ಹೊಸ ಕಾರಿನಲ್ಲಿ ನ್ಯೂನತೆ ಪರಿಹಾರ ನೀಡಲು ಗ್ರಾಹಕ ವೇದಿಕೆ ಆದೇಶ
Team Udayavani, Apr 11, 2018, 8:01 AM IST
ಮಂಗಳೂರು: ಹೊಸ ಕಾರಿನಲ್ಲಿ ನ್ಯೂನತೆ ಕಂಡು ಬಂದ ಗ್ರಾಹಕನಿಗೆ 9.23ಲಕ್ಷ ರೂ. ಪಾವತಿ ಮಾಡುವಂತೆ ಗ್ರಾಹಕರ ವೇದಿಕೆ ಆದೇಶ ಮಾಡಿದೆ.
ಮಂಗಳೂರಿನ ನ್ಯಾಯವಾದಿ, ನೋಟರಿ ಇಸ್ಮಾಯಿಲ್ ಸುಣ್ಣಾಲ್ 2014ರ ಫೆ.26ರಂದು ಮಂಗಳೂರಿನ ರೆನೋ ಡಸ್ಟರ್‌ನ ಅಧಿಕೃತ ಡೀಲರ್ ಸಂಸ್ಥೆಯೊಂದರಿಂದ 8.65ಲಕ್ಷ ರೂ. ಬೆಲೆ ಪಾವತಿಸಿ ಡಸ್ಟರ್ ಕಾರೊಂದನ್ನು ಖರೀದಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಈ ಬಗ್ಗೆ ಸರ್ವಿಸ್ ಸ್ಟೇಷನನ್ನು ಸಂಪರ್ಕಿಸಿದಾಗ ಹಣ ಪಾವತಿಸಲು ತಿಳಿಸಿದ್ದಾರೆ. ವಾರಂಟಿ ಅವಧಿಯಲ್ಲಿ ನ್ಯೂನತೆ ಕಂಡು ಬಂದ ಹಿನ್ನಲೆಯಲ್ಲಿ ತಾನು ಹಣ ಪಾವತಿಸುವುದಿಲ್ಲ ಎಂದು ಇಸ್ಮಾಯಿಲ್ ತಿಳಿಸಿದ್ದಾರೆ. ಇದಾದ ಬಳಿಕ ವಾರಂಟಿ ನೀಡಲು ನಿರಾಕರಿಸಿದ ಕಂಪನಿಯು, ಕಾರಿನ ಸಮಸ್ಯೆಗೆ ತಾತ್ಕಾಲಿಕ ತೇಪೆ ಹಾಕಿ ಕಳುಹಿಸಿದೆ.
ಕೆಲವೇ ದಿನಗಳಲ್ಲಿ ಕಾರಿನಲ್ಲಿ ಮತ್ತೆ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಕಂಪೆನಿಗೆ ತಿಳಿಸಿದರೆ ಕಾರು ಮಾರಾಟ ಮಾಡಿ ಎಂದು ತಿಳಿಸಿದ್ದಾರೆ. ಇದರಿಂದ ಮನನೊಂದ ಕಾರಿನ ಮಾಲಕ ಕಂಪನಿ ಪರಿಹಾರ ಕೊಡಿಸಬೇಕೆಂದು ವಕೀಲ ದೀನನಾಥ ಶೆಟ್ಟಿ ಅವರ ಮುಖೇನ ದ. ಕ. ಗ್ರಾಹಕರ ಪರಿಹಾರ ವೇದಿಕೆಯಲ್ಲಿ ಕೇಸು ದಾಖಲಿಸಿದರು.
ಈ ಬಗ್ಗೆ ವಿಚಾರಣೆ ನಡೆಸಿದ ಗ್ರಾಹಕರ ಪರಿಹಾರ ವೇದಿಕೆ ಪ್ರಕರಣದಲ್ಲಿ ಕಂಪೆನಿ ತಪ್ಪೆಸಗಿದೆ ಹಾಗಾಗಿ ಕಾರಿನ ಮಾಲಕರಿಗೆ ಸಂಪೂರ್ಣ ಖರೀದಿ ಮೌಲ್ಯ 8.65 ಲಕ್ಷ ರೂ. ಅದರೊಂದಿಗೆ ಕೋರ್ಟ್ ಖರ್ಚು ಬಾಬ್ತು 10 ಸಾವಿರ ರೂ., ರಿಪೇರಿಗೆ ಪಾವತಿಸಿದ 23 ಸಾವಿರ ರೂ., ಪರಿಹಾರವಾಗಿ 25 ಸಾವಿರ ರೂ. ಆದೇಶದ 30 ದಿನದೊಳಗಾಗಿ ಪಾವತಿಸುವಂತೆ ಸೂಚಿಸಿದೆ. ಇದಕ್ಕೆ ತಪ್ಪಿದಲ್ಲಿ ಸದ್ರಿ ಪರಿಹಾರದ ಮೊತ್ತವನ್ನು ದಾವಾ ದಿನಾಂಕದಿಂದ ಪಾವತಿ ದಿನಾಂಕದ ವರೆಗೆ ಶೇ. 8ರಂತೆ ಬಡ್ಡಿ ಸಮೇತ ಪಾವತಿಸುವಂತೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.