ಕಲ್ಲಿನ ಕೋರೆಯಲ್ಲಿ ಮುಳುಗಿ ಬಾಲಕ ಸಾವು
Team Udayavani, Jul 10, 2018, 12:27 PM IST
ಮಂಗಳೂರು: ಅಡ್ಯಾರ್‌ಪದವಿನಲ್ಲಿ ಕಲ್ಲು ಕೋರೆಯ ನೀರಿನಲ್ಲಿ ಮುಳುಗಿ ಬಾಲಕ ಮಹಮದ್ ತಮೀಮ್ (13) ಮೃತಪಟ್ಟಿದ್ದಾನೆ. ಜು. 7ರಂದು ಘಟನೆ ಸಂಭವಿಸಿದ್ದು, ಜು. 9ರಂದು ಮೃತದೇಹ ಪತ್ತೆಯಾಗಿದೆ.
ಅಡ್ಯಾರ್ ಪದವಿನ ಹಸನಬ್ಬ – ಆಯಿಷಾ ದಂಪತಿಯ ಐವರು ಮಕ್ಕಳಲ್ಲಿ ಕೊನೆಯವನಾಗಿದ್ದ ಮಹಮದ್ ತಮೀಮ್ ಕೆಲರಾಯ್ ಸರಕಾರಿ ಹೈಸ್ಕೂಲಿನ 9ನೇ ತರಗತಿ ವಿದ್ಯಾರ್ಥಿಯಾಗಿದ್ದ. ಶನಿವಾರ ಶಾಲೆಯಿಂದ ಬರುವಾಗ ಅಕಸ್ಮಾತ್ ಕಾಲು ಜಾರಿ ಕಲ್ಲಿನ ಕೋರೆಗೆ ಬಿದ್ದು
ಕಾಣೆಯಾಗಿದ್ದ. ಜತೆಗೆ ಮೂವರು ಹುಡುಗರು ಇದ್ದರೂ ಅವರು ವಿಷಯ ತಿಳಿಸಿರಲಿಲ್ಲ ಎನ್ನಲಾಗಿದೆ.
ಶನಿವಾರ ಹಾಗೂ ರವಿವಾರ ಹುಡುಕಾಟ ನಡೆಸಿದರೂ ಆತನ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಗ್ಗೆ ಗ್ರಾಮಸ್ಥರು ತಮೀಮ್ ಜತೆಗಿದ್ದ ಹುಡುಗರನ್ನು ಕೂಲಂಕಷ ವಿಚಾರಿಸಿದಾಗ ಒಬ್ಟಾತ ನೀಡಿದ ಒಂದು ಸುಳಿವಿನ ಮೇರೆಗೆ ಶೋಧ ನಡೆಸಿದ್ದು, ಕಲ್ಲಿನ ಕೋರೆಯ ನೀರಿನಲ್ಲಿ ತಮೀಮ್ ಮೃತ ದೇಹ ತೇಲುತ್ತಿರುವುದು ಪತ್ತೆಯಾಯಿತು. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಾಯಕಾರಿ ಕೋರೆಗಳು
ಅಡ್ಯಾರ್ ಪದವು ಪರಿಸರದಲ್ಲಿ ಮಣ್ಣು ಹಾಕಿ ಮುಚ್ಚದಿರುವ 10ಕ್ಕೂ ಅಧಿಕ ಕಲ್ಲಿನ ಕೋರೆಗಳು ಮುಖ್ಯ ರಸ್ತೆಯ ಬದಿಯಲ್ಲೇ ಇದ್ದು, ತಡೆಗೋಡೆ ಇಲ್ಲದ ಅವು ನೀರು, ಕೆಸರು ತುಂಬಿ ಮರಣಗುಂಡಿ ಗಳಾಗಿ ಪರಿಣಮಿಸಿವೆ. 7 ವರ್ಷಗಳ ಹಿಂದೆ ಒಬ್ಬ ಬಾಲಕ ಮೃತಪಟ್ಟಿದ್ದ. ಇಂಥ ಕೋರೆಗಳನ್ನು ಮುಚ್ಚುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.