ನಗರದ ದಾಹ ತಣಿಸಲಿದೆ ಪುತ್ತಿಗೆ ಕೂಟಗುಂಡಿಯ ನೀರು
Team Udayavani, May 9, 2019, 6:10 AM IST
ಪುತ್ತಿಗೆ ಸೇತುವೆ ಬಳಿಯ ಕೂಟ ಗುಂಡಿಯಲ್ಲಿ ಸಂಗ್ರಹವಾದ ನೀರು
ಉಡುಪಿ: ಪುತ್ತಿಗೆ ಸೇತುವೆ ಬಳಿಯ ಕೂಟ ಗುಂಡಿಯಲ್ಲಿ ನಗರಕ್ಕೆ ಮುಂದಿನ 15 ದಿನಗಳಿಗೆ ಬೇಕಾಗುವಷ್ಟು ನೀರಿದ್ದು, ನಗರಸಭೆ ಅಧಿಕಾರಿಗಳು ಭಂಡಾರಿಬೆಟ್ಟು ಬ್ರಹ್ಮರ ಗುಂಡಿಯಲ್ಲಿ ನೀರೆತ್ತುವ ಕಾರ್ಯ ಮುಗಿದ ತತ್ಕ್ಷಣ ಕೂಟ ಗುಂಡಿಯ ನೀರೆತ್ತುವಿಕೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಬಜೆ ಅಣೆಕಟ್ಟಿನಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ಇರುವ ಕೂಟ ಗುಂಡಿಯಿಂದ ಆದಷ್ಟು ಶೀಘ್ರ ನೀರೆತ್ತುವ ಕಾರ್ಯ ನಡೆಯಬೇಕು. ಇಲ್ಲವಾದರೆ ಸೂರ್ಯನ ಶಾಖಕ್ಕೆ ನೀರು ಆವಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರಾದ ಸುಧಾಕರ್ ಶೆಟ್ಟಿ ಮಟ್ಟಿಬೈಲು ತಿಳಿಸಿದ್ದಾರೆ.
ಗ್ರಾಮಸ್ಥರಿಂದ ವಿರೋಧ
2 ವರ್ಷದ ಹಿಂದೆ ನಗರಕ್ಕೆ ನೀರಿನ ಸಮಸ್ಯೆ ಹೆಚ್ಚಿದಾಗ ಪುತ್ತಿಗೆ ಸೇತುವೆ ಬಳಿಯ ಗುಂಡಿಯಿಂದ ನೀರೆತ್ತಲು ಪ್ರಯತ್ನಿಸಿದ್ದರೂ ಗ್ರಾಮಸ್ಥರ ತೀವ್ರ ವಿರೋಧದ ಹಿನ್ನೆಲೆ ಯಲ್ಲಿ ಅಲ್ಪ ಪ್ರಮಾಣದ ನೀರನ್ನು ಮಾತ್ರ ಪಂಪಿಂಗ್ ಮಾಡಲಾಗಿತ್ತು.
ಮಧ್ಯಪ್ರವೇಶ ಅಗತ್ಯ
ಈಗಲೂ ಸೇತುವೆ ಆಸುಪಾಸಿನ ಗ್ರಾಮಸ್ಥರು ಪ್ರತಿಭಟಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮಂಗಳವಾರ ಮಾಣಾಯ್, ಬಸ್ತಿ ಬಳಿ ನೀರೆತ್ತುವುದಕ್ಕೆ ವಿರೋಧಿಸಿದ ಗ್ರಾಮಸ್ಥರಿಗೆ ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ನೀರು ಪೂರೈಸಿ ಶಾಸಕ ಕೆ. ರಘುಪತಿ ಭಟ್ ಮನವೊಲಿಸಿದಂತೆ ಪುತ್ತಿಗೆ ಆಸುಪಾಸಿನ ಗ್ರಾಮಸ್ಥರನ್ನೂ ಮನವೊಲಿಸಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.