ಮಂಗಳೂರಿನ ಸಮಗ್ರ ಅಭಿವೃದ್ಧಿಯ ಕನಸು
Team Udayavani, Feb 11, 2018, 8:15 AM IST
ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಸಬಾ ಬೆಂಗ್ರೆ, ತೋಟ ಬೆಂಗ್ರೆ, ಕುದ್ರೋಳಿ ಬೆಂಗ್ರೆ ಮತ್ತು ಬೊಕ್ಕಪಟ್ಣ ಬೆಂಗ್ರೆಯ 1,138 ನಿವಾಸಿಗಳಿಗೆ ಹಕ್ಕುಪತ್ರಗಳನ್ನು ಶನಿವಾರ ನಗರದ ಬೆಂಗ್ರೆ ಫುಟ್ಬಾಲ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಜೆ.ಆರ್. ಲೋಬೋ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗ್ರೆ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು ಎಂಬ ನಿರ್ಣಯವನ್ನು ಬಂಗಾರಪ್ಪ ಅವರು ಮುಖ್ಯಮಂತ್ರಿ
ಯಾಗಿದ್ದ ವೇಳೆ ಕೈಗೊಂಡಿದ್ದರು. ಆದರೆ ಈ ಜಾಗಗಳಿಗೆ ಸರ್ವೆ ನಂಬರ್ ಇರಲಿಲ್ಲ. ಹಾಗಿದ್ದರೂ ಮುಖ್ಯಮಂತ್ರಿಗಳ ಆದೇಶದ ಮೇರೆಗೆ 150 ಹಕ್ಕುಪತ್ರ ಗಳನ್ನು ವಿತರಿಸಿದ್ದೆವು. ಅಂದು ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಇಷ್ಟು ಸಮಯ ತಗುಲಿತು ಎಂದರು. ಜಾಗಕ್ಕೆ ಹಕ್ಕುಪತ್ರ ಮತ್ತು ಆರ್‌ಟಿಸಿ ನೀಡಬೇಕು ಎಂಬುದು ಬೆಂಗ್ರೆ ನಿವಾಸಿಗಳ ಬಹುದಿನದ ಬೇಡಿಕೆ. ಅದ ಕ್ಕೆಂದೇ ಈ ಪ್ರದೇಶದ ಮಂದಿಗೆ ಸರ್ವೆ ನಂಬರ್ ನೀಡಿ ಕಂದಾಯ ಗ್ರಾಮ ಎಂದು ಘೋಷಣೆ ಮಾಡಿದ್ದೇವೆ. ಇದು ಇಲ್ಲಿನ ಮಂದಿಗೆ ಸಿಕ್ಕ ಪ್ರಥಮ ಜಯ ಎಂದರು.
ಬೆಂಗ್ರೆ ಹಳೆ ಬಂದರು ಮತ್ತು ಮೀನುಗಾರಿಕೆ ಬಂದರಿನ ಅಭಿವೃದ್ಧಿಯನ್ನು ನಡೆಸುವುದು ನನ್ನ ಮುಂದಿನ ಚಿಂತನೆ. ಬಂದರು ಅಭಿವೃದ್ಧಿಯಾಗಲು ಲಕ್ಷ
ದ್ವೀಪದ ಸಂಪರ್ಕ ಮತ್ತು ಸಂಬಂಧ ವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಉನ್ನತ ಮಟ್ಟದ ಸಮಿತಿಯೊಡನೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದೇನೆ. ಅವರು ಈ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ನಡೆಸಲು ಒಲವು ನೀಡಿದ್ದಾರೆ. ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸುಮಾರು 250 ಕೋ. ರೂ. ಬಂಡವಾಳ ಹೂಡಲು ತಯಾರಾಗಿದ್ದಾರೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರದೊಡನೆ ಚರ್ಚಿಸಿ ಹಳೆ ಬಂದರು ಮೂಲಭೂತ ಸೌಕರ್ಯ ಅಬಿವೃದ್ಧಿಗೆ ಮತ್ತು ಹೂಳೆತ್ತುವಿಕೆಗೆ 100 ಕೋ. ರೂ. ಅನುದಾನ ಮಂಜೂರು ಮಾಡಿಸಿದ್ದೇನೆ ಎಂದರು.
ಹಳೆ ಬಂದರು ಮತ್ತು ಹೊಸ ಬಂದರು ನಡುವೆ ರಸ್ತೆ ನಿರ್ಮಾಣ ಮಾಡಿ ಬೆಂಗ್ರೆಗೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಬೇಕು ಎಂಬ ಉದ್ದೇಶ
ವಿದೆ. ಇದಕ್ಕಾಗಿ ಖಾಯಂ ಸೇತುವೆ ನಿರ್ಮಾಣ ಮಾಡುವ ಯೋಜನೆಯನ್ನು ಕೈಗೊಂಡು ಮಂಗಳೂರನ್ನು ಆರ್ಥಿಕವಾಗಿ ಬಲಗೊಳಿಸುತ್ತೇವೆ ಎಂದವರು ವಿವರಿಸಿದರು.
ಫೆ. 17ಕ್ಕೆ ಕಂದಾಯ ಅದಾಲತ್
ತಹಶೀಲ್ದಾರ್ ಟಿ. ಗುರುಪ್ರಸಾದ್ ಮಾತನಾಡಿ, ಬೆಂಗ್ರೆ ವಲಯದಲ್ಲಿ ಕಳೆದ 65 ವರ್ಷಗಳಿಂದಲೂ ಸರ್ವೆ ನಂಬರ್ ಆಗಿರಲಿಲ್ಲ. ಈಗಾಗಲೇ 1,138 ಹಕ್ಕುಪತ್ರಗಳನ್ನು ವಿತರಿಸಿದ್ದೇವೆ. ಹಕ್ಕುಪತ್ರಗಳನ್ನು ಪಡೆದ ಮಂದಿಗೆ ಮುಂದಿನ 45 ದಿನಗಳ ಒಳಗೆ ಆರ್‌ಟಿಸಿಯನ್ನು ಕೂಡ ಮಾಡಲಾಗುವುದು. 2003ರಲ್ಲಿ ನೀಡಿದ 650 ಹಕ್ಕುಪತ್ರಗಳಿಗೆ ಆರ್‌ಟಿಸಿ ನೀಡಲು ಫೆ. 17ರಂದು ಬೆಂಗ್ರೆಯಲ್ಲಿ ಕಂದಾಯ ಅದಾಲತ್ ನಡೆಸಲಾಗುವುದು. ಅನಂತರ ಪಾಲಿಕೆಯಲ್ಲಿ ಖಾತೆಯನ್ನು ನೋಂದಣಿ ಮಾಡಬೇಕು. ಬಳಿಕ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ ಎಂದು ಹೇಳಿದರು.
ಬೆಂಗ್ರೆ ಮಹಾಸಭಾದ ಅಧ್ಯಕ್ಷ ಮೋಹನ ಬೆಂಗ್ರೆ ಪ್ರಸ್ತಾವನೆಗೈದರು. ಮನಪಾ ಸದಸ್ಯರಾದ ವಿನಯರಾಜ್, ಪ್ರವೀಣ್ ಆಳ್ವ, ವಿಶ್ವಾಸ್ ಕುಮಾರ್ ದಾಸ್, ಮೀರಾ, ಶೇಖರ್ ಸುವರ್ಣ, ಅಬ್ದುಲ್ ಸಲೀಮ್, ಸಿ.ಪಿ. ಮುಸ್ತಫಾ, ಗುರುಪ್ರಸಾದ್, ಶ್ರೀಕರ ಸುವರ್ಣ, ರಮಾನಂದ ಪೂಜಾರಿ, ಮೋಹನ್ ಮೆಂಡನ್, ಚೇತನ್ ಬೇಂಗ್ರೆ, ಟಿ.ಕೆ. ಸುಧೀರ್, ಮೆರಿಲ್ ರೇಗೊ, ಡೆನ್ನಿಸ್ ಡಿ’ಸಿಲ್ವಾ, ನವೀನ್ ಕರ್ಕೇರ, ಆಸಿಫ್ ಉಪಸ್ಥಿತರಿದ್ದರು.
ಚುನಾವಣೆಯಲ್ಲಿ ಸ್ಪರ್ಧೆ
ಶಾಸಕ ಜೆ.ಆರ್. ಲೋಬೋ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ. ಉದ್ಯಮ ಸೃಷ್ಟಿಯ ಸಹಿತ ಮಂಗಳೂರಿನ ಅಭಿವೃದ್ಧಿಗೆ ಅನೇಕ ಕನಸುಗಳನ್ನು ಕಂಡಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
R Ashwin: ಅಶ್ವಿನ್‌ಗೆ ಖೇಲ್ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.