ಸೃಜನಶೀಲ ಮನಸ್ಸು ಸಾಹಿತ್ಯದ ಜೀವಾಳ
Team Udayavani, Mar 6, 2018, 3:15 PM IST
ಸುಬ್ರಹ್ಮಣ್ಯ: ಸಾಹಿತ್ಯಿಕ ಬರವಣಿಗೆಗೆ ಮುಖ್ಯವಾಗಿ ಬೇಕಾದದ್ದು ಸೃಜನಶೀಲ ಮನಸ್ಸು.ಅದುವೇ ಸಾಹಿತ್ಯದ ಜೀವಾಳ ಎಂದು ದಕ್ಷಿಣ ಕನ್ನಡ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ, ಕಾದಂಬರಿಗಾರ್ತಿ ಎ.ಪಿ.ಮಾಲತಿ ಅಭಿಪ್ರಾಯಪಟ್ಟರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ಆರಂಭವಾದ ಮೂರು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಪ್ರಾಕೃತಿಕ ಚಿತ್ರಣ ಸಂಪೂರ್ಣ ಬದಲಾಗಿದೆ. ಹಸಿರು ಪರಿಸರ,ಗದ್ದೆ -ತೋಟ ಇತ್ಯಾದಿಗಳು ನಶಿಸಿ ಬಹುರಾಷ್ಟ್ರೀಯ ಕಂಪೆನಿಗಳು ಇಲ್ಲಿ ನೆಲೆಯೂರಿವೆ. ನೇತ್ರಾವತಿ ನದಿ ತಿರುವು ಸೇರಿದಂತೆ ಪ್ರಕೃತಿ ವಿರೋಧಿ ಧೋರಣೆಗಳಿಂದ ಕೃಷಿ ಸಂಸ್ಕೃತಿ, ನಂಬಿಕೆಗಳು ನಶಿಸುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಭಾಷಿಕ ಆಕ್ರಮಣ ಸಹಿಸಲಸಾಧ್ಯ: ಎಸ್.ಜಿ. ಸಿದ್ದರಾಮಯ್ಯ
ಸಮ್ಮೇಳನವನ್ನು ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಮಾತ ನಾಡಿ, ನಾವು ಎಲ್ಲ ಭಾಷೆಗಳನ್ನೂ ಗೌರ ವಿಸುತ್ತೇವೆ. ಆದರೆ ಇನ್ನೊಂದು ಭಾಷೆ ನಮ್ಮ ಭಾಷೆಯನ್ನು ತುಳಿಯುವ ಮಟ್ಟಿಗೆ ಆಕ್ರಮಣ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ.ಯಾವುದೇ ಅನ್ಯ ಭಾಷೆಯಾಗಲಿ;ನೆಲದ ಭಾಷೆಯ ಮೇಲೆ ಮಾಡುವ ಆಕ್ರಮಣವನ್ನು ವಿರೋಧಿಸಲೇ ಬೇಕು ಎಂದರು.
ಅನ್ಯ ನೆಲದಿಂದ ಕನ್ನಡ ನೆಲಕ್ಕೆ ಬಂದು ಅಧಿಕಾರಿಗಳಾಗಿ ಕೆಲಸ ನಿರ್ವ ಹಿಸುತ್ತಿರುವವರು, ಚಾಪೆಯ ಕೆಳಗೆ ತೂರುವ, ರಂಗೋಲಿಯ ಕೆಳಗೆ ನುಸುಳುವ ಪ್ರಯತ್ನ ಮಾಡುತ್ತಾರೆ. ನಾವು ವಲಸೆಯನ್ನು ಸ್ವಾಗತಿಸುತ್ತೇವೆ, ಆದರೆ ನಮ್ಮ ಮನೆಗೆ ಬಂದು ನಮ್ಮನ್ನೇ ಹೊರದಬ್ಬಲು ಯತ್ನಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದರು.
ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿವಿಧ ಕೃತಿಗಳನ್ನು ಬಿಡುಗಡೆಗೊಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಎಸ್.ಅಂಗಾರ ಉದ್ಘಾಟಿಸಿದರು. ನಿಕಟ ಪೂರ್ವ ಸಮ್ಮೇನಾಧ್ಯಕ್ಷ ಪ್ರೊ| ಕೆ. ಚಿನ್ನಪ್ಪ ಗೌಡ, ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ, ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಸುಶೀಲಾ ಹೊಸ ಮನೆ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು,ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಕುವೆಂಪು ವಿ.ವಿ. ನಿವೃತ್ತ ಕುಲಪತಿ ಕೆ.ಚಿದಾನಂದ ಗೌಡ, ಕರ್ನಾಟಕ ಗೇರು ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್,ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಂ,ವಾರ್ತಾಧಿಕಾರಿ ಖಾದರ್ ಶಾ ಉಪಸ್ಥಿತರಿದ್ದರು.
ಕೆ.ಎಸ್.ಎಸ್. ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಗೀತೆ, ನಾಡ ಗೀತೆ, ರೈತಗೀತೆ ಹಾಡಿ ದರು. ಜಿಲ್ಲಾ
ಕ.ಸಾ.ಪ. ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಪ್ರಸ್ತಾ ವನೆಗೈದರು. ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸ್ವಾಗತಿಸಿದರು. ಸುಬ್ರಹ್ಮಣ್ಯ ಕೆ.ಎಸ್.ಎಸ್.ಕಾಲೇಜಿನ ಪ್ರಾಂಶುಪಾಲ ಪ್ರೊ| ರಂಗಯ್ಯ ಶೆಟ್ಟಿಗಾರ್ ಕೆ.ವಂದಿಸಿದರು. ದುರ್ಗಾಕುಮಾರ್ ನಾಯರ್‌ಕೆರೆ, ಉದಯಕುಮಾರ್ ಕೆ.ನಿರೂಪಿಸಿದರು.
ಭಾವಗಳು ಅಕ್ಷರಗಳಾದಾಗ ಸೃಜನಶೀಲ ಕೃತಿ
ಏನು ಬರೆಯಬೇಕು ಎಂಬ ಸ್ಪಷ್ಟತೆ ಇದ್ದಾಗ ಬರವಣಿಗೆ ಸುಲಭವಾಗುತ್ತದೆ. ಸೃಜನಶೀಲತೆಯಿಲ್ಲದೆ ಭಾವ ಅರಳುವುದಿಲ್ಲ, ಭಾಷೆ ಕಾಯಿಗಟ್ಟುವುದಿಲ್ಲ, ಸಾಹಿತ್ಯದ ಚೌಕಟ್ಟು ತುಂಬುವುದಿಲ್ಲ. ನಮ್ಮೊಳಗಿನ ಮೌನವು ಧ್ವನಿಯಾಗುವ, ಧ್ವನಿಯು ಭಾವವಾಗುವ, ಭಾವವು ಅಕ್ಷರಗಳಾಗುವ ಪ್ರಕ್ರಿಯೆಯೇ ಸೃಜನಶೀಲ ಕೃತಿಯ ಸಾಕ್ಷಾತ್ಕಾರ.
– ಸಮ್ಮೇಳನಾಧ್ಯಕ್ಷೆ ಕಾದಂಬರಿ, ಕತೆಗಾರ್ತಿ ಎ.ಪಿ. ಮಾಲತಿ ಬಣ್ಣನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.