‘ನಮ್ಮೂರು ನೆಕ್ಕಿಲಾಡಿ’ ಸಂಘಟನೆಯ ಪ್ರಥಮ ಸಭೆ
Team Udayavani, Nov 11, 2017, 3:39 PM IST
ಉಪ್ಪಿನಂಗಡಿ: ಗ್ರಾಮಸ್ಥರನ್ನು ಸೌಹಾರ್ದಯುತವಾಗಿ ಒಗ್ಗೂಡಿಸಿ ಗ್ರಾಮದ ಸಮಗ್ರ ಅಭಿವೃದ್ಧಿ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ 34ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಮಾನ ಮನಸ್ಕರ ‘ನಮ್ಮೂರು ನೆಕ್ಕಿಲಾಡಿ’ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ಇದರ ಪ್ರಥಮ ಸಭೆ ಉಪ್ಪಿನಂಗಡಿಯ ರೋಟರಿ ಭವನದಲ್ಲಿ
ನಡೆಯಿತು.
ಸಂಘಟನೆಯ ಅಧ್ಯಕ್ಷ ಜತೀಂದ್ರ ಶೆಟ್ಟಿ ನೆಕ್ಕಿಲಾಡಿ ಮಾತನಾಡಿ, ನಮ್ಮ ಗ್ರಾಮದ ಅಭಿವೃದ್ಧಿ, ಸೌಹಾರ್ದತೆಯ ದೃಷ್ಟಿಯಿಂದ ಜಾತಿ, ಧರ್ಮ, ರಾಜಕೀಯ ರಹಿತವಾಗಿ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಶ್ರಮದಾನದ ಮೂಲಕ ಗ್ರಾಮದ ಸ್ವಚ್ಛತೆಗೆ ಶ್ರಮಿಸುವುದು, ವಿವಿಧ ಕಾರ್ಯಕ್ರಮಗಳ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವೆ ಕೆಲಸವಾಗಲಿದೆ ಎಂದರು.
ಅಭಿವೃದ್ಧಿಯೊಂದೆ ಧ್ಯೇಯ
ಜಾತಿ, ಧರ್ಮ, ರಾಜಕೀಯಕ್ಕೆ ಅವಕಾಶವಿಲ್ಲ. ಇದು ಒಟ್ಟು ‘ನಾವು- ನಮ್ಮ ಗ್ರಾಮ’ ಎಂಬ ತತ್ವದಡಿ ಗ್ರಾಮದ ಅಭ್ಯುದಯವೊಂದೇ ಧ್ಯೇಯ ಎಂದು ಹೇಳಿದರು.
ಮೂಲ ಸೌಕರ್ಯಕ್ಕೆ ಹೋರಾಟ
ರಸ್ತೆ, ದಾರಿ ದೀಪ, ಕುಡಿಯುವ ನೀರು ಸೇರಿದಂತೆ ಸರಕಾರದಿಂದ ಗ್ರಾಮಕ್ಕೆ ಸಲ್ಲತಕ್ಕ ಮೂಲ ಸೌಕರ್ಯಗಳನ್ನು ಕಲ್ಪಿಸಲು ಹೋರಾಟಗಳನ್ನು ನಡೆಸುವುದು. ಗ್ರಾಮ ಅಭಿವೃದ್ಧಿಯ ಕೆಲಸಗಳಲ್ಲಿ ಆಡಳಿತ ವ್ಯವಸ್ಥೆಯೊಂದಿಗೆ ಕೈಜೋಡಿಸಿ, ಗ್ರಾಮದಲ್ಲಿ ರಕ್ತದಾನ, ಆರೋಗ್ಯ ಶಿಬಿರಗಳು ಸೇವಾ ಮನೋಭಾವನೆಯ ವೈದ್ಯರನ್ನು ಹಿಡಿದು ಗ್ರಾಮದ ಬಡ ಕುಟುಂಬಗಳಿಗೆ ಉಚಿತ ಆರೋಗ್ಯ ಸೇವೆಯ ಕಾರ್ಡ್ ಒದಗಿಸಲಾಗುವುದು. ಶ್ರಮದಾನ ನಡೆಸುವುದು ಇತ್ಯಾದಿ ಯೋಜನೆಗಳನ್ನಿಟ್ಟುಕೊಳ್ಳಲಾಗಿದೆ ಎಂದರು. ಸಭೆಯಲ್ಲಿ ಸಂಘಟನೆಯ ಉಪಾಧ್ಯಕ್ಷರಾದ ರೂಪೇಶ್ ರೈ ಅಲಿಮಾರ್, ಅನಿಮಿನೇಜಸ್, ಜಾನ್ ಕೆನೆಟ್, ಜತೆ ಕಾರ್ಯದರ್ಶಿ ಸತ್ಯವತಿ, ಖಜಾಂಚಿ ಶಿವಕುಮಾರ್ ಬಾರಿತ್ತಾಯ, ಸಂಘಟನ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ, ಝಕಾರಿಯಾ ಕೊಡಿಪ್ಪಾಡಿ, ಕೆ. ರಾಜೇಶ್ ನಾಯಕ್ ನೆಕ್ಕಿಲಾಡಿ, ಅಮಿತಾ ಹರೀಶ್, ಕೆ. ಗಂಗಯ್ಯ ಗೌಡ, ಸುಮಾ, ಪ್ರವೀಣ್ ಕುಮಾರ್, ಅಬ್ದುಲ್ ಅಝೀಝ್ ಪಿ.ಟಿ.,
ಜಯಶೀಲ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.