ಜಿಲ್ಲೆಯ ಪ್ರಥಮ ತುಳು ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆ ಸಿದ್ಧ
Team Udayavani, Dec 10, 2017, 9:40 AM IST
ಬಂಟ್ವಾಳ: ಜಿಲ್ಲೆಯ ಪ್ರಥಮ ತುಳು ಸಾಹಿತ್ಯ ಸಮ್ಮೇಳನಕ್ಕೆ ಬಿ.ಸಿ.ರೋಡ್ ಹೃದಯ ಭಾಗದ ಸ್ಪರ್ಶಾ ಕಲಾ ಮಂದಿರ ದಲ್ಲಿ ವೇದಿಕೆ ಸಿದ್ಧಗೊಂಡಿದೆ. ತುಳು ಸಮ್ಮೇಳನದ ಪ್ರದೇಶಕ್ಕೆ ‘ತುಳು ಗ್ರಾಮ’, ಸಭಾಂಗಣಕ್ಕೆ ‘ಸಿರಿದೊಂಪ’, ವೇದಿಕೆಗೆ ‘ಧರ್ಮ ಚಾವಡಿ’, ಅಡುಗೆ ಮನೆಗೆ ‘ಅಟಿಲ್ದ್ ಕೋಣೆ’, ಊಟದ ಚಪ್ಪರಕ್ಕೆ ಬಂಜಾರ ವಣಸ್ ಎಂಬ ನಾಮಕರಣ ಮಾಡಲಾಗಿದೆ.
ಡಿ. 10ರಂದು ಹಿರಿಯ ಸಾಹಿತಿ ಮಲಾರು ಜಯರಾಮ ರೈ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಸಮ್ಮೇಳನ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ನೇತೃತ್ವದಲ್ಲಿ ವ್ಯವಸ್ಥೆ ಸಜ್ಜುಗೊಂಡಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಬಂಟ್ವಾಳ ತಾ| ತುಳು ಸಾಹಿತ್ಯ ಸಮ್ಮೇಳನ ಸಮಿತಿ ಆಶ್ರಯದಲ್ಲಿ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ನಿರಂತರ ಕಾರ್ಯಕ್ರಮ ನಡೆಯಲಿದೆ.
ದಿಬ್ಬಣ
ಬಿ.ಸಿ. ರೋಡ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ತುಳುನಾಡಿನ ಸಾಂಸ್ಕೃತಿಕ ಸೊಬಗನ್ನು ಪ್ರತಿಬಿಂಬಿಸುವ ಕಲಾ ಪ್ರದರ್ಶನಗಳೊಂದಿಗೆ ತುಳುವೆರೆ ದಿಬ್ಬಣ ಸ್ಪರ್ಶಾ ಕಲಾಮಂದಿರಕ್ಕೆ ಸಾಗಿಬರಲಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಮೆರವಣಿಗೆ ಉದ್ಘಾಟಿಸಲಿದ್ದಾರೆ. 9.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಮ್ಮೇಳನದ ಉದ್ಘಾಟನೆ ನಡೆಸಲಿದ್ದಾರೆ.
ವಸ್ತು ಪ್ರದರ್ಶನ
ವಸ್ತು ಪ್ರದರ್ಶನವನ್ನು ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಉದ್ಘಾಟಿಸಲಿದ್ದಾರೆ. ಆಹಾರ ಸಚಿವ
ಯು.ಟಿ. ಖಾದರ್, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪ್ರಮುಖರಾದ ಬಿ.ಎಚ್. ಖಾದರ್, ಚಂದ್ರಹಾಸ ಕರ್ಕೇರ, ಪಿ. ರಾಮಕೃಷ್ಣ ಆಳ್ವ, ಸದಾಶಿವ ಬಂಗೇರ ಭಾಗವಹಿಸಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ತುಳುನಾಡ ಐಸಿರ , 11.30ಕ್ಕೆ ಚಾವಡಿ ಪಟ್ಟಾಂಗ , ಮಧ್ಯಾಹ್ನ 12.30ಕ್ಕೆ ಪಾರಿ-ಪಾಡªನ, ಮಧ್ಯಾಹ್ನ 1.30ಕ್ಕೆ ಹಳೆಯ ತುಳು ಹಾಡುಗಳ ಗಾಯನ, ಮಧ್ಯಾಹ್ನ 2 ಗಂಟೆಗೆ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಚಾವಡಿ ಪಟ್ಟಾಂಗ ಸಂಜೆ 4.30ಕ್ಕೆ ಸಮ್ಮಾನ ಸಮಾರಂಭ ನಡೆಯಲಿದೆ.
ತುಳು ಸಂಸ್ಕೃತಿಯ ದ್ವಾರ ನಿರ್ಮಾಣ
ಬಿ.ಸಿ.ರೋಡ್‌ನಲ್ಲಿ ತುಳುವರ ಸಾಂಸ್ಕೃತಿಕ ಪರಂಪರೆ ಪ್ರತಿಬಿಂಬಿಸುವ ದ್ವಾರ ನಿರ್ಮಾಣವಾಗಿದೆ. ತುಳುನಾಡಿನ ಕಸುಬನ್ನು ಬಿಂಬಿಸುವ ಮೀನುಗಾರಿಕೆ ದೋಣಿ, ಬೀಸು ಬಲೆ, ಧ್ವಜಾರೋಹಣಕ್ಕೆ ದೇವಸ್ಥಾನದಲ್ಲಿ ಸ್ಥಾಪಿಸುವ ಕೋಡಿಮರದ ಮಾದರಿಯ ಧ್ವಜಸ್ತಂಭ ನಿರ್ಮಾಣವಾಗಿದೆ. 50ಕ್ಕೂ ಅಧಿಕ ತುಳು ಪುಸ್ತಕಗಳ ಮಾರಾಟ ಮಳಿಗೆ, ತುಳುವರ ಪಾನೀಯಗಳ ಸ್ಟಾಲ್ ನಿರ್ಮಾಣವಾಗಿದೆ. ಕ್ರೀಡೆ ಕಂಬಳದ ಸ್ತಬ್ಧ ಚಿತ್ರವು ರಚನೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಡಬಲ್ ಎಲಿಮಿನೇಷನ್: ಮೊದಲು ಆಚೆ ಹೋದ ಸ್ಪರ್ಧಿ ಇವರೇ ನೋಡಿ
Rohingya; ತ್ರಿಪುರಾದಲ್ಲಿ 6 ರೋಹಿಂಗ್ಯಾ ಮಹಿಳೆಯರ ಬಂಧನ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.