ನಿಶ್ಶರ್ತ ಪ್ರೀತಿಯ ಸಂಬಂಧ ಶಾಶ್ವತ: ಸುಧಾ ಮೂರ್ತಿ
Team Udayavani, Nov 18, 2017, 10:54 AM IST
ಬೆಳ್ತಂಗಡಿ: ಸಂಬಂಧಗಳು ಅರ್ಥಪೂರ್ಣವಾದಾಗ ಹಣ ಕಡಿಮೆ ಇದ್ದರೂ ಖುಷಿಯ ಜೀವನ ನಡೆಸ ಬಹುದು. ಇಲ್ಲದಿದ್ದರೆ ಮರಳುಗಾಡಿನ ಯಾತ್ರಿಕನಂತಹ ಬದುಕು ನಮ್ಮದಾಗುತ್ತದೆ. ನಿಶ್ಶರ್ತ ಪ್ರೀತಿ ಇದ್ದರೆ ಆ ಸಂಬಂಧ ಶಾಶ್ವತವಾಗಿರುತ್ತದೆ. ಕವಿ, ಲೇಖಕ ಹಾಗೂ ಓದುಗನ ಮಧ್ಯೆ ಅಂತಹ ಒಂದು ಹದವಾದ ಭಾವ ಬೆಸುಗೆ ಇರುತ್ತದೆ ಎಂದು ಲೇಖಕಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದರು.
ಅವರು ಶುಕ್ರವಾರ ಸಂಜೆ ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ಲಕ್ಷದೀಪೋತ್ಸವ ಅಂಗವಾಗಿ ನಡೆದ 85ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಅನುಭವವೇ ಸಾಹಿತ್ಯ
ಸಾಹಿತ್ಯ ಎಂದರೆ ಬಹಳ ರೋಚಕ ವಾಗಿರಬೇಕು ಎಂಬ ನಿಲುವಿದೆ. ಆದರೆ ಅನುಭವವೇ ಸಾಹಿತ್ಯ ಎಂದು ನನ್ನ ನಂಬಿಕೆ. ನಾವು ನೋಡಿದ್ದನ್ನು ಅಕ್ಷರ ರೂಪಕ್ಕಿಳಿಸಿದಾಗ ಅದು ಸಾಹಿತ್ಯ ವಾಗುತ್ತದೆ. ಸಾಹಿತ್ಯದಿಂದ ಏನು ಲಾಭ ಎಂದು ಎಲ್ಲವನ್ನೂ ಆರ್ಥಿಕ ಲಾಭ ನಷ್ಟದ ಮೂಲಕ ಲೆಕ್ಕಾಚಾರ ಹಾಕ ಬಾರದು. ಅದು ಸಂತೋಷವನ್ನು ನೀಡುತ್ತದೆ ಎಂದರು.
ಭಾಷೆಯ ಮೂಲಕ ಗ್ರಹಿಕೆ
ಅಧ್ಯಕ್ಷತೆ ವಹಿಸಿದ್ದ ಕವಿ ಬಿ.ಆರ್. ಲಕ್ಷ್ಮಣ ರಾವ್, ನಾವು ಜಗತ್ತನ್ನು ಗ್ರಹಿಸುವುದು ನಮ್ಮ ಭಾಷೆಯ ಮೂಲಕ. ಲೋಕವನ್ನು ಸ್ಪಷ್ಟ ವಾಗಿ ಗ್ರಹಿಸಲು ನನಗೆ ಕವಿತೆ ಮೂಲಕ ಕನ್ನಡದ ಕನ್ನಡಕ ದೊರೆತಿದೆ ಎಂದರು.
ಉಪನ್ಯಾಸ
ಉಪನ್ಯಾಸಕ, ಲೇಖಕ ಎಸ್.ಆರ್. ವಿಜಯ ಶಂಕರ ಅಡಿಗರ ಸ್ಮೃತಿ ಮಾಡಿ, ನವ್ಯ ಕಾವ್ಯ ವ್ಯಕ್ತಿಯ ವಿಶಿಷ್ಟತೆ ಯನ್ನು ಹುಡುಕುತ್ತದೆ. ಕವಿತೆಯ ಹಳೆ ಪ್ರಕಾರ ಎಲ್ಲ ಮನುಷ್ಯರಿಗೂ ಅನ್ವಯ ವಾಗುತ್ತದೆ. ಹಾಗಂತ ನವ್ಯ ಎಂದರೆ ಹೊಸತಲ್ಲ, ಪುರಾತನ ಕಾಲದಿಂದ ಇದ್ದದ್ದು. ಆದರೆ ಹೊಸತನ್ನು ಹುಡು ಕುವ ಸ್ವಭಾವ ಎಂದರು.
“ಸಾಹಿತ್ಯ ಸಾಮರಸ್ಯ’ ಕುರಿತು ಸಾಹಿತಿ ರಂಜಾನ್ ದರ್ಗಾ, ಪಂಪ ಕಾವ್ಯದ ಮೂಲಕ ಲೋಕಕ್ಕೆ ಪಾಠ ಕಲಿಸುವ ಕಾಯಕ ಮಾಡಿದ. ಬೇಡನೊಬ್ಬ ರಾಜನ ಮುಂದೆ ಸೆಟೆದು ನಿಲ್ಲು ವಂತಹ ಧೈರ್ಯದ ಕುರಿತು ಅಂದೇ ಚಿತ್ರಣ ನೀಡಿ ನಮ್ಮ ಮನಸ್ಥಿತಿಯ ಸುಧಾರಿಕೆಗೆ ಕರೆ ನೀಡಿದ. ಮೌಲ್ಯ ಗಳನ್ನು ಮುರಿದು ಸವ್ಯಸಾಚಿ ಯಾದ ಕವಿ ಪಂಪ. ಪಂಪನ ಕನಸನ್ನು ನನಸು ಮಾಡಿದವರು ಬಸವಣ್ಣನವರು ಎಂದರು.
“ಹಾಸ್ಯ ಮನೋಧರ್ಮ’ ಕುರಿತು ಸಾಹಿತಿ ಭುವನೇಶ್ವರಿ ಹೆಗಡೆ ಮಾತ ನಾಡಿ, ಹಾಸ್ಯ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕೆಲವೆಡೆ ಭಾಷೆಯಲ್ಲೇ ಹಾಸ್ಯದ ಜಿನುಗಿದೆ. ಆದರೆ ತುಳುನಾಡು ಹಾಸ್ಯ ವನ್ನು ತುಂಬ ಘನತೆಯಿಂದ ಕಾಣು ತ್ತಿದೆ ಎಂದರು.
ಸಮ್ಮಾನ
ಲಕ್ಷ್ಮಣ ರಾವ್ ಅವರನ್ನು ಡಾ| ಡಿ. ಹೆಗ್ಗಡೆ, ಸುಧಾ ಮೂರ್ತಿ ಅವರನ್ನು ಹೇಮಾವತಿ ಹೆಗ್ಗಡೆ, ವಿಜಯಶಂಕರ್, ರಂಜಾನ್ ದರ್ಗಾ ಅವರನ್ನು ಡಿ. ಹಷೇìಂದ್ರ ಕುಮಾರ್, ಭುವನೇಶ್ವರಿ ಹೆಗಡೆ ಅವರನ್ನು ಸುಪ್ರಿಯಾ ಎಚ್. ಕುಮಾರ್ ಸಮ್ಮಾನಿಸಿದರು.
ಸಾಹಿತಿ ಪ್ರೊ| ಎಂ. ರಾಮಚಂದ್ರ ಕಾರ್ಕಳ ನಿರ್ವಹಿಸಿದರು. ಶ್ರದ್ಧಾ ಅಮಿತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ಸಮ್ಮಾನಪತ್ರ ವಾಚಿಸಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಶೆಟ್ಟಿ ವಂದಿಸಿದರು.
4,000 ಕಲಾವಿದರು
ಲಕ್ಷದೀಪೋತ್ಸವ ಕೊನೆಯ ದಿನ ಕ್ಷೇತ್ರದಲ್ಲಿ 4,000 ಕಲಾವಿದರು ಸೇವೆ ಸಲ್ಲಿಸಿದ್ದಾರೆ.
508 ತಂಡದಲ್ಲಿ 2,020 ವಾಲಗ ದವರು, 41 ತಂಡ ಬ್ಯಾಂಡ್ ಸೆಟ್‌ನವರು, 230 ಶಂಖ ಊದುವವರು, 13 ತಂಡ ಡೊಳ್ಳು ಕುಣಿತದವರು, 116 ಕರಡಿ ಮೇಳದವರು, 106 ವೀರಗಾಸೆಯವರು ಭಾಗ ವಹಿಸಿದ್ದರು.
16 ತಂಡದವರು ಯಾತ್ರಿಕರಿಗೆ ಊಟ, ಉಪಾಹಾರದ ವ್ಯವಸ್ಥೆ ಮಾಡಿದ್ದರು.
ಭಕ್ತರು ದೇವಾಲಯ ಹಾಗೂ ಸುತ್ತಮುತ್ತ ಹೂವಿನ ಅಲಂಕಾರ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ಖಾಸಗಿ ಕಟ್ಟಡದ ಅವ್ಯವಸ್ಥೆ ವಿರುದ್ಧ ಸದಸ್ಯರು ಗರಂ
Bantwal: ಸಾಮಾನ್ಯ ಸೈಕಲನ್ನೇ ಎಲೆಕ್ಟ್ರಿಕ್ ಆಗಿ ಪರಿವರ್ತಿಸಿದ ಬಾಲಕ!
Aranthodu;ಅರಣ್ಯದಲ್ಲಿ ಹೊಸ ವರ್ಷ ಪಾರ್ಟಿ: 40 ಮಂದಿ ಅರಣ್ಯ ಇಲಾಖೆಯ ವಶಕ್ಕೆ!
ಹೊಸ ವರ್ಷಕ್ಕೆ ಪುಷ್ಪಾಲಂಕೃತ ಧರ್ಮಸ್ಥಳ: ಒಂದು ಟನ್ ಹಣ್ಣು, ವಿವಿಧ ಬಗೆಯ ಹೂಗಳಿಂದ ಸಿಂಗಾರ
Sri Kukke Subrahmanya ಕ್ಷೇತ್ರದಲ್ಲಿ ವಿಶೇಷ ಪುಷ್ಪಾಲಂಕಾರ ಸೇವೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kollur: ಶ್ರೀ ಮೂಕಾಂಬಿಕಾ ದೇವಸ್ಥಾನದ ತಂತ್ರಿ, ಅರ್ಚಕ ಮಂಜುನಾಥ ಅಡಿಗ ನಿಧನ
Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!
Bhuvanam Gaganam Movie: ಪ್ರೇಮಿಗಳ ದಿನಕ್ಕೆ ಭುವನಂ ಗಗನಂ ತೆರೆಗೆ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Viral: ಫೇಸ್‌ಬುಕ್ ಪ್ರೇಯಸಿ ಭೇಟಿಗೆ ಅಕ್ರಮವಾಗಿ ಪಾಕ್‌ಗೆ ತೆರಳಿ ಸಿಕ್ಕಿಬಿದ್ದ ಭಾರತೀಯ ಯುವಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.