ಮತ್ತೆ ಬಂದಿದೆ ಆಟಿ; ಆಟಿಕಳಂಜ ಬಂದೇ ಬರುತ್ತಾನೆ!

Team Udayavani, Jul 18, 2017, 3:15 AM IST

177AKA1.gif

ಆಲಂಕಾರು: ಧೋ ಎಂದು ಸುರಿಯುವ ಮಳೆಯ ಮಧ್ಯೆ ಮೈ ಸುಡುವ ಸುಡುಬಿಸಿಲು. ಇದು ಜುಲೈ ತಿಂಗಳ ಅಂತಿಮ ತುಳುವಿನ ಆಟಿ ತಿಂಗಳ ಆರಂಭಿಕ ದಿನಗಳು. ಆಟಿ ತಿಂಗಳು ಎಂದರೆ ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯಗಳಿಲ್ಲದ ತಿಂಗಳು. ಬೇಸಾಯ ಕೃಷಿ ಕಾಯಕಗಳೆಲ್ಲ ಮುಗಿದು ಜನರು ವಿಶ್ರಾಂತಿ ಪಡೆಯುವ ಸಮಯದಲ್ಲಿ ಹೊರಗೆ ಗಗ್ಗರದ ಶಬ್ದ ತೆಂಬರೆಯ ನಿನಾದ ಪಾಡ್ಡನ ರಾಗದೊಂದಿಗೆ ಮನೆ ಬಾಗಿಲಿಗೆ ಆಟಿ ಕಳಂಜನ ಆಗಮನ.

ತುಳು ನಾಡಿನ ಜನತೆಯನ್ನು ಅನಾದಿ ಕಾಲದಲ್ಲಿ ವಿಚಿತ್ರ ರೋಗವೊಂದು ಬಾಧಿಸಿ ಊರಿಗೇ ಊರೇ ನರಳುತ್ತಿದ್ದ ಸಮಯದಲ್ಲಿ ನಾಗಬ್ರಹ್ಮ ದೇವರು ನಾಡಿನ ರೋಗ(ಮಾರಿ)ಕಳೆಯಲು ಆಟಿಕಳಂಜನನ್ನು ಭೂಮಿಗೆ ಕಳುಹಿಸಿದ.  ಹಾಗೆ ಬಂದ ಆಟಿಕಳಂಜ ಎಲ್ಲಾ ಮನೆ ಮನೆಗೆ ತೆರಳಿ ಮಾರಿಯನ್ನು (ರೋಗ) ನಿವಾರಿಸಿ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಿ ಹರಸಿದ. ಇದಕ್ಕೆ ಪ್ರತಿಫಲವಾಗಿ ಜನರು ನೀಡುವ ಭತ್ತ, ಅರಸಿನ, ಉಪ್ಪು, ತೆಂಗಿನಕಾಯಿ, ಹುಳಿ, ಮೆಣಸುಗಳನ್ನು ಪಡೆದು ಊರನ್ನು ಉದ್ಧರಿಸಿದ.  ಹೀಗೆ ಊರಿನ ಉದ್ಧಾರಕ್ಕೆಂದು ನಾಗಬ್ರಹ್ಮನ ಸೃಷ್ಟಿಯೇ ಈ ಆಟಿ ಕಳಂಜ. ಇದರ ಪ್ರತೀಕ ಎಂಬಂತೆ ಆಟಿ ಕಳಂಜ ಇಂದಿಗೂ ಆಟಿ ತಿಂಗಳಲ್ಲಿ ಪ್ರತೀ ಮನೆಗೆ ತೆರಳಿ ಮನೆಯವರು ನಿಡುವ ದವಸ ಧಾನ್ಯಗಳನ್ನು ಪಡೆಯುವ ಪದ್ಧತಿ ಇದೆ.

ಆಟಿ ಕಳಂಜ ಸೇವೆಯನ್ನು ನಲಿಕೆ ಹಾಗೂ ಪಂಬತ್ತ ಜನಾಂಗ ಮಾತ್ರ ಮಾಡುತ್ತಾರೆ. ಹಿಂದಿನ ಕಾಲದ ಆಟಿ ತಿಂಗಳಲ್ಲಿ ಭಾರೀ ಮಳೆ ಬರುತ್ತಿತ್ತು¤. ಇದೇ ವೇಳೆ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗುತ್ತಿತ್ತು. ಇಂದು ಆಧುನಿಕ ವೈಧ್ಯ ಲೋಕಕ್ಕೆ ಯಾವ ರೋಗವೂ ಸವಾಲಲ್ಲ. ಆದರೆ ಹಿಂದಿನ ಕಾಲದಲ್ಲಿ ಸಮರ್ಪಕ ಔಷಧ ಹಾಗು ವೈದ್ಯಕೀಯ ಸೌಲಭ್ಯ ಇರಲಿಲ್ಲ. ಎಲ್ಲಾ ರೋಗ ರುಜಿನಗಳನ್ನು ದೇವರೆ ಕಡಿಮೆ ಮಾಡಬೇಕೆಂದು ಅವನ ಮೇಲೆ ಭಾರ ಹಾಕಿ ಕುಳಿತುಕೊಳ್ಳುತ್ತಿದ್ದರು. ಇಂತಹ ಸಂದರ್ಭದಲ್ಲಿ ಆಟಿ ಕಳಂಜ ಮನೆಗೆ ಬಂದು ಹರಸಿದರೆ ತುಸು ಮಾನಸಿಕ ನೆಮ್ಮದಿ, ಧೈರ್ಯ ಬರುತ್ತಿತ್ತು ಎಂಬುದು ನಂಬಿಕೆ. 

ಆಟಿಯ ಹದಿನಾರು ದಿನ
ಆಟಿ ಕಳಂಜ ತಿಂಗಳ ಮೂವತ್ತು ದಿನವು ಊರು ಸುತ್ತುವುದಿಲ್ಲ. ಆರಂಭದಿಂದ 16 ದಿನ ಮಾತ್ರ ತಿರುಗಾಟ. ಕಾಲಿಗೆ ಹಾಳೆಯಿಂದ ಮಾಡಿದ ಕವಚದ ರಕ್ಷಣೆಯಲ್ಲಿ ಗಗ್ಗರವನ್ನು ಕಟ್ಟಿ, ತೆಂಗಿನ ಗರಿಯಿಂದ ನಿರ್ಮಿಸಿದ ಸಿರಿಯನ್ನು ಸೊಂಟಕ್ಕೆ ಬಿಗಿದು ಮುಖಕ್ಕೆ ವಿಶೇಷ ಬಣ್ಣ ಬಳಿದುಕೊಂಡು ಪಣೋಲಿ ಮರದ ಗರಿಯಿಂದ ನಿರ್ಮಿಸಿದ ಕೊಡೆಯನ್ನು ಹಿಡಿದುಕೊಂಡು “ಕಳೆಂಜ ಕಳೆಂಜೆನಾ ಆಟಿದ ಕಳೆಂಜೆನಾ ಊರುದ ಮಾರಿ ಕಳೆಯರೆಂದ್‌ ಆಟಿದ ಕಳೆಂಜೆ ಬತ್ತೇನಾ” ಎಂಬ ಹಾಡನ್ನು ಹೇಳಿಕೊಂಡು ಸಹಾಯಕ ಬಡಿಯುವ ತೆಂಬರೆಯ ತಾಳಕ್ಕೆ ಹೆಜ್ಜೆ ಹಾಕಿಕೊಂಡು ಕಳಂಜ ಮನೆ ಬಾಗಿಲಿಗೆ ಬರುತ್ತಾನೆ. ಬಳಿಕ ಗದ್ದೆ, ತೋಟಗಳಿಗೆ ಕೃಷಿಗೂ ತಟ್ಟಿದ ಮಾರಿಯನ್ನು ಕಳೆಯುತ್ತಾನೆ. ಹೀಗೆ ತಿರುಗಾಟ ನಡೆಸಿ ಕೊನೆಯ ದಿನ ತನ್ನ ಎಲ್ಲಾ ಪರಿಕರಗಳನ್ನು ಊರಿನ ಗಡಿಯಲ್ಲಿರುವ ಕಾಸರಕನ ಮರಕ್ಕೆ ಕಟ್ಟಿ ಊರಿಗೆ ಬಂದ ಮಾರಿ ಏಳು ಕಡಲಾಚೆಗೆ ಬೀಳಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಾನೆ. ಅಲ್ಲಿಗೆ ತಿರುಗಾಟ ಅಂತ್ಯ.

ಬೇರೆ ಬೇರೆ ಅವತಾರದ ದರ್ಶನ
ಆಟಿ ಕಳಂಜಕ್ಕಿಂತ ಮುನ್ನ  ಕಿನ್ನಿಕಳಂಜ ತನ್ನ ಸೇವೆಯನ್ನು ಪೂರೈಸಿದ ಬಳಿಕ ಆಟಿ ಕಳಂಜ ಊರ ಸೇವೆಗೆ ತೆರಳುತ್ತಾನೆ. ಆಟಿಯಲ್ಲಿ ಆಟಿಕಳಂಜ ಬಂದರೆ, ಸೋಣದಲ್ಲಿ (ಆಗಸ್ಟ್‌) ಸೋಣದ ಮದಿಮಾಲ್‌, ಜಾತ್ರೆಯಲ್ಲಿ(ನವಂಬರ್‌) ಮಾದಿರ, ಮತ್ತು ಸುಗ್ಗಿ(ಮಾರ್ಚ್‌) ತಿಂಗಳಲ್ಲಿ ಕೊರಗತನಿಯ-ಹೀಗೆ ಬೇರೆ ಬೇರೆ ಅವತಾರಗಳಲ್ಲಿ ಸೃಷ್ಟಿಯಾದ ಆಟಿಕಳಂಜ ನಾಡಿಗೆ ಬಂದು ಜನರ ಕಷ್ಟ ದುರಿತಗಳನ್ನು ನಿವಾರಿಸುತ್ತಾನೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿದೆ. ಆದರೆ ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಇವೆಲ್ಲವೂ ಮರೆಯಾಗುತ್ತಿದೆ. ಆದರೂ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ಕಾಣ ಸಿಗುತ್ತಾನೆ.

ತುಳುನಾಡಿನ ಜಾನಪದದ ಭಾಗವಾದ ಆಟಿಕಳಂಜ ಆಧುನಿಕ ಸಂದರ್ಭದಲ್ಲಿ ನಿಧಾನವಾಗಿ ತೆರೆಮರೆಗೆ ಸರಿಯುತ್ತಿರುವಂಥದ್ದು. ನಮ್ಮೊಳಗಿನ ನಂಬಿಕೆಯನ್ನು ಗಟ್ಟಿಗೊಳಿಸಿ ತುಳುನಾಡಿನ ಸಂಸ್ಕೃತಿಯನ್ನು ಮೆರೆಸುತ್ತಿದ್ದ ಆಟಿಕಳಂಜ ಈಗ ಮತ್ತೆ ಬರುತ್ತಿದ್ದಾನೆ.

– ಸದಾನಂದ ಆಲಂಕಾರು 

ಟಾಪ್ ನ್ಯೂಸ್

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.