ಕಾಂಕ್ರೀಟ್ ನೆಲದ ಹಪಹಪಿಕೆ ಸಲ್ಲದು: ಡಾ| ಹಂಚಿನಾಳ್
Team Udayavani, Mar 19, 2017, 3:21 PM IST
ಪುತ್ತೂರು : ಸಸ್ಯಲೋಕದಿಂದ ಹೆಚ್ಚಿನ ಪ್ರಯೋಜನವಿದ್ದರೂ ಕಾಂಕ್ರೀಟ್ ಯುಗದ ಹಪಹಪಿಕೆ ಹಸಿರು ನೆಲವನ್ನು ಬರಿದುಗೊಳಿಸುತ್ತಿರುವುದು ವಿಷಾದದ ಸಂಗತಿ ಎಂದು ದಿಲ್ಲಿಯ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಣೆ ಹಾಗೂ ಕೃಷಿಕರ ಹಕ್ಕುಗಳ ಪ್ರಾಧಿಕಾರದ ಮುಖ್ಯಸ್ಥ ಡಾ| ಆರ್.ಆರ್. ಹಂಚಿನಾಳ್ ಹೇಳಿದರು.
ತಾಲೂಕಿನ ಕೆದಂಬಾಡಿ ಗ್ರಾಮದ ಕಡ ಮಜಲು ಸ್ವೇದಬಿಂದು ಗೇರು ತೋಟದಲ್ಲಿ ಗೇರು ಸಂಶೋಧನ ನಿರ್ದೇಶನಾಲಯ ಪುತ್ತೂರು, ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ ಹೊಸದಿಲ್ಲಿ ಆಶ್ರಯದಲ್ಲಿ ಶನಿವಾರ ನಡೆದ ಸಸ್ಯತಳಿ ಸಂರಕ್ಷಣೆ ಮತ್ತು ಕೃಷಿಕರ ಹಕ್ಕುಗಳ ಕಾಯಿದೆಯ ಬಗ್ಗೆ ಮಾಹಿತಿ ಕಾರ್ಯಾ ಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಸ್ಯಪ್ರಭೇದ ಅತ್ಯಧಿಕ ಪ್ರಮಾಣದಲ್ಲಿರುವ ಜಗತ್ತಿನ 17 ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಆಧುನಿಕವಾಗಿ ನಾವು ಮುಂದುವರಿದ್ದರೂ ರೋಗ ರುಜಿನಗಳಿಗೆ ಔಷಧ ರೂಪದಲ್ಲಿ ಗಿಡಮೂಲಿಕೆ ಬಳಕೆ ಬಿಟ್ಟಿಲ್ಲ ಎಂದರು.
ಡಬ್ಲ್ಯುಟಿಒ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಸ್ಯ ತಳಿಗಳ ಕೊಡು-ಕೊಳ್ಳುವಿಕೆಗೆ ಒಪ್ಪಂದ ನಡೆಯುತ್ತಿದೆ. ತಳಿಗಳ ನೋಂದ ಣಿಗೊಳ್ಳದಿದ್ದರೆ, ಇನ್ಯಾರೋ ಅದರ ಸಂಶೋಧಕರು ಆಗಿ ಬಿಡುವ ಅಪಾಯ ವಿದೆ. ಭಾರತೀಯ ತಳಿಯನ್ನು ವಿದೇಶ ರಾಷ್ಟ್ರಗಳು ತನ್ನ ತಳಿ ಎಂದು ಹೇಳ ಬಹುದು. ಆದರೆ ನೋಂದಾಯಿತ ತಳಿಯಾದರೆ, ಅದರ ಹಕ್ಕು ಹೊಂದಿ ದವರು ಒಪ್ಪಿಗೆ ಪಡೆಯದೇ ತಳಿ ಪರಭಾರೆ ಮಾಡುವುದು ಅಸಾಧ್ಯ ಎಂದರು.
ಗೇರು ಬೆಳೆ ಆಶಾದಾಯಕ
ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಅಡಿಕೆ ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳು ಕಾರ್ಮಿಕರ ಕೊರತೆ, ನೀರಿನ ಸಮಸ್ಯೆ, ವ್ಯವಸ್ಥಿತ ಮಾರು ಕಟ್ಟೆ ಇಲ್ಲದೆ ಸವಾಲು ಎದುರಿಸುತ್ತಿದೆ. ಅಂತಹ ಯಾವ ಸವಾಲುಗಳು ಇಲ್ಲದ ಗೇರು ಬೆಳೆ ಕೃಷಿಕರ ಪಾಲಿಗೆ ಆಶಾದಾಯಕ ವೆನಿಸಿದೆ ಎಂದು ಅವರು ಹೇಳಿದರು.
ಪ್ರಯೋಗಶೀಲ ಮನಸ್ಸು
ದೇಶದ ಇತರೆ ಭಾಗಗಳಿಗೆ ಹೋಲಿಕೆ ಮಾಡಿದರೆ, ದ.ಕ. ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣ ವರದಿಯಾಗುವುದು ಅತಿ ವಿರಳ. ಕಾರಣ ಇಲ್ಲಿನ ರೈತನದ್ದು ಪ್ರಯೋಗಶೀಲ ಮನಸ್ಸು. ಒಂದು ಬೆಳೆ ಕೈ ಕೊಟ್ಟಾಗ ತಲೆಗೆ ಕೈ ಹೊತ್ತು ಕೂರದೇ ಭತ್ತ, ಅಡಿಕೆ, ರಬ್ಬರ್, ಕೊಕ್ಕೋ, ಕರಿಮೆಣಸು, ಗೇರು ಹೀಗೆ ಕಾಲ-ಕಾಲಕ್ಕೆ ಆದಾಯ ತಂದೊಡ್ಡುವ ಕೃಷಿಯತ್ತ ಹೊರಳಿ ಕೊಂಡ ಪರಿಣಾಮ, ಜಿಲ್ಲೆಯ ರೈತ ಸದೃಢ ನಾಗಿದ್ದಾನೆ ಎಂದರು.
ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತ ನಾಡಿ, ಗೇರು ಕೃಷಿ ರೈತ ಮಿತ್ರನಾಗಿ ಬದಲಾಗುತ್ತಿರುವ ಈ ಕಾಲದಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸು ವುದು ಅತ್ಯಗತ್ಯ. ತಳಿಗಳ ಸಂರಕ್ಷಣೆ, ಕೃಷಿಕ ಹಕ್ಕುಗಳ ಕಾಯಿದೆ ಪರಿಣಾಮಕಾರಿಯಾಗಿ ಅನು ಷ್ಠಾನಿಸುವ ಪ್ರಯತ್ನ ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಅಂತಾರಾಷ್ಟ್ರೀಯ ಜೀವವೈವಿಧ್ಯತಾ ಸಂಸ್ಥೆಯ ದಕ್ಷಿಣ ಏಷ್ಯಾ ವಲಯದ ನಿರ್ದೇಶಕ ಡಾ| ಎನ್.ಕೆ. ಕೃಷ್ಣ ಕುಮಾರ್ ಭವಿಷ್ಯದ ದಿನದಲ್ಲಿ ಗೇರು ಮತ್ತು ಕೊಕ್ಕೋ ಕೃಷಿಗೆ ಅತ್ಯಧಿಕ ಬೇಡಿಕೆ ಬರಲಿದೆ ಎಂದು ಅಂಕಿ-ಅಂಶದೊಂದಿಗೆ ವಿಶ್ಲೇಷಿಸಿದರು.ಸಸ್ಯತಳಿ ಸಂರಕ್ಷಣೆ ಹಾಗೂ ಕೃಷಿಕರ ಹಕ್ಕುಗಳ ಪ್ರಾಧಿಕಾರದ ಆರ್.ಸಿ. ಅಗರ್‌ವಾಲ್ ಉಪಸ್ಥಿತರಿದ್ದರು. ಇದೇ ಸಂದರ್ಭ ಪುತ್ತೂರು ಗೇರು ಸಂಶೋಧನ ನಿರ್ದೇಶನಾಲಯ ಪ್ರಕಟಿತ ಸುಧಾರಿತ ಗೇರು ಬೇಸಾಯ ಹಾಗೂ ಗೇರು ಮರಗಳ ಪುನಶ್ಚೇತನ ತಾಂತ್ರಿಕತೆಗಳು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಪ್ರಗತಿಪರ ಗೇರು ಕೃಷಿಕ ಕಡಮಜಲು ಸುಭಾಸ್ ರೈ ಪ್ರಸ್ತಾವನೆಗೈದರು. ಪುತ್ತೂರು ಗೇರು ಸಂಶೋಧನ ನಿರ್ದೇಶನಾಲಯದ ಪ್ರಭಾರ ನಿರ್ದೇಶಕ ಮತ್ತು ಹಿರಿಯ ವಿಜ್ಞಾನಿ ಡಾ| ಎಂ.ಜಿ. ನಾಯಕ್ ಸ್ವಾಗತಿಸಿದರು. ಪ್ರಕಾಶ್ ಭಟ್ ನಿರೂಪಿಸಿದರು.
ಕರಿಮೆಣಸಿನ ಕಥೆ..!
ಭಾರತದಿಂದ ಕರಿಮೆಣಸು ಬಳ್ಳಿಯನ್ನು ಶ್ರೀಲಂಕಾ, ಇತರೆ ರಾಷ್ಟ್ರಗಳು ಆಮದು ಮಾಡಿಕೊಂಡು, ಅಲ್ಲಿ ಕೃಷಿ ಆರಂಭಿಸಿತ್ತು. ಭಾರತದಲ್ಲಿ ಕರಿಮೆಣಸು ತಳಿ ಸಂರಕ್ಷಣೆ ಬಗ್ಗೆ ಗಂಭೀರ ಪ್ರಯತ್ನ ಆಗಲಿಲ್ಲ. ಪರಿಣಾಮ ಶ್ರೀಲಂಕಾ ಭಾರತಕ್ಕಿಂತ ಹೆಚ್ಚಿನ ಪ್ರಮಾಣದ ಕರಿಮೆಣಸು ರಪು¤ ಮಾಡುತ್ತಿದೆ ಎಂದು ಡಾ| ಆರ್.ಆರ್. ಹಂಚಿನಾಳ್ ವಿವರಿಸಿದರು.
ಡಿ.ವಿ. ಹುಟ್ಟುಹಬ್ಬ !
ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತುರ್ತು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ ಶನಿವಾರ ಡಿ.ವಿ. ಅವರ ಹುಟ್ಟುಹಬ್ಬದ ಕಾರಣ, ಸುಭಾಷ್ ರೈ ಕಡಮಜಲು ನೇತೃತ್ವದಲ್ಲಿ ವೇದಿಕೆಯಲ್ಲಿ ದೀಪ ಬೆಳಗಿಸಿ, ಅವರಿಗೆ ಶುಭಕೋರಲಾಯಿತು. ಈ ಸಂದರ್ಭ ಪಕ್ಷಭೇದ ಮರೆತು ಜನಪ್ರತಿನಿಧಿಗಳು ಶುಭಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.