ಚೆಂಡೆತಡ್ಕ ಚಾರಿತ್ರಿಕ ಕಳೆಂಜನ ಗುಂಡಿಗೂ ತಟ್ಟಿದ ಬರ!

ಜಾಂಬ್ರಿ ಗುಹಾ ಪ್ರವೇಶ ಸಮೀಪ ಇತಿಹಾಸದಲ್ಲೇ ಮೊದಲ ಸಲ ಬತ್ತಿದೆ ನೀರು

Team Udayavani, May 12, 2019, 6:00 AM IST

24

ಪಾಣಾಜೆ: ಕೇರಳ ಕರ್ನಾಟಕ ಗಡಿ ಭಾಗದ ಆರ್ಲಪದವು ಸನಿಹದ ರಕ್ಷಿತಾರಣ್ಯ ವಲಯದ ಚೆಂಡೆತ್ತಡ್ಕ ಹಲವು ಐತಿಹ್ಯಗಳನ್ನು ಮಡಿಲಲ್ಲಿ ಇಟ್ಟುಕೊಂಡ ಪ್ರದೇಶ. ಸದಾ ನೀರಿನ ಸೆಲೆ ಇರುವ ಇಲ್ಲಿನ ಚಾರಿತ್ರಿಕ ಕಳೆಂಜನ ಗುಂಡಿಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ನೀರು ಬತ್ತಿದೆ!

12 ವರ್ಷಕ್ಕೊಮ್ಮೆ ಲಕ್ಷಾಂತರ ಭಕ್ತರ ಸಮಾಗಮದೊಂದಿಗೆ ನಡೆಯುವ ಐತಿಹಾಸಿಕ ಜಾಂಬ್ರಿ ಗುಹಾ ಪ್ರವೇಶದ ಸನಿಹದಲ್ಲಿ ಕಳೆಂಜನ ಗುಂಡಿ ಇದೆ. ಮುಳಿಹುಲ್ಲು ಆವರಿಸಿರುವ ಇಲ್ಲಿ ಜಾನುವಾರು ಮೇವಿಗೆಂದು ಬರುತ್ತಿದ್ದವರ ಬಾಯಾರಿಕೆ ತಣಿಸಲು ಈ ಹೊಂಡ ಆಶ್ರಯಿಸಿದ್ದರು. ಕಾಡು ಪ್ರಾಣಿ, ಜಾನುವಾರುವಿನ ದಾಹವನ್ನೂ ನೀಗಿಸುತಿತ್ತು. ಪ್ರತಿ ವರ್ಷ ಮಳೆ ಸುರಿದು ಜಾಂಬ್ರಿ ಕೆರೆ ತುಂಬಿ ಕಳೆಂಜನ ಗುಂಡಿ ಭರ್ತಿ ಆಗುತಿತ್ತು. ವರ್ಷವಿಡಿ ಒರೆತೆ ತುಂಬಿ ಜಲಚರಗಳ ದಾಹ ತಣಿಸುತ್ತಿತ್ತು.

ಕಳೆಂಜನ ಗುಂಡಿಯ ಐತಿಹ್ಯ
ಈ ಕಳೆಂಜನ ಗುಂಡಿಗೆ ಒಂದು ಇತಿಹಾಸ ಇದೆ. ತುಳುನಾಡಿನ ಕರ್ಕಾಟಕ ಮಾಸ ಮನೆಗಳಿಗೆ ತೆರಳಿ ಕಷ್ಟಗಳನ್ನು ಕಳೆಯುವ ಆಟಿ ಕಳೆಂಜ ದಾನ ಧರ್ಮಗಳನ್ನು ಪಡೆಯುವ ತಿಂಗಳು. ಆದರೆ ಆಟಿ ಕಳೆಂಜನೋರ್ವ ಆಟಿ ತಿಂಗಳು ಕಳೆದು ಸಿಂಹ ಸಂಕ್ರಾಂತಿ ಬಂದರೂ ಯಾತ್ರೆ ಮುಂದುವರಿಸುತ್ತಾನೆ. ಸಿಂಹ ಮಾಸದಲ್ಲಿ ಧರ್ಮ ಬೇಡುವುದು ನಿಷಿದ್ಧವಾದರೂ ಕಟ್ಟಳೆಯನ್ನು ಮೀರಿ ಸಿಂಹ ಮಾಸದ ಮೊದಲ ದಿನ ಚೆಂಡೆತ್ತಡ್ಕ ಜಾಂಬ್ರಿ ಗುಹೆ ಸಮೀಪ ಬಂದಾಗ ಅದೃಶ್ಯನಾಗುತ್ತಾನೆ. ಈ ಪ್ರದೇಶ ಕಳೆಂಜನ ಗುಂಡಿ ಎಂದು ಜನಜನಿತವಾಗಿದೆ ಎನ್ನುತ್ತದೆ ಇತಿಹಾಸ.
ಇದೇ ಹೊಂಡ ಹತ್ತಿರ ಕಳೆಂಜ ತನ್ನ ಒಲಿಯ ಕೊಡೆಯನ್ನು ಊರಿದ ಸ್ಥಳ ವೆಂದು ಹೇಳಲಾಗುವ ಚಿಕ್ಕ ರಂಧ್ರವಿದೆ.

ಊರಲ್ಲೂ ನೀರಿಗೆ ಬರ
ಚೆಂಡೆತ್ತಡ್ಕ ಸನಿಹದ ಪುತ್ತೂರು ತಾಲೂಕಿಗೆ ಸೇರಿರುವ ಗಿಳಿಯಾಲು ಪರಿಸರದಲ್ಲಿಯು ನೀರಿನ ಸಮಸ್ಯೆ ಉಂಟಾಗಿದೆ. ಕೃಷಿ ತೋಟಕ್ಕೆ ನೀರಿಲ್ಲದೆ ಜನರು ಸಮಸ್ಯೆಗೆ ಒಳಗಾಗಿದ್ದಾರೆ. ಪರಿಸ್ಥಿತಿ ಈ ತೆರನಾಗಿ ಮುಂದುವರಿದರೆ ಕುಡಿಯುವ ನೀರಿಗೂ ಬರ ಬಂದೊಗುವ ಸಾಧ್ಯತೆ ಇದೆ ಅನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಬರಗಾಲದ ಆತಂಕ
ಎರಡು ವರ್ಷ ಹಿಂದೆ ನಡೆದ ಜಾಂಬ್ರಿ ಮಹೋತ್ಸವ ಸಂದರ್ಭ ಕಳೆಂಜನ ಗುಂಡಿ ನೀರಿನಿಂದ ತುಂಬಿತ್ತು. ಇತಿಹಾಸದಲ್ಲಿ ಪ್ರಥಮ ಬಾರಿ ಎಂಬಂತೆ ಬತ್ತಿರುವುದು ಪ್ರಕೃತಿ ನೀಡುವ ಬರಗಾಲದ ಸೂಚನೆ. ಎಲ್ಲೆಂದರಲ್ಲಿ ಕೊಳವೆ ಬಾವಿ ನಿರ್ಮಾಣ ಕಳೆಂಜನ ಗುಂಡಿ ಒರತೆ ನಿಲ್ಲಲು ಕಾರಣವಾಗಿರಬಹುದು ಅನ್ನುತ್ತಾರೆ ಸ್ಥಳೀಯ ನಿವಾಸಿಗಳು.

ನೀರಿಲ್ಲದೆ ಬತ್ತಿದೆ
ಬೇಸಗೆಯಲ್ಲಿಯೂ ಈ ಹೊಂಡದಲ್ಲಿ ನೀರಿರುತ್ತಿತ್ತು. ಕೈಯಲ್ಲೇ ತೆಗೆದು ಕುಡಿಯಲು ಸಾಧ್ಯವಿರು ವಷ್ಟರ ಮಟ್ಟಿಗೆ ಮೇಲ್ಭಾಗದಲ್ಲಿ ನೀರು ಕಾಣುತಿತ್ತು. ಈ ಬಾರಿ ಬತ್ತಿದೆ. ಇದಕ್ಕೆ ಬರಗಾಲವೂ ಕಾರಣ. ಹೊಂಡ ತುಂಬಲು ಮಳೆ ಬರಬೇಕಷ್ಟೆ.
– ನಾರಾಯಣ ಪ್ರಕಾಶ, ಸ್ಥಳೀಯ ನಿವಾಸಿ

ಮಾಧವ ನಾಯಕ್‌ ಕೆ.

ಟಾಪ್ ನ್ಯೂಸ್

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.