ನಾಪತ್ತೆಯಾಗಿದ್ದ ಕಲ್ಲಮುಂಡ್ಕೂರಿನ ಜೋಡಿ ವಿವಾಹವಾಗಿ ಪ್ರತ್ಯಕ್ಷ
Team Udayavani, Jun 17, 2019, 9:37 AM IST
ಮೂಡುಬಿದಿರೆ: “ವ್ಯಕ್ತಿಯೊಬ್ಬನ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಚೀಟಿ ಬರೆದಿಟ್ಟು, ಪೊಲೀಸರು ಕಾಡಿನಲ್ಲಿ ಹುಡಕಾಡುವಂತೆ ಮಾಡಿದ ಚಾಣಾಕ್ಷ ಯುವ ಜೋಡಿ ವಿವಾಹವಾಗಿ ಕಲ್ಲಮುಂಡ್ಕೂರಿನ ಯುವಕನ ಮನೆಯಲ್ಲೇ ರವಿವಾರ ಪ್ರತ್ಯಕ್ಷವಾಗಿದ್ದಾರೆ.
ಯುವತಿಯ ಕೊರಳಲ್ಲಿ ಕರಿಮಣಿ, ಕಾಲಲ್ಲಿ ಕಾಲುಂಗರ ಗೋಚರಿಸಿರುವುದರಿಂದ ಅವರು ಮದುವೆಯಾಗಿದ್ದಾರೆ ಎನ್ನಲಾಗಿದ್ದು ಎಲ್ಲಿ, ಹೇಗೆ ಎಂಬುದು ಮಾತ್ರ ಗೊತ್ತಾಗುತ್ತಿಲ್ಲ. ಬ್ಯಾಂಡ್ ಸೆಟ್ ಕಲಾವಿದ ಸತೀಶ ಮತ್ತು ಪದವಿ ಓದುತ್ತಿದ್ದ ತೋಡಾರ್‌ನ ಯುವತಿ ಸತೀಶನ ಮನೆಯಲ್ಲಿ ಕಂಡುಬಂದಿದ್ದು ಇವರಿಬ್ಬರೂ ಪ್ರಾಪ್ತ ವಯಸ್ಕರಾಗಿರುವ ಕಾರಣ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣಕ್ಕೆ ತೆರೆ ಎಳೆಯಲಾಗಿದೆ.
ಪ್ರಕರಣದ ಹಿನ್ನೆಲೆ
ಜೂ. 11ರಂದು ನಾಪತ್ತೆಯಾದ ಯುವಕ ಮತ್ತು ಯುವತಿ ಉಡುಪಿಯಿಂದ ಮೂಲ್ಕಿವರೆಗೆ ಆಗಮಿಸಿ ಮತ್ತೆ ಟ್ಯಾಕ್ಸಿ ಮೂಲಕ ಪಿದಮಲೆಗೆ ಬಂದಿದ್ದರು. ಟ್ಯಾಕ್ಸಿಯಲ್ಲಿ 10 ರೂಪಾಯಿಯ ನೋಟಿನ ಮೇಲೆ ತಾವಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಾಗೂ ಇದಕ್ಕೆ “ಇಂಥವ’ ಮತ್ತು ಆತನ ಮನೆಯವರು ಕಾರಣ ಎಂದೂ ಬರೆದು ಮೊಬೈಲ್‌ಗೆ ಸುತ್ತಿ ಬಿಟ್ಟು ಹೋಗಿದ್ದರೆನ್ನಲಾಗಿದೆ. ಈ ಚೀಟಿಯನ್ನು ಬಳಿಕ ಗಮನಿಸಿದ ಟ್ಯಾಕ್ಸಿ ಚಾಲಕ ಮೂಲ್ಕಿ ಠಾಣೆಗೆ ಒಪ್ಪಿಸಿದ್ದರೆನ್ನಲಾಗಿದೆ.
ಚೀಟಿಯಲ್ಲಿದ್ದ ಒಕ್ಕಣೆಗಳು
ಒಂದು ನೋಟಿನಲ್ಲಿ, “ಎಂಕ್ಲೆನ ರಡ್ಡ್ ಜನತ್ತ ಸಾವುಗು ಕಾರಣ “ಅ…’ ಬೊಕ್ಕ ಇಲ್ಲದಕ್ಲು, ನೆಟ್ಟ್ ಸತೀಶ ಅರೆನ ಫ್ರೆಂಡ್ಸ್‌ನಕ್ಲೆನ ತಪ್ಪು ಇಜ್ಜಿ (ಸಹಿ- ಯುವಕನದ್ದು) ಎಂದು ಬರೆದಿತ್ತು. ಇನ್ನೊಂದು ನೋಟಿನಲ್ಲಿ, “ಎನ್ನ ಪುಣೊನು ಇಲ್ಲಡೆ ಕೊನೊಪುನಿ ಬೊಡಿ, ಸತೀಶೆರೆನ ಒಟ್ಟುಗೇ ಇಪ್ಪೊಡು’ ಎಂದು ಬರೆಯಲಾಗಿತ್ತು. ಈ ಜೋಡಿ ಪಿದಮಲೆಗೆ ಹೋದದ್ದು ಹೌದೇ? ಅದೊಂದು ನಾಟಕವಾಗಿತ್ತೇ? ಈ ರೀತಿ ಹಾದಿ ತಪ್ಪಿಸುವ ಮಾಹಿತಿ ನೀಡಿ ಗೋವಾ ಅಥವಾ ಮುರುಡೇಶ್ವರದತ್ತ ಹೋದದ್ದು ಹೌದೇ? ತಾವಿಬ್ಬರೂ ಮುರುಡೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿರುವ ಬಗ್ಗೆ ಪೊಲೀಸರಿಗೆ ನೀಡಿದ ಮಾಹಿತಿ ಎಷ್ಟು ಸರಿ ಮುಂತಾದ ಹಲವಾರು ಪ್ರಶ್ನೆಗಳೆದ್ದಿದ್ದು, ಅವುಗಳಿಗೆ ಇನ್ನೂ ಸೂಕ್ತ ಉತ್ತರ ಸಿಕ್ಕಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.