ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅನನ್ಯ
Team Udayavani, Sep 18, 2017, 3:26 PM IST
ಪುತ್ತೂರು : ವಿಶ್ವಕರ್ಮರ ಜತೆಯಲ್ಲಿ ಬದುಕದ ಮನುಷ್ಯ ಜಗತ್ತಿನಲ್ಲಿ ಇಲ್ಲ. ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ವಿಶ್ವಕರ್ಮರನ್ನು ನೆನಪಿಸುವ ಕಾರ್ಯ ಜಯಂತಿಯ ಮೂಲಕ ನಡೆಯುವುದು ಉತ್ತಮ ಬೆಳವಣಿಗೆ ಎಂದು ಕೆನರಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ನಲ್ಕ ಗೋಪಾಲಕೃಷ್ಣ ಆಚಾರ್ಯ ಹೇಳಿದರು.
ರವಿವಾರ ಪುತ್ತೂರು ತಾ.ಪಂ. ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ವಿಶ್ವಕರ್ಮ ಸಂಘಟನೆಗಳ ಸಹಯೋಗದಲ್ಲಿ ನಡೆದ ವಿಶ್ವಕರ್ಮ ಜಯಂತಿಯಲ್ಲಿ ಅವರು ಸಂಸ್ಮರಣೆ ಉಪನ್ಯಾಸ ಮಾಡಿದರು.
ವಿಶ್ವಕರ್ಮ ದೇವಶಿಲ್ಪಿ ಎಂದು ಕೆಲವು ವಿದ್ವಾಂಸರು ಹೇಳಿದರೆ ಜಗತ್ತಿನ ಸರ್ವ ಸೃಷ್ಟಿಗೂ ವಿಶ್ವಕರ್ಮ ಕರ್ತೃ ಎಂದು ಅನೇಕ ವಿದ್ವಾಂಸರು ದೃಢಪಡಿಸಿ ದ್ದಾರೆ. ಪುರಾಣದಲ್ಲಿ ಪುಷ್ಪಕವಿಮಾನ, ದ್ವಾರಕೆಯ ನಿರ್ಮಾಣದಿಂದ ಹಿಡಿದು ವಿಶ್ವಕರ್ಮರು ಅನೇಕ ನಿರ್ಮಾಣಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ವಿವಿಗಳಲ್ಲಿ ಸೇರ್ಪಡೆಗೊಳ್ಳಬೇಕು
41 ಉಪವರ್ಗ, 40 ಲಕ್ಷ ಜನ ಸಂಖ್ಯೆಯ ವಿಶ್ವಕರ್ಮ ಸಮಾಜ ರಾಜ್ಯದ ಲ್ಲಿದ್ದು, ದೇಶದಲ್ಲಿ 13 ಕೋಟಿ ವಿಶ್ವಕರ್ಮ ಸಮುದಾಯದವರಿದ್ದಾರೆ. ರಾಜ್ಯದ ಕೆಲವು ವಿಶ್ವ ವಿದ್ಯಾನಿಲಯಗಳಲ್ಲಾದರೂ ವಿಶ್ವಕರ್ಮರ ಸಾಧನೆ ತಿಳಿಸುವ, ಸಂಶೋಧನೆಗಳನ್ನು ಹೊರತರುವ ಕೆಲಸ ಆಗಬೇಕು ಎಂದು ಅವರು ಅಭಿಪ್ರಾಯಿಸಿದರು.
ಮೂಲ ಕಸುಬು ಉಳಿಸಿ
ಅಧ್ಯಕ್ಷತೆ ವಹಿಸಿದ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಅವರು ಮಾತನಾಡಿ, ವಿಶ್ವಕರ್ಮ ಸಮಾಜದ ಮೂಲ ಕಸುಬು ಗಳನ್ನು ಉಳಿಸಿಕೊಂಡು ಹೋಗುವ ಕೆಲಸ ಆಗಬೇಕು. ಹಿಂದಿನ ಕಾಲದ ವಸ್ತು ಗಳ ಕಲಾತ್ಮಕತೆಯನ್ನು ಉಳಿಸಿಕೊಂಡು ಹೋಗುವ ಜತೆಗೆ ತಂತ್ರಜ್ಞಾನದ ಬಳಕೆಯ ಸಂದರ್ಭದಲ್ಲೂ ಹಿಂದಿನ ವಿಶಿಷ್ಟತೆಯನ್ನು ಉಳಿಸಬೇಕು ಎಂದು ಹೇಳಿದರು.
ಸಮ್ಮಾನ
ಈ ಸಂದರ್ಭ ವಿಶ್ವಕರ್ಮ ಸಮುದಾ ಯದ ಸಾಧಕರಾದ ನಿವೃತ್ತ ಸುಬೇದಾರ್ ಮೇ| ಎಂ. ಸುರೇಶ್ ಆಚಾರ್ಯ, ಕಬ್ಬಿಣದ ಕೆಲಸಗಾರ ಜನಾರ್ದನ ಆಚಾರ್ಯ, ಶಿಲ್ಪಿ ವಾಸುದೇವ ಆಚಾರ್ಯ ಹಾಗೂ ಎಂ. ದಿವಾಕರ ಆಚಾರ್ಯ, ಚಿನ್ನದ ಶಿಲ್ಪಿ ಜನಾರ್ದನ ಆಚಾರ್ಯ ಕರ್ಮಲ ಅವರನ್ನು ಸಮ್ಮಾನಿಸಲಾಯಿತು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಹಾಗೂ ತಹಶೀಲ್ದಾರ್ ಅನಂತ ಶಂಕರ್ ವಿಶ್ವಕರ್ಮ ಜ್ಯೋತಿ ಪ್ರಜ್ವಲನೆ ಮಾಡಿದರು. ವಿಶ್ವಕರ್ಮ ಯುವ ಮಿಲನ್ ಜಿಲ್ಲಾಧ್ಯಕ್ಷ ಹರೀಶ್ ಆಚಾರ್ಯ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು, ವಿಶ್ವಕರ್ಮ ಸಂಘಗಳ ಪದಾಧಿಕಾರಿಗಳು, ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಉಪತಹಶೀಲ್ದಾರ್ ಶ್ರೀಧರ್ ಕೆ. ಸ್ವಾಗತಿಸಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಎಸ್. ಕುಮಾರ್ ವಂದಿಸಿದರು. ಉಪ ತಹಶೀಲ್ದಾರ್ ನಾಗೇಶ್ ನಿರೂಪಿಸಿದರು.
ಸೈನ್ಯಕ್ಕೆ ಪ್ರೋತ್ಸಾಹಿಸಿ
ಸಮ್ಮಾನ ಸ್ವೀಕರಿಸಿ ಮಾತನಾಡಿದ ಮೇ| ಎಂ. ಸುರೇಶ್ ಆಚಾರ್ಯ, ಭಾರತೀಯ ಸೇನೆಯಲ್ಲಿ ಶೇ. 99ರಷ್ಟು ಉತ್ತರ ಭಾಗದವರೇ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಮಕ್ಕಳಿಗೂ ದೇಶಸೇವೆಗೆ ಪ್ರೋತ್ಸಾಹ ನೀಡಬೇಕು. ಪ್ರಸ್ತುತ ಸೈನಿಕರಿಗೆ ಎಲ್ಲ ಸೌಲಭ್ಯ, ಸವಲತ್ತುಗಳನ್ನೂ ನೀಡಲಾಗುತ್ತಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.