ಐವರು ಆರೋಪಿಗಳ ಪತ್ತೆಗೆ ಮೂರು ತಂಡಗಳ ರಚನೆ
Team Udayavani, Oct 31, 2017, 12:56 PM IST
ಮಹಾನಗರ: ಸುರತ್ಕಲ್ ಸಮೀಪದ ಕಾಟಿಪಳ್ಳ ಗ್ರಾಮದ ಚೊಕ್ಕ ಬೆಟ್ಟು 8ನೇ ಬ್ಲಾಕ್‌ನ ಸಫ್ವಾನ್ (24)ನ ಅಪಹರಣ
ನಡೆದು 26 ದಿನಗಳಾಗಿದ್ದು, ಇದುವರೆಗೆ ಸಫ್ವಾನ್ ಆಗಲಿ ಆತನನ್ನು ಅಪಹರಿಸಿದರೆನ್ನಲಾದ ಐವರು ದುಷ್ಕರ್ಮಿಗಳ ಬಗ್ಗೆ ಯಾವುದೇ ಸುಳಿವಿಲ್ಲ.
ಸಫ್ವಾನ್‌ನನ್ನು ಅ. 5ರಂದು ಸಂಜೆ 6 ಗಂಟೆಗೆ 5 ಮಂದಿ ಆರೋಪಿಗಳು ವಾಹನವೊಂದರಲ್ಲಿ ಅಪಹರಿಸಿದ್ದರು.
ಈ ಬಗ್ಗೆ ಸಾರ್ವಜನಿಕರು ಆತನ ತಂದೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆತನ ತಂದೆ ಅಬ್ದುಲ್ ಹಮೀದ್ ಅವರು ಅದೇ ದಿನ ರಾತ್ರಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಅಪಹರಣ ನಡೆದು ತಿಂಗಳಾಗುತ್ತಾ ಬಂದಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಆದರೆ ಈತನಕ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿಲ್ಲ. ಇದು ಪೊಲೀಸರಿಗೂ ತಲೆ ನೋವಾಗಿ ಪರಿಣಮಿಸಿದೆ.
ಪಾದಯಾತ್ರೆ
ಸಫ್ವಾನ್ ಪತ್ತೆ ಮತ್ತು ಆತನನ್ನು ಅಪ ಹರಿಸಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಇತ್ತೀಚೆಗೆ ಡಿವೈಎಫ್‌ಐ ಕಾರ್ಯ
ಕರ್ತರು ಕಾಟಿಪಳ್ಳದಲ್ಲಿರುವ ಸಫ್ವಾನ್ ಮನೆಯಿಂದ ಸುರತ್ಕಲ್ ಪೊಲೀಸ್ ಠಾಣೆ ತನಕ ಪಾದಯಾತ್ರೆ ನಡೆಸಿದ್ದರು.
ಸಫ್ವಾನ್ ಮತ್ತು ಆತನನ್ನು ಅಪಹರಣ ಮಾಡಿದವರ ಸುಳಿವು ಲಭ್ಯವಾಗದ ಕಾರಣ ಅ. 19 ರಂದು ಅಪಹರಣಕಾರರ
ಫೋಟೊಗಳನ್ನು ಪೊಲೀಸರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು. ಮಾಧ್ಯಮಗಳಲ್ಲಿ ಆರೋಪಿಗಳ ಫೋಟೊ
ಪ್ರಕಟವಾದರೂ ಪ್ರಕರಣ ಸುಖಾಂತ್ಯ ಕಂಡಿಲ್ಲ.
ಜತೆಗಿದ್ದವರಿಂದಲೇ ಕೃತ್ಯ
ಸಫ್ವಾನ್ ಮತ್ತು ಅಪಹರಣಕಾರರು ಆರಂಭದಲ್ಲಿ ಸ್ನೇಹಿತರಾಗಿದ್ದು, ಜತೆಗಿದ್ದರು. ಆರೋಪಿಗಳಲ್ಲಿ ಕೆಲವರು
ಹಳೆ ಅಪರಾಧಿಗಳಾಗಿದ್ದು, ವಿವಿಧ ದುಷ್ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. ಅಪಹರಣಗೊಂಡ
ಸಫ್ವಾನ್ ಈ ಹಿಂದೆ ಒಂದು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಯಾವುದೋ ಒಂದು ಸಂದರ್ಭದಲ್ಲಿ ಸಫ್ವಾನ್ ಪ್ರಮುಖ ಆರೋಪಿ ಸುರತ್ಕಲ್‌ನ ಸಫ್ವಾನ್ ಹುಸೈನ್ ಎಂಬಾತನನ್ನು ನಿಂದಿಸಿದ್ದ, ಈ ಹಿನ್ನೆಲೆಯಲ್ಲಿ ಆತನನ್ನು ಅಪಹರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ನೈಜ ಕಾರಣವೇನೆಂದು ಆರೋಪಿಗಳ ಬಂಧನದ ಬಳಿಕವೇ ತಿಳಿದು ಬರಬೇಕಿದೆ.
ಅಪರಹಣಗೊಳಗಾದ ಸಫ್ವಾನ್ ವಿವರ
ಅಪಹರಣಕ್ಕೊಳಗಾದ ಸಫ್ವಾನ್ ವೃತ್ತಿಯಲ್ಲಿ ಪೈಂಟರ್. ಗೋಧಿ ಮೈಬಣ್ಣ ದವನಾಗಿದ್ದು, ಸಾಧಾರಣ ಮೈಕಟ್ಟು, ಉದ್ದ
ಮುಖ, ಕಪ್ಪು ಕೂದಲು, ಕುರುಚಲು ಗಡ್ಡ, ಮೀಸೆ ಇರುತ್ತದೆ. ಕನ್ನಡ, ತುಳು, ಬ್ಯಾರಿ ಭಾಷೆ ಮಾತನಾಡುತ್ತಾನೆ. ಅಪಹೃತ ಸಫ್ವಾನ್ ಮತ್ತು ಅಪಹರಣಕಾರರ ಸುಳಿವು ಸಿಕ್ಕಲ್ಲಿ ಕೂಡಲೇ ಸುರತ್ಕಲ್ ಠಾಣೆಗೆ ಮಾಹಿತಿ ನೀಡಬಹುದೆಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
3 ತಂಡಗಳ ರಚನೆ
ಪ್ರಕರಣದ ತನಿಖೆಗಾಗಿ ಸಿಸಿಬಿ ತಂಡ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ನೇತೃತ್ವದ ತಂಡ ಹಾಗೂ ಸುರತ್ಕಲ್ ಪೊಲೀಸರ ತಂಡ ಸಹಿತ ಒಟ್ಟು 3 ತನಿಖಾ ತಂಡಗಳನ್ನು ರಚಿಸಲಾಗಿದೆ. ಪೊಲೀಸರು ವಿವಿಧ ಭಾಗಗಳಿಗೆ ತೆರಳಿ ತನಿಖೆ ನಡೆಸಿದ್ದಾರೆ. ಆದರೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಅಪಹರಣ ಮಾಡಿದವರು ಯಾರು ಎನ್ನುವುದು ಪೊಲೀಸರಿಗೆ ತಿಳಿದಿದೆ. ಅಪಹರಣಕಾರರ ತಂಡದಲ್ಲಿ 5 ಮಂದಿ ಇದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ ಅವರು ಎಲ್ಲಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಸಫ್ವಾನ್ ನನ್ನು ಎಲ್ಲಿಗೆ ಕರೆದೊಯ್ದಿದ್ದಾರೆ ಎನ್ನುವ ಕುರಿತಂತೆ ಒಂದು ಸುಳಿವೂ ಸಿಕ್ಕಿಲ್ಲ
ಆರೋಪಿಗಳು
ಮುಕ್ಕ ನಿವಾಸಿ ಸಂಶುದ್ದೀನ್, ಸುರತ್ಕಲ್‌ನ ಸಫ್ವಾನ್ ಹುಸೈನ್, ಫೈಝಲ್ ಯಾನೆ ಟೊಪ್ಪಿ ಫೈಝಲ್, ಸುರತ್ಕಲ್‌ನ ಶಾಹಿಲ್ ಮತ್ತು ಬಳ್ಳಾರಿಯ ಸೂಫಿಯಾನ್ ಅಪಹರಣ ಮಾಡಿದ ಆರೋಪಿಗಳು ಎಂಬುದಾಗಿ ಪೊಲೀಸರು ಗುರುತಿಸಿದ್ದಾರೆ. ಕೆಎ 20 ಎಂಎ 2844 ಸಂಖ್ಯೆಯ ವಾಹನದಲ್ಲಿ ಅಪಹರಣ ಮಾಡಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಆದರೆ ಅಪಹರಣಕಾರರು ಅಥವಾ ವಾಹನ ಇದುವರೆಗೆ ಪತ್ತೆಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.