ಆರಂಭವಾಗದ ಮೂಲರ ಪಟ್ಣ ಸೇತುವೆ ಕಾಮಗಾರಿ
Team Udayavani, May 12, 2019, 6:00 AM IST
ಮೂಲರಪಟ್ಣದ ಮುರಿದು ಬಿದ್ದ ಸೇತುವೆ ಪಕ್ಕದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಮಣ್ಣಿನ ಸೇತುವೆ.
ಎಡಪದವು: ಮೂಲರಪಟ್ಣ ಸೇತುವೆ ಕುಸಿದು ವರ್ಷ ಕಳೆದಿದ್ದು, ನೂತನ ಸೇತುವೆ ಕಾಮಗಾರಿ ಇನ್ನೂ ಆರಂಭವಾಗದ ಕಾರಣ ಸಂಕಷ್ಟ ಮುಂದುವರಿದಿದೆ. ಮಳೆಗಾಲ ಹತ್ತಿರ ಇರುವುದರಿಂದ ಜನರೇ ನಿರ್ಮಿಸಿದ ತಾತ್ಕಾಲಿಕ ಮಣ್ಣಿನ ಸೇತುವೆ ಕೊಚ್ಚಿ ಹೋಗುವ ಭೀತಿಯಲ್ಲಿದೆ.
ಕಳೆದ ವರ್ಷ ಮಳೆಗಾಲದಲ್ಲಿ ಮೂಲರ ಪಟ್ಣದಲ್ಲಿ ಹಾದುಹೋಗಿರುವ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ದಿಢೀರ್ ಆಗಿ ಕುಸಿತಗೊಂಡು ಎಡಪದವು – ಬಂಟ್ವಾಳ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಕುಪ್ಪೆಪದವು, ಮುತ್ತೂರು, ನೋಣಲ್, ಎಡಪದವು, ಗಂಜಿಮಠದಿಂದ ಮೂಲರಪಟ್ಣ ಮುಖಾಂತರ ಬಂಟ್ವಾಳ ಬಿ.ಸಿ. ರೋಡ್‌ಗೆ ಸಂಪರ್ಕಿಸುವ ಪ್ರಯಾ ಣಿಕರಿಗೆ ಸಂಕಷ್ಟ ಎದುರಾಗಿದೆ.
ಮುತ್ತೂರು ಶಾಲಾ ಸಮೀಪ ಇರುವ ತೂಗು ಸೇತುವೆಯ ಮುಖಾಂತರ ಮೂಲರಪಟ್ಣದಿಂದ ಬಂಟ್ವಾಳ ಸಂಪರ್ಕಿಸಲು ಅವಕಾಶ ಕಲ್ಪಿಸಲಾಗಿದೆ. ಮೂಲರಪಟ್ಣದಿಂದ ಮುತ್ತೂರು ಶಾಲೆಯ ಮುಖಾಂತರ ತೂಗುಸೇತುವೆಯವರೆಗೆ ರಸ್ತೆ ನಿರ್ಮಿಸಿ ಅಲ್ಲಿ ಬಸ್ ನಿಲ್ಲಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಬಂಟ್ವಾಳ ಭಾಗದಿಂದ ಬರುವ ವಾಹನಗಳಿಗೆ ಮೂಲರಪಟ್ಣ ಮಸೀದಿ ಸಮೀಪ ತಂಗು ದಾಣ ನಿರ್ಮಿಸಿ ಅಲ್ಲಿಯೇ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಎರಡೂ ಭಾಗದಿಂದ ಇಳಿದ ಕಾರ್ಮಿಕರು ತೂಗು ಸೇತುವೆಯ ಮುಖಾಂತರ ನಡೆದುಕೊಂಡು ಬಂದು ತಮ್ಮ ಸ್ಥಳಕ್ಕೆ ತಲುಪಬೇಕಾಗಿತ್ತು.
ಈ ಹಿನ್ನೆಲೆಯಲ್ಲಿ ಮೂಲರಪಟ್ಣದ ಸ್ಥಳೀಯರೇ ಸೇರಿ ಫಲ್ಗುಣಿ ನದಿಯ ಮುರಿದು ಬಿದ್ದ ಸೇತುವೆ ಸಮೀಪ ಮಣ್ಣಿ ನಿಂದಲೇ ತಾತ್ಕಾಲಿಕ ಸೇತುವೆ ಕಲ್ಪಿಸಿ ಅದರಲ್ಲೇ ವಾಹನಗಳಿಗೆ ಸಂಚರಿಸಲು ಅವಕಾಶ ಕಲ್ಪಿಸಿದ್ದರು. ಈ ತಾತ್ಕಾಲಿಕ ಉಪಕ್ರಮದಿಂದಾಗಿ ವಾಹನಗಳ ಮುಖಾಂ ತರ ಸಂಚರಿಸುವ ಪ್ರಯಾಣಿಕರಿಗೆ ಅನು ಕೂಲವಾಗಿತ್ತು. ಆದರೆ ಇದೀಗ ಮಳೆಗಾಲ ಹತ್ತಿರ ಬರುತ್ತಿದ್ದು, ನದಿಯಲ್ಲಿ ನೀರಿನ ಪ್ರಮಾಣ ಮಿತಿಮೀರುವುದರಿಂದ ತಾತ್ಕಾಲಿಕ ಮಣ್ಣಿನ ಸೇತುವೆ ನದಿಯ ಪ್ರವಾಹದಲ್ಲಿ ಕೊಚ್ಚಿಹೋಗುವ ಭೀತಿ ಎದುರಾಗಲಿದೆ. ಇದರಿಂದ ವಾಹನ ಸಂಚಾರ ಸ್ಥಗಿತಗೊಂಡು ಮತ್ತೆ ಜನರು ಸಂಕಷ್ಟಕ್ಕೊಳಗಾಗಲಿದ್ದಾರೆ.
ಅಂದಾಜು ಪಟ್ಟಿ ತಯಾರಿ
ಕುಸಿದು ಬಿದ್ದ ಸೇತುವೆಯ ಭಾಗ ದಲ್ಲಿಯೇ ಮತ್ತೂಂದು ಸೇತುವೆ ನಿರ್ಮಿ ಸಲು ಸುಮಾರು 14 ಕೋಟಿ ರೂ. ಮೊತ್ತದ ಅಂದಾಜುಪಟ್ಟಿ ತಯಾರಿಸಲಾ ಗಿದ್ದು, ಈ ಪ್ರಕ್ರಿಯೆ ಕಡತದಲ್ಲಿಯೇ ಬಾಕಿಯಾಗಿದೆ. ಮೂಲರಪಟ್ಣ ಸೇತುವೆ ಕುಸಿದು ವರ್ಷವಾಗುತ್ತಾ ಬಂದಿ ದೆ. ಇಷ್ಟು ದಿನಗಳ ಅಂತರದಲ್ಲಿ ಕಾಮಗಾರಿ ಆರಂಭವಾಗಬೇಕಿತ್ತು. ಸೇತುವೆ ಕಾಮ ಗಾರಿ ಆರಂಭಗೊಂಡು ಪೂರ್ಣವಾಗ ಬೇಕಾದರೆ ಕನಿಷ್ಠ 2 ವರ್ಷವಾದರೂ ಬೇಕು. ಆದರೆ ಸದ್ಯ ಮಳೆಗಾಲ ಆರಂಭವಾಗುವುದರಿಂದ ಇನ್ನು ಆರು ತಿಂಗಳ ಕಾಲ ಕೆಲಸ ಆರಂಭಿಸಲು ಸಾಧ್ಯವಿಲ್ಲ. ಇದರಿಂದ ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಕಾಮಗಾರಿ ಇನ್ನೂ ಆರಂಭವಾಗಿ ಸೇತುವೆ ಪೂರ್ಣವಾಗುವವರೆಗೆ ಇಲ್ಲಿನ ಜನರ ವನವಾಸ ತಪ್ಪುವುದಿಲ್ಲ. ಜನರ ಆವಶ್ಯಕತೆಗನುಗುಣವಾಗಿ ಕಡಿಮೆ ಅವಧಿ ಯಲ್ಲಿ ಪೂರ್ಣವಾಗುವಂತೆ ನವೀನ ಮಾದರಿಯಲ್ಲಿ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ.
ಟೆಂಡರ್ ಕರೆದು ಕಾಮಗಾರಿ ಆರಂಭ
ಮೂಲರಪಟ್ಣ ನೂತನ ಸೇತುವೆ ಕಾಮಗಾರಿಗೆ ಒಟ್ಟು 14.2 ಕೋಟಿ ರೂ. ಅಗತ್ಯವಿದ್ದು, ಟೆಂಡರ್ ಕರೆಯಲು ಸಭೆಯಲ್ಲಿ ಚರ್ಚಿಸಲಾಗುವುದು. ನೂತನ ಸೇತುವೆ ನಿರ್ಮಾಣಕ್ಕೆ ಬೆಂಗಳೂರಿನ ತಂತ್ರಜ್ಞರೊಬ್ಬರು ಆಗಮಿಸಿ ಪರಿಶೀಲಿಸಿದ್ದಾರೆ. ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂದು ಮೇಲ್ಗಡೆ ದುಂಡಗಿನ ಕಮಾನುಗಳ ಮಾದರಿಯಲ್ಲಿ ಕೂಳೂರು ಮಾದರಿಯ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ.
– ರವಿಕುಮಾರ್, ಪಿಡಬ್ಲ್ಯುಡಿ, ಎಂಜಿನಿಯರ್
- ಗಿರೀಶ್ ಮಳಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.