ಪ್ರಭು, ತಾ. ಪಂ. ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ವಿಶ್ವ ಕರ್ಮ ಸಮಾಜದ ಮುಖಂಡರಾದ ಗೋಪಾಲಕೃಷ್ಣ ಆಚಾರ್ಯ, ಹರೀಶ್ ಆಚಾರ್ಯ, ಸಾರ್ವಜನಿಕ ಹಿತರಕ್ಷಣಾ ವೇದಿಕೆಯ ರಾಕೇಶ್ ನಾಯಕ್ ಪರ್ಲಡ್ಕ, ಹಿಂದೂ ಜಾಗರಣ ವೇದಿಕೆಯ ಅಜಿತ್ ರೈ ಹೊಸಮನೆ, ನವೀನ್ ಪಟ್ನೂರು, ಕೋರ್ಟ್ ರಸ್ತೆಯ ಪಂಚಮುಖೀ ಫ್ರೆಂಡ್ಸ್ ನ ಸದಸ್ಯರು ಉಪಸ್ಥಿತರಿದ್ದರು.
ದರ್ಬೆಯಿಂದ ಬೊಳುವಾರು ವರೆಗೆ ಜಾಥಾದಲ್ಲಿ ತೆರಳಿ, ಧನ ಸಂಗ್ರಹ ಮಾಡಲಾಯಿತು. ಡಾ| ಎಂ.ಕೆ.ಪ್ರಸಾದ್ ಭಂಡಾರಿ ನಿಧಿ ಸಂಗ್ರಹಕ್ಕೆ ದೇಣಿಗೆ ನೀಡುವ ಮೂಲಕ ಚಾಲನೆ ನೀಡಿದರು. ಎಂಟು ಯುವಕರು ಧನ ಸಂಗ್ರಹ ಮಾಡಿದರು.
ಪರಿಹಾರ ನೀಡಲು ಆಗ್ರಹ
ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಮೊದಲೇ ಕಾಯಿದೆಯನ್ನು ತರಲು ಮುಂದಾಗುವ ಮೂಲಕ ಸಮಾಜದಲ್ಲಿ ಅಲ್ಲೋಲಕಲ್ಲೋಲ ಉಂಟಾಗಲು ಕಾರಣವಾಯಿತು. ಸರಕಾರದ ಈ ನೀತಿಯಿಂದಾಗಿ ಅಮಾಯಕ ಜೀವಗಳು ಪ್ರಾಣ ಕಳೆದುಕೊಂಡವು. ಬಡತನದಲ್ಲಿರುವ ಪೂಜಾಳ ಕುಟುಂಬಕ್ಕೆ ಈಗ ಸಮಾಜವೇ ಮುಂದೆ ನಿಂತು ಸಹಾಯ ಮಾಡಬೇಕಿದೆ ಎಂದರು. ವೈದ್ಯರ ಮುಷ್ಕರದ ಸಂದರ್ಭ ಮೃತಪಟ್ಟ ರಾಜ್ಯದ ಎಲ್ಲ ಜನರ ಕುಟುಂಬಕ್ಕೆ ಸರಕಾರ ತಲಾ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.