ವಿವಿಧೆಡೆಯಿಂದ 7 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ
Team Udayavani, Feb 1, 2018, 9:37 AM IST
ಪುತ್ತೂರು: ಇಲ್ಲಿನ ಕೋರ್ಟ್ ಮೈದಾನದಲ್ಲಿ 1993ರಲ್ಲಿ ರಾಜ್ಯ ಮಟ್ಟದ ಯುವಜನ ಮೇಳ ಆಯೋಜನೆಯಾಗಿತ್ತು. ಇದೀಗ ಎರಡನೇ ಬಾರಿಗೆ ರಾಜ್ಯ ಯುವಜನ ಮೇಳಕ್ಕೆ ಪುತ್ತೂರಿನಲ್ಲಿ ಗುರುವಾರ (ಫೆ. 1) ವಿಧ್ಯುಕ್ತ ಚಾಲನೆ ಸಿಗಲಿದೆ.
ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ, ರಾಜ್ಯ ಯುವಜನ ಒಕ್ಕೂಟ, ತಾಲೂಕು ಯುವಜನ ಒಕ್ಕೂಟ ಹಾಗೂ ಸುದಾನ ವಸತಿಯುತ ಶಾಲೆಯ ಆಶ್ರಯದಲ್ಲಿ ರಾಜ್ಯ ಮಟ್ಟದ ಯುವಜನ ಮೇಳ 2017-18 ನೆಹರೂನಗರದ ಸುದಾನ ವಸತಿಯುತ ಶಾಲೆಯಲ್ಲಿ ಫೆ. 1ರಿಂದ 4ರತನಕ ನಡೆಯಲಿದೆ.
ನಾಲ್ಕು ದಿನಗಳ ಕಾಲ ಬೆಳಗ್ಗೆ 9ರಿಂದ ರಾತ್ರಿ 11 ಗಂಟೆ ತನಕ ಸ್ಪರ್ಧೆಗಳು ನಡೆಯಲಿವೆ. ಯುವಕ ಹಾಗೂ ಯುವತಿಯರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಭಾವಗೀತೆ ವೈಯಕ್ತಿಕ, ಲಾವಣಿ ವೈಯಕ್ತಿಕ, ರಂಗಗೀತೆ ವೈಯಕ್ತಿಕ, ಏಕಪಾತ್ರಾಭಿನಯ ವೈಯಕ್ತಿಕ, ಗೀಗಿಪದ 5 ಜನ, ಜಾನಪದ ಗೀತೆ 6 ಜನ, ಜಾನಪದ ನೃತ್ಯ 12 ಜನ, ಕೋಲಾಟ 12 ಜನ, ಭಜನೆ ಸ್ಪರ್ಧೆಯಲ್ಲಿ 8 ಜನ ಭಾಗವಹಿಸಬಹುದು.
ಯುವಕರಿಗಾಗಿ ವೀರಗಾಸೆ 12 ಜನ, ಡೊಳ್ಳು ಕುಣಿತ 12 ಜನ, ದೊಡ್ಡಾಟ 15 ಜನ, ಸಣ್ಣಾಟ 12 ಜನ, ಯಕ್ಷಗಾನ 15 ಜನ, ಚರ್ಮವಾದ್ಯ ಮೇಳ 6 ಜನ ಹಾಗೂ ಯುವತಿಯರಿಗಾಗಿ ರಾಗಿ ಬೀಸುವ ಪದ ಇಬ್ಬರು, ಶೋಭಾನೆ ಪದ ನಾಲ್ವರು ಭಾಗವಹಿಸಬಹುದು.
ಆಕರ್ಷಕ ಸಭಾಂಗಣ
ಸುಮಾರು 5760 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. 17 ಪ್ರಕಾರಗಳ ಸ್ಪರ್ಧೆಗಾಗಿ ಮೂರು ವೇದಿಕೆಗಳನ್ನು
ನಿರ್ಮಿಸಲಾಗಿದೆ. ಒಂದು ಪ್ರಮುಖ ವೇದಿಕೆಯಿದ್ದು, ಇನ್ನೊಂದು ವೇದಿಕೆಯನ್ನು ಸುದಾನ ಶಾಲೆ ಹಿಂಭಾಗದಲ್ಲಿ
ನಿರ್ಮಿಸಲಾಗಿದೆ.
ಪಕ್ಕದಲ್ಲೇ ಇರುವ ಬಿಇಎಂ ಶಾಲೆಯಲ್ಲಿ ಮತ್ತೂಂದು ವೇದಿಕೆ ತಲೆ ಎತ್ತಿದೆ. ಪ್ರಮುಖ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ಹಾಗೂ ದೊಡ್ಡ ಮಟ್ಟಿನ ಸ್ಪರ್ಧೆಗಳು ನಡೆಯಲಿವೆ. ಇಲ್ಲಿ ಸುಮಾರು 3 ಸಾವಿರ ಮಂದಿ ಏಕಕಾಲದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಆಕರ್ಷಕ ವೇದಿಕೆ ನಿರ್ಮಿಸಿದ್ದು, ಸಭೆಗೆ ಫ್ಯಾನ್ ಅಳವಡಿಸಿರುವುದು ವಿಶೇಷ. ಸ್ಪರ್ಧಿಗಳು, ತೀರ್ಪು ಗಾರರು, ಅಧಿಕಾರಿಗಳು, ಸ್ವಯಂ ಸೇವಕರು, ಪ್ರೇಕ್ಷಕರು ಸಹಿತ 7 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ರಾಜ್ಯಮಟ್ಟದ ಯುವಜನ ಮೇಳ ಇದಾಗಿರುವ ಕಾರಣ, ಸಾಕಷ್ಟು ವಿಶೇಷತೆಗಳು ಇಲ್ಲಿರಲಿವೆ.
ಅಂತಿಮ ಹಂತದ ಸಿದ್ಧತೆ
ರಾಜ್ಯಮಟ್ಟದ ಯುವಜನ ಮೇಳದ ಅಂತಿಮ ಹಂತದ ಸಿದ್ಧತೆ ನಡೆಯುತ್ತಿವೆ. ಗುರುವಾರ ಬೆಳಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಸ್ಪರ್ಧಾಳುಗಳನ್ನು ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣದಿಂದ ಕರೆತರಲು ವ್ಯವಸ್ಥೆ ಮಾಡಲಾಗುತ್ತಿದೆ. ಬಳಿಕ ನೋಂದಣಿ ಮಾಡಿಸಿ, ವಸತಿ ವ್ಯವಸ್ಥೆ ಮಾಡಲಾಗುವುದು. ನಂತರ ಮಧ್ಯಾಹ್ನ 3 ಗಂಟೆಗೆ ನಡೆಯುವ ಮೆರವಣಿಗೆಗೆ ಸೇರಿಕೊಳ್ಳಲಿದ್ದಾರೆ.
– ಮಾಮಚ್ಚನ್,
ತಾಲೂಕು ಯುವಜನ ಕ್ರೀಡಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.