ಸುರಕ್ಷಿತವಾಗಿ ಉಕ್ರೇನ್ ಗಡಿ ದಾಟಿದ ದ.ಕ. ವಿದ್ಯಾರ್ಥಿಗಳು
ಐವರು ಹಂಗೇರಿ, ನಾಲ್ವರು ರೊಮೇನಿಯಾ, ಮೂವರು ಸ್ಲೊವಾಕಿಯಾದಲ್ಲಿ
Team Udayavani, Mar 3, 2022, 7:23 AM IST
ಮಂಗಳೂರು: ಉಕ್ರೇನ್‌ನಲ್ಲಿ ಸಂಕಷ್ಟಕ್ಕೀಡಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ 18 ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಇದೀಗ ಸುರಕ್ಷಿತವಾಗಿ ಪಕ್ಕದ ದೇಶ ತಲುಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಓರ್ವ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿ ಖಾರ್ಕಿವ್ ರೈಲು ನಿಲ್ದಾಣ ದತ್ತ ಪ್ರಯಾಣಿಸುತ್ತಿರುವ ಮಾಹಿತಿ ದೊರೆತಿದೆ. ಉಳಿದಂತೆ ಐವರು ಹಂಗೇರಿ, ನಾಲ್ವರು ರೊಮೇನಿಯಾ, ಮೂವರು ಸ್ಲೊವಾಕಿಯಾ ಹಾಗೂ ಒಬ್ಬರು ಪೋಲಂಡ್ ತಲುಪಿದ್ದಾರೆ. ಮೂವರು ಹಂಗೇರಿಯತ್ತ ಪ್ರಯಾಣಿ ಸುತ್ತಿದ್ದಾರೆ ಎಂದು ದ.ಕ. ಜಿಲ್ಲಾಡಳಿತ ಬುಧವಾರ ಸಂಜೆ ತಿಳಿಸಿದೆ.
ವಿಮಾನ ನಿಲ್ದಾಣದಲ್ಲಿ ಪೃಥ್ವಿರಾಜ್
ಮಂಗಳೂರಿನ ಬಿಕರ್ನಕಟ್ಟೆಯ ಪೃಥ್ವಿರಾಜ್ ಝಾಪೊರಿಝಿಯಾ ನಗರದಿಂದ ರೈಲಿನಲ್ಲಿ ಹೊರಟು ಬುಧವಾರ ಬುಡಾಪೆಸ್ಟ್ ವಿಮಾನ ನಿಲ್ದಾಣ ತಲುಪಿದ್ದಾರೆ. ಬುಧವಾರ ಸಂಜೆ “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, “ಮೊದಲು ಸ್ಲೊವಾಕಿಯಾಕ್ಕೆ ಹೋಗಲು ನಿರ್ಧರಿಸಿದ್ದೆವು. ಅಲ್ಲಿನ ಗಡಿಯಲ್ಲಿ ಪ್ರವೇಶಿಸಲು ಅಡ್ಡಿಯಾಗುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಹಂಗೇರಿಯತ್ತ ಹೊರಟೆವು. ನಮ್ಮ ರೈಲಿನಲ್ಲಿ ಸುಮಾರು 500 ಮಂದಿ ವಿದ್ಯಾರ್ಥಿಗಳಿದ್ದಾರೆ. ನಮ್ಮ ಹಿಂದಿನಿಂದ ಇನ್ನೊಂದು ರೈಲಿನಲ್ಲಿ ಸುಮಾರು 1,000 ವಿದ್ಯಾರ್ಥಿಗಳು ಹೊರಟಿದ್ದಾರೆ. ಹಂಗೇರಿಯಿಂದ ವಿಮಾನ ವ್ಯವಸ್ಥೆ ಮಾಡಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿಯವರು ತಿಳಿಸಿದ್ದಾರೆ. ಆದರೆ ಅಲ್ಲಿ ಸುಮಾರು 5,000 ವಿದ್ಯಾರ್ಥಿ ಗಳು ಕಾಯುತ್ತಿದ್ದಾರೆ. ಎಲ್ಲರಿಗೂ ವಿಮಾನದ ವ್ಯವಸ್ಥೆ ಅಗಬಹುದೇ ಎಂಬ ಆತಂಕವಿದೆ’ ಎಂದಿದ್ದಾರೆ.
ವಿಮಾನ ನಿಲ್ದಾಣ ತಲುಪಿದ ಬಿಜೈಯ ಅನುಷಾ
ಬಿಜೈ ನಿವಾಸಿ ಅನುಷಾ ಉಕ್ರೇನ್ ನಿಂದ ಹೊರಟಿದ್ದು ರೊಮೇನಿಯಾ ವಿಮಾನ ನಿಲ್ದಾಣ ತಲುಪಿದ್ದಾರೆ. “ಕೆಲವು ದಿನಗಳಿಂದ ತುಂಬಾ ಆತಂಕಕ್ಕೆಒಳಗಾಗಿದ್ದೆವು. ಈಗ ಸ್ವಲ್ಪ ನಿರಾಳವಾಗಿದ್ದೇವೆ. ಆಕೆ ನಿರಂತರ ಸಂಪರ್ಕದ ಲ್ಲಿದ್ದಾಳೆ. ಸದ್ಯ ಭಾರತದ 300 ವಿದ್ಯಾರ್ಥಿಗಳ ಜತೆ ರೊಮೇನಿಯಾದ ವಿಮಾನ ನಿಲ್ದಾಣದ ಬಳಿ ಬಾಸ್ಕೆಟ್‌ಬಾಲ್ ಕೋರ್ಟ್ ಆವರಣದಲ್ಲಿ ಆಶ್ರಯ ಪಡೆದಿದ್ದಾಳೆ. ಅಲ್ಲಿ ಅಗತ್ಯ ವ್ಯವಸ್ಥೆಗಳಿವೆ ಎಂದು ಸಂದೇಶ ಕಳುಹಿಸಿದ್ದಾಳೆ’ ಎಂದು ಆಕೆಯ ಹೆತ್ತವರು ತಿಳಿಸಿದ್ದಾರೆ.
ಈಗ ನೆಮ್ಮದಿ: ಕ್ಲೇಟನ್ ತಾಯಿ
“ಪುತ್ರ ಸ್ಲೊವಾಕಿಯಾ ತಲುಪಿದ್ದಾನೆ. ಬುಧವಾರ ಮಧ್ಯಾಹ್ನ ವೀಡಿಯೋ ಕರೆ ಮಾಡಿದಾಗ ನೆಮ್ಮದಿಯಾಯಿತು. ಆತ ಸೇರಿದಂತೆ ಎಲ್ಲರೂ ಸುರಕ್ಷಿತವಾಗಿ ಮನೆಗೆ ತಲುಪಲಿ’ ಎಂದು ಪಡೀಲ್ ನಿವಾಸಿ ಕ್ಲೇಟನ್ ತಾಯಿ ಒಲಿನ್ ಮರಿಯಾ ಲಸ್ರಾದೋ ಹೇಳಿದ್ದಾರೆ.
ಹಂಗೇರಿಯತ್ತ ಅನೈನಾ
ದೇರೆಬೈಲ್‌ನ ಅನೈನಾ ಅನ್ನಾ ಖಾರ್ಕಿವ್‌ನಿಂದ ಮಂಗಳವಾರ ಹೊರಟಿದ್ದು ಬುಧವಾರ ಗಡಿ ಪ್ರದೇಶ ಲ್ವಿವ್ ತಲುಪಿದ್ದಾರೆ. ಅಲ್ಲಿಂದ ರೈಲಿನಲ್ಲಿಪ್ರಯಾಣಿಸಿದರೆ ಹಂಗೇರಿ ತಲುಪ ಬಹುದು. ಆಕೆಯ ಪಾಸ್‌ಪೋರ್ಟ್ ಏಜೆನ್ಸಿಯವರ ಬಳಿ ಉಳಿದಿದೆ. ಹಂಗೇರಿಗೆ ತೆರಳಿದ ಮೇಲೆ ಏನಾಗುತ್ತದೆಂದು ನೋಡಬೇಕು ಎಂದು ತಾಯಿ ಸಂಧ್ಯಾ ತಿಳಿಸಿದ್ದಾರೆ.
ಸಾಕ್ಷಿ ರೊಮೇನಿಯಾಕ್ಕೆ
ಬಿಜೈಯ ಸಾಕ್ಷಿ ಸುಧಾಕರ್ ಮಂಗಳವಾರವೇ ಉಕ್ರೇನ್ ಗಡಿಯತ್ತ ಪ್ರಯಾಣಿಸಿದ್ದು ರೊಮೇನಿಯಾ ದೇಶದ ಬುಕಾರೆಸ್ಟ್ ವಿಮಾನ ನಿಲ್ದಾಣ ವನ್ನು ಸುರಕ್ಷಿತವಾಗಿ ತಲುಪಿದ್ದಾರೆ.
ಯಾರ್ಯಾರು ಎಲ್ಲಿದ್ದಾರೆ?
ದ.ಕ. ಮೂಲದ 18 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಂಕಷ್ಟಕ್ಕೀಡಾಗಿದ್ದು ಜಿಲ್ಲಾಡಳಿತ ಬುಧವಾರ ಸಂಜೆ ನೀಡಿದ ಮಾಹಿತಿ ಈ ಕೆಳಗಿನಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.