ಮಕ್ಕಳ ಕನಸುಗಳಿಗೆ ಜೀವ ತುಂಬಿದ “ಬಣ್ಣದ ಹಾಡು’
Team Udayavani, Apr 25, 2019, 5:55 AM IST
ಸವಣೂರು: ಹಾಡು ಬಣ್ಣದ ಹಾಡು, ಹಾಡು ಬಣ್ಣದ ಹಾಡು, ದೇವರಿಗೆ ಭಕ್ತಿಯ ಹಾಡು, ಮಾತಿಗೆ ಸತ್ಯದ ಹಾಡು, ನಡತೆಗೆ ವಿನಯದ ಹಾಡು,ಕಾರ್ಯಕ್ಕೆ ಶ್ರದ್ಧೆಯ ಹಾಡು… ಹೀಗೆ ಹಾಡುತ್ತಾ ಕುಣಿಯುತ್ತಾ, ಕುಪ್ಪಳಿಸುತ್ತಲೇ ಅಲ್ಲಿ ಒಂದಷ್ಟು ´ೋಮ್ ಮುಖವಾಡಗಳು ಸಿದ್ಧಗೊಂಡವು. ಕ್ರೆಯಾನ್ ಚಿತ್ರಗಳು ಮೂಡಿಬಂದವು, ಬೆಕ್ಕುಗಳು ಜೀವ ಪಡೆದವು, ರಂಗೋಲಿಗಳು ಬೆಳಗಿದವು. ಗ್ಲಾಸ್ ಪೈಂಟಿಂಗ್ ಗಳು ಮಿಂಚಿದವು. ಗೂಡುದೀಪ, ಗೆರೆಟೆ ಚಿತ್ರಕಲೆ, ಅಲಂಕಾರಿಕ ವಸ್ತುಗಳು, ಬಣ್ಣದ ಚಿತ್ತಾರಗಳು, ರೂಪುಗೊಂಡವು. ಇದೆಲ್ಲವೂ ಮಕ್ಕಳ ಕೈ ಚಳಕದಿಂದಲೇ.
ಒಂದೆಡೆ ಹಾಡು, ಇನ್ನೊಂದೆಡೆ ಕ್ರಾಫ್ಟ್, ಮತ್ತೂಂದೆಡೆ ಚಿತ್ರಕಲೆ, ಮಗದೊಂದೆಡೆ ರಂಗವಲ್ಲಿ. ಹೀಗೆ ಬೆಳಗ್ಗೆಯಿಂದ ಸಂಜೆಯ ತನಕ ಮಕ್ಕಳ ಕೈ ತುಂಬಾ ಕೆಲಸಗಳು, ಮನತುಂಬಾ ಆಲೋಚನೆಗಳು, ಮೈ ಮನಸ್ಸೆಲ್ಲ ಖುಷಿಯೋ ಖುಷಿ. ಇದು ಬಣ್ಣದ ಹಾಡು ಮಕ್ಕಳ ಕಲಿಕಾ ಸಂಭ್ರಮ. ಇದು ನಡೆದದ್ದು ಪುಣcಪ್ಪಾಡಿ ಸರಕಾರಿ ಶಾಲೆಯಲ್ಲಿ. ಮೂರು ದಿನಗಳ ಕಾಲ ನಡೆದ ಈ ಸಂಭ್ರಮ ಹಲವು ಹೊಸತನಗಳಿಗೆ ಸಾಕ್ಷಿಯಾಯಿತು.
ಮಾಹಿತಿ, ತಿಳಿವಳಿಕೆ
ವಿಶೇಷವೆಂದರೆ ಹಿರಿಯ ಶಿಕ್ಷಣ ತಜ್ಞ ಡಾ| ಎನ್. ಸುಕುಮಾರ ಗೌಡ ಅವರು ಮಕ್ಕಳ ಜತೆ ಅರ್ಧ ದಿನಗಳ ಕಾಲ ಭಾಗಿಯಾದರು. ಜೊತೆಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಿಂದಲೇ ಮಕ್ಕಳಿಗೆ ಮಕ್ಕಳ ಹಕ್ಕಿನ ಬಗ್ಗೆ ಮಾಹಿತಿ, ರಘುರಾಜ ಉಬರಡ್ಕ ಅವರಿಂದ ಮಾನವೀಯ ಸಂಬಂಧಗಳ ಬಗ್ಗೆ ಮಾತುಕತೆ, ವೆಂಕಟೇಶ್ ಅವರಿಂದ ಮಾನವೀಯ ಮೌಲ್ಯಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.
ಶಿಕ್ಷಣದಲ್ಲಿ ಹಿರಿಮೆಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ನಾರಾಯಣ ರೈ ಕುಕ್ಕುವಳ್ಳಿಯವರು ಮಕ್ಕಳಿಗೆ ಕವನದ ಬಗ್ಗೆ ಹೇಳಿಕೊಟ್ಟರು. ಆಳ್ವಾಸ್ ಮೂಡುಬಿದಿರೆಯ ಕಲಾ ಶಿಕ್ಷಕ ಭಾಸ್ಕರ ನೆಲ್ಯಾಡಿ ಗೂಡುದೀಪ, ಕ್ರೆಯಾನ್‌ನಿಂದ ಸರಳ ಚಿತ್ರಗಳ ರಚನೆ ಹಾಗೂ ´ೋಮ್‌ನಿಂದ ಅಲಂಕಾರಿಕ ವಸ್ತುಗಳನ್ನು ಮಕ್ಕಳಿಂದಲೇ ತಯಾರಿಸಿದರು. ರಂಗನಿರ್ದೇಶಕ ಶಿವಗಿರಿ ಕಲ್ಲಡ್ಕ ಕಾಗದದಿಂದ ಬೆಕ್ಕು, ಇಲಿ, ಬೊಂಬೆ ಮುಂತಾದವುಗಳನ್ನು ತಯಾರಿಸುವುದನ್ನು ಕಲಿಸಿದರು.
ಮೊಗದಲ್ಲಿ ಪೈಂಟಿಂಗ್
ಚಿತ್ರ ಕಲಾವಿದ ಜಗನ್ನಾಥ್ ಅರಿಯಡ್ಕ ಗ್ಲಾಸ್ ಪೈಂಟಿಂಗ್‌ಗಳಲ್ಲಿ ಮಕ್ಕಳು ಅಚ್ಚರಿ ಪಡುವಂತೆ ಮಾಡಿದರು. ಮಕ್ಕಳ ಮೊಗದಲ್ಲಿ ಪೈಂಟಿಂಗ್ ಗಮನ ಸೆಳೆಯಿತು. ರಂಗವಲ್ಲಿ ಕಲಾವಿದೆ ರೋಹಿಣಿ ರಾಘವ ಮಕ್ಕಳಿಂದ ಭಿನ್ನ ಭಿನ್ನ ರಂಗವಲ್ಲಿ ಬಿಡಿಸುವಂತೆ ಮಾಡಿದರು. ಮುಕ್ವೆ ಶಾಲೆಯ ´ೋಮ್ನ ಮುಖವಾಡ ತಯಾರಿ, ಶ್ರವಣರಂಗದ ತಾರಾನಾಥ್ ಸವಣೂರು ಅಭಿನಯಗೀತೆ, ಸಂಜಯನಗರ ಶಾಲೆಯ ರಮೇಶ್ ಉಳಯರ ಹಾಡಿನ ತರಗತಿಗಳು ಮಕ್ಕಳನ್ನು ಬಹಳಷ್ಟು ಸಂಭ್ರಮಿಸುವಂತೆ ಮಾಡಿತು. ಪ್ರದೀಪ್ ಪಾಣಾಜೆಯ ಮೇಕಪ್ ತರಗತಿಯೂ ಮಕ್ಕಳ ಮನ ಸೆಳೆಯಿತು. ಮುಖದ ಬಣ್ಣದೊಂದಿಗೆ ಎಲ್ಲರೂ ಖುಷಿಪಟ್ಟರು.
ಹೆತ್ತವರೂ ಪಾಲ್ಗೊಂಡರು
ಹೆತ್ತವರ ಪಾಲ್ಗೊಳ್ಳುವಿಕೆ, ಊರವರು ಈ ಕೂಟವನ್ನು ಊರಿನ ಹಬ್ಬದಂತೆ ಸಂಭ್ರಮಿಸಿದರು. ಪ್ರತಿದಿನ ಹೆತ್ತವರ ಒಂದು ತಂಡ ಮಕ್ಕಳಿಗೆ ಬೇಕಾದ ಆಹಾರವನ್ನು ಸಿದ್ಧಪಡಿಸಿಕೊಡುವುದು, ಮಕ್ಕಳ ಜತೆ ಹೆತ್ತವರೂ ಕೂಡಾ ಚಿತ್ರ ಮಾಡುವುದು, ಆಟವಾಡುವುದು ಕೂಟಕ್ಕೆ ಇನ್ನಷ್ಟು ಮೆರುಗು ನೀಡಿತ್ತು. ಶಾಲೆಯ ಮುಖ್ಯಗುರುಗಳ ಸಹಿತ ಮಾರ್ಗದರ್ಶಕರು, ದಾನಿಗಳು, ಗಣ್ಯರು ಪಾಲ್ಗೊಂಡಿದ್ದರು.
ಭಿನ್ನವಾದ ಶಿಬಿರ
ನಾವು ಎರಡು ವರ್ಷದಿಂದ ನಮ್ಮ ಶಾಲೆಯಲ್ಲೇ ಬೇಸಗೆ ಶಿಬಿರದಲ್ಲಿ ಪಾಲೊಳ್ಳುತ್ತಿದ್ದೇವೆ. ಕಳೆದ ವರ್ಷಕ್ಕಿಂತ ಭಿನ್ನವಾದ ಶಿಬಿರ ಇದಾಗಿತ್ತು. ನಾವು ಬಹಳಷ್ಟು ವಿಷಯಗಳನ್ನೂ ಕಲಿತುಕೊಂಡು ತುಂಬಾ ಖುಷಿ ಪಟ್ಟೆವು.
– ಸುಹಾನಿ ಮತ್ತು ಪಿ.ಆರ್. ಮೋಕ್ಷಿತ್ 6ನೇ ತರಗತಿ ವಿದ್ಯಾರ್ಥಿಗಳು
ಪ್ರಯೋಜನಕಾರಿ
ಕಳೆದೆರಡು ವರ್ಷಗಳಿಂದ ನಾವು ನಮ್ಮ ಶಾಲೆಯಲ್ಲಿ ಮಕ್ಕಳ ಬೇಸಗೆ ಶಿಬಿರವನ್ನು ಮಾಡುತ್ತಿದ್ದೇವೆ. ಮಕ್ಕಳು ಬೆಳೆಯಲು ಇಂತಹ ಅವಕಾಶಗಳು ಪ್ರಯೋಜನಕಾರಿ..
– ಜನಾರ್ದನ ಗೌಡ, ಹೆತ್ತವರು
ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.