ಆಂಗ್ಲ ಯಕ್ಷಗಾನವನ್ನು ಬೆಳೆಸಿದ್ದ ಐತಾಳರ ಶ್ರಮ ಸ್ಮರಣೀಯ :ಆಸ್ರಣ್ಣ
Team Udayavani, Jul 10, 2017, 2:50 AM IST
ಪಣಂಬೂರು: ಹಲವು ಪರ ವಿರೋಧಗಳ ಮಧ್ಯೆಯೂ ಪಿ.ವಿ. ಐತಾಳರು ಆಂಗ್ಲಭಾಷೆಯ ಯಕ್ಷಗಾನ ವನ್ನು ಬರೆದು ಪ್ರದರ್ಶಿಸಿದರು. ಅವರ ಪ್ರಯತ್ನಕ್ಕೆ ಈಗ ಫಲ ಸಿಗುತ್ತಿದೆ ಎಂದು ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಪ್ರಧಾನ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಅವರು ಪಿ.ವಿ. ಐತಾಳರ 20ನೇ ಸಂಸ್ಮರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಣಂಬೂರು ಕುಳಾಯಿಯ ಮಾಜಿ ಶಾಸಕ, ಖ್ಯಾತ ನಾಟಕಕಾರ, ಯಕ್ಷಗಾನ ಕಲಾವಿದರೂ ಆದ ಪಿ.ವಿ. ಐತಾಳರ ಬಗ್ಗೆ ಕರ್ಣಾಟಕ ಬ್ಯಾಂಕಿನ ಪಿ. ಜಯರಾಂ ಭಟ್ ಮಾತನಾಡಿ, ಐತಾಳರ ಮಕ್ಕಳೆಲ್ಲರೂ ಜತೆ ಸೇರಿ ತಂದೆಯವರ ಕಾರ್ಯಕ್ರಮ ನೆನಪಿನಲ್ಲಿ ಉಳಿಯುವಂತೆ ಮಾಡುವ ಮೂಲಕ ಯಕ್ಷಗಾನ ಸೇವಾ ಕೈಂಕರ್ಯವನ್ನು ಮುಂದುವರಿಸುತ್ತಿರುವುದು ಶ್ಲಾಘ ನೀಯ ಎಂದರು.
ಕಟೀಲು ಮೇಳಗಳ ಸಂಚಾಲಕ ದೇವಿ ಪ್ರಸಾದ್ ಶೆಟ್ಟರು ಮುಖ್ಯ ಅತಿಥಿಗಳಾಗಿದ್ದರು.
ಹಿರಿಯ ಕಲಾವಿದ ಉಮೇಶ್ ಶೆಟ್ಟಿ ನಿಡ್ಡೋಡಿ ಅವರಿಗೆ ವೆಂಕಟ ರತ್ನ ಪ್ರಶಸ್ತಿ, 20 ಸಾ.ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಕಲಾವಿದ ಕುರ್ನಾಡು ಶಿವಣ್ಣ ಆಚಾರ್ಯ ಅವರನ್ನು ಗೌರವಿಸಲಾಯಿತು.
ಯಕ್ಷಗಾನ ಕಲಾವಿದ ಹರಿಪ್ರಸಾದ್ ಕಾರಂತ್ ಮತ್ತು ಬಳಗ ಪ್ರಾರ್ಥಿಸಿದರು. ಡಾ| ಪಿ. ಸತ್ಯಮೂರ್ತಿ ಐತಾಳರು ಸ್ವಾಗತಿಸಿದರು. ಕಾರ್ಯಕ್ರಮದ ಆಯೋಜಕ ಪಿ. ಸಂತೋಷ್ ಐತಾಳರು ಪ್ರಸ್ತಾವಿಸಿದರು. ಪಿ. ಸುರೇಶ್ ಐತಾಳ್ ವಂದಿಸಿದರು. ಶಂಕರನಾರಾಯಣ ಮೈರ್ಪಾಡಿ ನಿರ್ವಹಿಸಿದರು.
ಚೂಡಾಮಣಿ ಪ್ರಸಂಗದ ಕಲಾವಿದರಿಗೆ ಪಿ. ಶ್ರೀಧರ್ ಐತಾಳ್ ಅವರು ಸ್ಮರಣಿಕೆ ನೀಡಿದ ರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Poster Dispute: ಭಾರತ ಭೂಶಿರ ವಿರೂಪ: ಬಿಜೆಪಿಯ ಇಂದಿನ ಪ್ರತಿಭಟನೆ ರದ್ದು
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Former Prime Minister: ಮನಮೋಹನ್ ಸಿಂಗ್ ಕುಟುಂಬದ ಪರಿಚಯ; ನಡೆದು ಬಂದ ಹಾದಿ….
Congress: ಪಕ್ಷದೊಳಗೆ ಹೊಸ ನಾಯಕತ್ವಕ್ಕೆ ಅವಕಾಶ ಸಿಗಬೇಕು: ಮಲ್ಲಿಕಾರ್ಜುನ ಖರ್ಗೆ
ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.