ಪುತ್ತಿಗೆ ನೆಲ್ಲಿಗುಡ್ಡೆಯಲ್ಲಿ ಸಂಕಷ್ಟದಿಂದ ನರಳುತ್ತಿರುವ ಕುಟುಂಬ
Team Udayavani, Apr 23, 2018, 10:45 AM IST
ಮೂಡಬಿದಿರೆ: ಆ ಇಬ್ಬರು ಗಂಡುಮಕ್ಕಳದು ದುಡಿಯುವ ವಯಸ್ಸು. ಆದರೆ ಖಾಯಿಲೆಯಿಂದ ಮಲಗಿದ್ದಾರೆ. ತಾಯಿಗೆ ದುಡಿಮೆಯ ಮಾರ್ಗಗಳಿಲ್ಲ. ಮೂವರ ಹೊಟ್ಟೆ ಹೊರೆಯುವ ಪ್ರಶ್ನೆ, ಖಾಯಿಲೆ ಪೀಡಿತರಿಗೆ ಚಿಕಿತ್ಸೆ ಕೊಡಿಸುವ ಚಿಂತೆ ಎಲ್ಲವೂ ಆ ತಾಯಿಯನ್ನು ಕಾಡುತ್ತಿದೆ. ದುರದೃಷ್ಟಶಾಲಿ ಈ ಕುಟುಂಬ ಸಹೃದಯಿಗಳ ಸಹಾಯಹಸ್ತಗಳ ನಿರೀಕ್ಷೆಯಲ್ಲಿದೆ.
ಮೂಡಬಿದಿರೆ ಸಮೀಪದ ಪುತ್ತಿಗೆ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಅಪ್ಪಿ ಪೂಜಾರ್ತಿ ಅವರ ಮನೆಯ ವ್ಯಥೆಯ ಕಥೆ ಇದು. ಅಪ್ಪಿ ಪೂಜಾರ್ತಿ ಅವರ ಇಬ್ಬರು ಪುತ್ರಿಯರಿಗೆ ಮದುವೆಯಾಗಿದೆ. ಇಬ್ಬರು ಪುತ್ರರಿದ್ದಾರೆ. ಒಬ್ಟಾತನಿಗೆ ಹದಿನೆಂಟರ ಹರೆಯಿಂದಲೇ ನರ ದೌರ್ಬಲ್ಯ ಕಾಡತೊಡಗಿ ಹಾಸುಗೆಯೇ ಗತಿಯಾಗಿದೆ. ಮತ್ತೂಬ್ಬ ಪುತ್ರ ಭಾಸ್ಕರ ಪೂಜಾರಿ ಮೊದ ಮೊದಲು ಸರಿಯಾಗಿ ದುಡಿಯುತ್ತಿದ್ದ. ಆದರೆ ಆತನಿಗೂ ನರದೌರ್ಬಲ್ಯ ಕಾಡತೊಡಗಿತು. ಆದರೂ ಲೆಕ್ಕಿಸದೆ ಅಲ್ಲಿ ಇಲ್ಲಿ ಓಡಾಡುತ್ತ ಕುಟುಂಬಕ್ಕೆ ಆಧಾರವಾಗಿದ್ದ. ಇನ್ನೇನು ನರದೌರ್ಬಲ್ಯಕ್ಕೆ ಮದ್ದು ಮಾಡೋಣವೆಂದರೆ ಕ್ಯಾನ್ಸರ್ ಆತನ ಜೀವವನ್ನು ಹಿಡಿದುಕೊಂಡಿರುವುದು ಗೋಚರಿಸಿದೆ; ಕುಟುಂಬ ಕಂಗಾಲಾಗಿದೆ. ಆತನ ಔಷಧೋಪಚಾರಕ್ಕಾಗಿ ರೂ.10 ಲಕ್ಷ ಬೇಕಾಗಿದೆ. ದುಡಿಮೆಯೇ ಇಲ್ಲದ ಸ್ಥಿತಿಯಲ್ಲಿ ಇಷ್ಟೊಂದು ದೊಡ್ಡ ಮೊತ್ತವನ್ನು ಸಂಪಾದಿಸುವುದಾದರೂ ಹೇಗೆ? ಎಂಬುದು ಈ ಕುಟುಂಬವನ್ನು ಕಾಡಿದೆ. ಸಹೃದಯಿಗಳು ಭಾಸ್ಕರ ಅವರ ಸಹೋದರಿ ಭಾರತಿ ಅವರ ಬ್ಯಾಂಕ್ ಖಾತೆಗೆ ಯಥಾನುಶಕ್ತಿ ಧನ ಸಹಾಯ ಮಾಡಬಹುದಾಗಿದೆ.
ಬ್ಯಾಂಕ್ ಖಾತೆ ವಿವರ
ಭಾರತಿ (ಧರ್ಮಣ್ಣ ಪೂಜಾರಿ ಅವರ ಪುತ್ರಿ, ಕೇಶವ ಅವರ ಪತ್ನಿ), ಸಿಂಡಿಕೇಟ್ ಬ್ಯಾಂಕ್ , ಪುತ್ತಿಗೆ ಶಾಖೆ, ಅಂಚೆ ಮಿತ್ತಬೈಲು-574226 (ವಯಾ ಮೂಡಬಿದಿರೆ) ಎಕೌಂಟ್ ನಂ. 02722200006288, ಐಎಫ್‌ಎಸ್‌ಸಿ: ಎಸ್‌ವೈಎನ್
ಬಿ0000272.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.