ಹಸು ಸಾಕುತ ನಾಲ್ವರು ಮಕ್ಕಳನ್ನು ವೈದ್ಯರಾಗಿಸಿದ ರತ್ನಾ!


Team Udayavani, Dec 21, 2017, 11:40 AM IST

21-Dec-4.jpg

ಮೂಲ್ಕಿ: ಹೈನುಗಾರಿಕೆ ಇವರ ಉಸಿರು. ದಿನದ ಬಹುಭಾಗವನ್ನು ದನಗಳೊಂದಿಗೆ ಹಟ್ಟಿಯಲ್ಲೇ ಕಳೆಯುವ ಅವರು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ನಾಲ್ವರು ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಕೊಡಿಸಿದ್ದಾರೆ!

ಸಾಹಿತಿ, ಅಧ್ಯಾಪಕ ದಿ| ಗುಂಡಾಲು ಮಹಾಬಲ ಶೆಟ್ಟಿ ಅವರ ಪತ್ನಿ ರತ್ನಾ ಜಿ.ಎಂ. ಶೆಟ್ಟಿ ಕಾರ್ನಾಡು ನಿವಾಸಿ. 88ರ ಹರೆಯದ ಅವರು ತಮ್ಮ ಏಳು ಮಕ್ಕಳ ಪೈಕಿ ನಾಲ್ವರನ್ನು ವೈದ್ಯರನ್ನಾಗಿಸಿದ್ದಾರೆ. ಹಿರಿಯ ಪುತ್ರ ಡಾ| ಹಂಸರಾಜ ಶೆಟ್ಟಿ ಜಿ.ಎಂ. ಅವರು ಇಂಗ್ಲಂಡ್‌ನ‌ ಪ್ರತಿಷ್ಠಿತ ಯುನಿವರ್ಸಿಟಿ ಆಫ್‌ ವೇಲ್ಸ್‌ ಕಾರ್ಡಿಫ್‌ ನ ಮುಖ್ಯಸ್ಥರಾಗಿದ್ದಾರೆ. ಹಿರಿಯ ಪುತ್ರಿ ಡಾ| ಗೀತಾಂಜಲಿ ಜಿ.ಎಂ. ಮಂಗಳೂರಿನ ಲೇಡಿಗೋಷನ್‌ ಜಿಲ್ಲಾಸ್ಪತ್ರೆಯಲ್ಲಿ ಮುಖ್ಯತಜ್ಞ ವೈದ್ಯಾಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಮತ್ತೂಬ್ಬ ಪುತ್ರ ಡಾ| ವಿಶ್ವರಾಜ್‌ ಇಂಗ್ಲಂಡ್‌ನ‌ಲ್ಲಿದ್ದು, ಮತ್ತೂಬ್ಬ ಮಗಳು ಡಾ| ಪದ್ಮಿನಿ ಮುಂಬೈಯಲ್ಲಿ ವೈದ್ಯರಾಗಿದ್ದಾರೆ.

ಉಳಿದ ಮೂವರು ಮಕ್ಕಳೂ ಪದವೀಧರರು. ಒಬ್ಬ ಪುತ್ರ ಹರ್ಷರಾಜ್‌ ದೇರಳಕಟ್ಟೆಯ ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ಆಡಳಿತಾಧಿಕಾರಿಯಾಗಿದ್ದರು. ಸದ್ಯ ಮೂಲ್ಕಿ ನಗರ ಪಂಚಾಯತ್‌ನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಮೂಲ್ಕಿಯ ಜಿ.ಎಂ. ಮೆಡಿಕಲ್ಸ್‌ ಮಾಲಕ ವಿನಯರಾಜ್‌ ಕೂಡ ರತ್ನಾ ಅವರ ಪುತ್ರ. ಮತ್ತೂಬ್ಬ ಪುತ್ರಿ ಶೋಭಾ ಉಡುಪಿಯಲ್ಲಿ ಗೃಹಿಣಿಯಾಗಿದ್ದಾರೆ.

ಸಸ್ಯಾಹಾರಿಗಳಾಗಿಯೇ ಬದುಕು
ದನದ ಹಾಲಿನ ಆತಿಥ್ಯಕ್ಕೆ ನಮ್ಮ ಹೆಸರಾಗಿತ್ತು. ಇದಕ್ಕೆ ಪೂರಕವಾಗಿ ನಾವೆಲ್ಲರೂ ಸಸ್ಯಾಹಾರಿಗಳಾಗಿಯೇ ಬದುಕುತ್ತಿದ್ದೇವೆ. ಸುಮಾರು ಏಳು ದಶಕಗಳಿಂದ ಗೋವಿನ ಸೇವೆಯಲ್ಲೇ ದುಡಿದ ಅನುಭವವಿದೆ. ಹೈನುಗಾರಿಕೆ ಮನೆವಾರ್ತೆಯ ಖರ್ಚಿನ ನಿರ್ವಹಣೆಗೆ ಸಹಕಾರಿ. ಮಕ್ಕಳ ಶಿಕ್ಷಣ, ಜೀವನ ನಿರ್ವಹಣೆಗಾಗಿ ಹೈನುಗಾರಿಕೆಯನ್ನು ಆಸಕ್ತಿಯಿಂದ ಮಾಡಿದೆ. ಯಾವುದೇ ಪ್ರಶಸ್ತಿ – ಪುರಸ್ಕಾರ ಅಥವಾ ಸರಕಾರದ ಸೌಲಭ್ಯ ಪಡೆದಿಲ್ಲ ಎಂದು ರತ್ನಾ ವಿವರಿಸಿದರು. ವಯಸ್ಸು 90ನ್ನು ಸಮೀಪಿಸುತ್ತಿದ್ದರೂ ದನಗಳ ಸೇವೆ ಎಂದರೆ ಅವರ ದಣಿವೆಲ್ಲ ಮಾಯವಾಗುತ್ತದೆ. ಇದರಿಂದ ಅವರಿಗೆ ಆರೋಗ್ಯ ಲಭಿಸಿದೆ, ನೆಮ್ಮದಿ ಸಿಗುವಂತೆ ಮಾಡಿದೆ. ಗೋವುಗಳೊಂದಿಗೆ ನಿತ್ಯ ಕಾಲ ಕಳೆಯುವ ರತ್ನಾ ಅವರಿಗೆ ಕಾಸರಗೋಡು ನೀರಳಿಕೆಯ ಶ್ರೀ ಮಾತಾ ಸೇವಾಶ್ರಮ ಟ್ರಸ್ಟ್‌ನ ಮುಖಂಡರು ತಮ್ಮ ಗೋ ಜಾಗೃತಿ ಪಾದಯಾತ್ರೆ ಮೂಲಕ ಆಗಮಿಸಿ, ರತ್ನಾ ಅವರನ್ನು ಗೌರವಿಸಿದ್ದು ವಿಶೇಷ.

ಬಿಡುವಿಲ್ಲದ ದುಡಿಮೆ
ಬೆಳಗ್ಗೆ ನಾಲ್ಕೂವರೆ ಗಂಟೆಗೆ ಏಳುವ ರತ್ನಾ ಬಿಡುವಿಲ್ಲದಂತೆ ದುಡಿಯುತ್ತಾರೆ. ಹನ್ನೆರಡಕ್ಕೂ ಮಿಕ್ಕಿ ತಳಿಯ ಹಸುಗಳ ಆರೈಕೆಯಲ್ಲೇ ಅವರಿಗೆ ನೆಮ್ಮದಿ. ಮಧ್ಯಮ ವರ್ಗದವರಿಗೆ ಸರಕಾರದ ಹೆಚ್ಚಿನ ಸವಲತ್ತುಗಳು ಇಲ್ಲದ ಹೊತ್ತಿನಲ್ಲಿ ಸಾಹಿತ್ಯ – ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಪತಿಗೆ ಬೆನ್ನೆಲುಬಾಗಿ ನಿಂತು ತಮ್ಮ ನಾಲ್ವರು ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಕೊಡಿಸಿದ್ದು, ಉಳಿದವರನ್ನೂ ಉತ್ತಮ ವಿದ್ಯಾವಂತರನ್ನಾಗಿ ಮಾಡಿದ್ದು ಕಠಿನ ಪರಿಶ್ರಮದಿಂದಲೇ. ದನ ಸಾಕಣೆಯ ಅನುಭವದ ಜತೆಗೆ ಅನಾರೋಗ್ಯಕ್ಕೆ ಒಳಗಾಗುವ ಜಾನುವಾರುಗಳ ಚಿಕಿತ್ಸೆ ಮತ್ತು ದನದ ಹೆರಿಗೆ ಮಾಡಿಸುವುದರಲ್ಲೂ ಬಹಳಷ್ಟು ಅನುಭವ ಪಡೆದಿದ್ದಾರೆ. ತಮ್ಮ ಪರಿಸರದಲ್ಲಿ ಹೈನುಗಾರಿಕೆ ಮಾಡುವವರಿಗೆ ಸಾಕಷ್ಟು ಪ್ರಾಯೋಗಿಕ ಮಾಹಿತಿ ನೀಡುತ್ತಾರೆ.

ಸರ್ವೋತ್ತಮ ಅಂಚನ್‌

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

7

Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್‌; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

6

Mangaluru: ಅಪಾರ್ಟ್‌ಮೆಂಟ್‌, ಮಾಲ್‌ಗ‌ಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ

5

Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.