ಚುನಾವಣಾ ಆಯೋಗಕ್ಕೆ ಬಿಜೆಪಿ ವಿರುದ ದೂರು
Team Udayavani, Jan 17, 2018, 10:58 AM IST
ಮಂಗಳೂರು: ಬಿಜೆಪಿ ತನ್ನ ಪ್ರಚಾರ ಸಭೆಯ ಬ್ಯಾನರ್‌ಗಳಲ್ಲಿ ದೇವರ ಚಿತ್ರಗಳನ್ನು ಹಾಕಿಕೊಂಡು ಅವಮಾನಿಸಿರುವುದು ಖಂಡನೀಯ, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತೇವೆ ಎಂದು ಸಚಿವ ಬಿ. ರಮಾನಾಥ ರೈ ಹೇಳಿದರು.
ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಹಿಂದುಳಿದ
ವರ್ಗದ, ಬಿಲ್ಲವ ಸಮಾಜದ ಮತಗಳಿಕೆಗೆ ಬಿಜೆಪಿ ಅಧಿಕೃತ ರಾಜಕೀಯ ವೇದಿಕೆಯಲ್ಲಿ ಕೋಟಿಚೆನ್ನಯರ ಚಿತ್ರಗಳನ್ನು ಹಾಕಿದ್ದು ಬಿಲ್ಲವ ಸಮಾಜಕ್ಕೆ ಮಾಡಿದ ಅವಮಾನ ಎಂದರು. ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಪರವಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಹಿಂದುಳಿದ ವರ್ಗಕ್ಕೆ ಸಾಮಾಜಿಕ, ಆರ್ಥಿಕ ನ್ಯಾಯ ಒದಗಿಸುತ್ತಿದೆ. ಬಿಜೆಪಿ ರಾಜಕೀಯ ಲಾಭಕ್ಕೋಸ್ಕರ ಕಾಂಗ್ರೆಸ್ ಹೆಸರನ್ನು ಕೆಡಿಸುತ್ತಿದೆ ಎಂದು ಆರೋಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.