ವಿದ್ಯಾಕಲ್ಪಕ ಯೋಜನೆ ಶಿಬಿರ ಸಮಾರೋಪ
ವಿಶ್ವ ಕೊಂಕಣಿ ಕೇಂದ್ರದಿಂದ ವಿದ್ಯಾರ್ಥಿ ವೇತನ ಯೋಜನೆ
Team Udayavani, Jul 4, 2019, 5:14 AM IST
ಮಹಾನಗರ: ವಿಶ್ವ ಕೊಂಕಣಿ ಕೇಂದ್ರದ ‘ವಿದ್ಯಾಕಲ್ಪಕ’ ವಿದ್ಯಾರ್ಥಿ ವೇತನ ಯೋಜನೆಯಡಿ ವಿದ್ಯಾರ್ಥಿ ವೇತನ ಪಡೆದ ಅರ್ಹ ವಿದ್ಯಾರ್ಥಿಗಳಿಗಾಗಿ ನಡೆದ ‘ಕ್ಷಿತಿಜ’ 2 ನೇ ಹಂತದ ತರಬೇತಿ ಶಿಬಿರದ ಸಮಾರೋಪ ಇತ್ತೀಚೆಗೆ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿದ್ದ ಕರ್ಣಾಟಕ ಬ್ಯಾಂಕನ ಮುಖ್ಯ ಆಡಳಿತ ಅಧಿಕಾರಿ ಗೋಕುಲದಾಸ್ ಪೈ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಜೀವನದ ಕಷ್ಟದ ದಿನಗಳನ್ನು ಮರೆಯದೆ ತಮಗೆ ಒದಗಿದ ಫಲಾನುಭವದ ಪ್ರಯೋಜನ ಪಡೆದು ಮುಂದೆ ಸಮಾಜಕ್ಕೆ ನೀಡುವ ಕಾರ್ಯ ಕ್ಷಮತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿ ಉದ್ಯಮಿ ವತಿಕಾ ಪೈ ಅವರು ತಮ್ಮ ಜೀವನದ ಅನುಭವವನ್ನು ವಿವರಿಸಿ ಎಲ್ಲರೂ ಶ್ರಮಪಟ್ಟು, ನಿಶ್ಚಿತ ಗುರಿಯನ್ನು ಸಾಧಿಸಲು ಸಾಧನೆ ಮಾಡಬೇಕು ಎಂದರು.
ಇನ್ನೋರ್ವ ಅತಿಥಿ ನಿಟ್ಟೆ ವಿದ್ಯಾ ಸಂಸ್ಥೆಯ ಡಾ| ಉದಯ ಕುಮಾರ್ ಶೆಣೈ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಆಂತರಿಕ ಶಕ್ತಿಯನ್ನು ತಿಳಿದು ಜೀವನದಲ್ಲಿ ಮುಂದೆ ಒಳ್ಳೆಯ ನೀತಿವಂತ ಪ್ರಜೆಗಳಾಗಬೇಕು. ಶಿಕ್ಷಣವು ನಾಲ್ಕು ಗೋಡೆಗಳ ಮಧ್ಯಕ್ಕೆ ಸೀಮಿತವಾಗದೆ ಅದನ್ನು ಇತರರಿಗೂ ನೀಡಲು ನೆರವಾಗಬೇಕು ಎಂದು ಹೇಳಿದರು.
ವಿದ್ಯಾಕಲ್ಪಕ ವಿದ್ಯಾರ್ಥಿ ವೇತನ ಯೋಜನೆಯ ಮುಖ್ಯಸ್ಥ ಹಾಗೂ ಲೆಕ್ಕ ಪರಿಶೋಧಕ ನಂದಗೋಪಾಲ ಶೆಣೈ ಪ್ರಸ್ತಾವನೆಗೈದು ಪ್ರತಿಯೊಬ್ಬ ವಿದ್ಯಾರ್ಥಿ ಇತರ ವಿದ್ಯಾರ್ಥಿಗಳಿಗೆ ತನ್ನಿಂದಾದಷ್ಟು ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಶಿಬಿರದ ಅನುಭವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾಕಲ್ಪಕ ವಿದ್ಯಾರ್ಥಿ ವೇತನ ಯೋಜನೆಯ ಸದಸ್ಯ ಸುರೇಂದ್ರ ನಾಯಕ್, ವಿಶ್ವ ಕೊಂಕಣಿ ಭಾಷಾ ಸಂಸ್ಥಾನ ನಿರ್ದೇಶಕ ಗುರುದತ್ತ ಬಂಟ್ವಾಳಕಾರ, ವಿದ್ಯಾಕಲ್ಪಕ- ಕ್ಷಿತಿಜ ಶಿಬಿರದ ಉಸ್ತುವಾರಿ ವಿಶ್ವ ಕುಮಾರ ಭಟ್ ಉಪಸ್ಥಿತರಿದ್ದರು.
ಮೂರು ದಿನಗಳ ಶಿಬಿರದ ಬಗ್ಗೆ ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಾಗೂ ವಿವಿಧ ಚಟುವಟಿಕೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿದರು.
ಶಿಬಿರದಲ್ಲಿ ಏರ್ಪಡಿಸಿದ್ದ ವಿವಿಧ ಸರ್ಧೆಗಳ ವಿಜೇತರಿಗೆ ಬಹುಮಾನ ಹಾಗೂ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.