ಉದನೆ ಹಾ.ಉ.ಸ. ಸಂಘ: ತರಬೇತಿ
Team Udayavani, Dec 24, 2017, 4:47 PM IST
ನೆಲ್ಯಾಡಿ: ದ.ಕ.ಸ.ಹಾ.ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಮತ್ತು ಕೆಎಂಎಫ್ ತರಬೇತಿ ಕೇಂದ್ರ ಮೈಸೂರು ಇವುಗಳ ಜಂಟಿ ಆಶ್ರಯದಲ್ಲಿ ಉದನೆ ಹಾ.ಉ.ಸ. ಸಂಘದ ಸಭಾಭವನದಲ್ಲಿ ನೆಲ್ಯಾಡಿ ಉದನೆ ವ್ಯಾಪ್ತಿಯ ಸುಮಾರು 15 ಹಾ.ಉ. ಸಂಘದ ಆಡಳಿತ ಮಂಡಳಿ ಹಾಗೂ ಸದಸ್ಯರಿಗೆ ತರಬೇತಿ ಕಾರ್ಯಕ್ರಮ ನಡೆಯಿತು.
ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಮಾತನಾಡಿ, ಜಿಲ್ಲಾ ಹಾ.ಉ.ಸ. ಒಕ್ಕೂಟದ ವತಿಯಿಂದ ಗ್ರಾಮೀಣ ಭಾಗದಲ್ಲಿರುವ ಹಾ.ಉ. ಸಂಘದ ಆಡಳಿತ ಮಂಡಳಿಯವರಿಗೆ ತರಬೇತಿ ನೀಡುವ ಮೂಲಕ ಸ್ಥಳೀಯ ಸದಸ್ಯರಿಗೆ ಹೆಚ್ಚು ಅನುಕೂಲವಾಗಿದೆ.
ಸರಕಾರ ಕೂಡ ಪ್ರತೀ ಲೀಟರಿಗೆ 5 ರೂ. ಸಹಾಯಧನ ನೀಡುವುದಲ್ಲದೆ ಎಲ್ಲರೂ ಹೈನುಗಾರಿಕೆಯಲ್ಲಿ ತೊಡಗಿ ಅಭಿವೃದ್ಧಿ ಹೊಂದಬೇಕೆಂಬ ಅಭಿಲಾಷೆಯಿಂದ 50000 ರೂ. ವರೆಗೆ ಸ್ಥಳೀಯ ಹಣಕಾಸು ಸಂಸ್ಥೆಗಳಿಂದ ಶೇ.3 ಬಡ್ಡಿದರದಲ್ಲಿ ಸಾಲಸೌಲಭ್ಯ ಯೋಜನೆಗಳನ್ನು ಕೂಡ ನೀಡುತ್ತಿದೆ. ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಅಭಿವೃದ್ಧಿ ಹೊಂದುವಂತಾಗಲಿ ಎಂದು ನುಡಿದರು.
ಕೆಎಂಎಫ್ ನ ಮೈಸೂರು ವಿಭಾಗದ ನಿರ್ದೇಶಕ ತರಬೇತಿದಾರ ಡಾ| ಶಿವಶಂಕರ್ ಹೈನುಗಾರಿಕೆಯ ಬಗ್ಗೆ ತರಬೇತಿ ನೀಡಿದರು. ಉಪನ್ಯಾಸಕ ಮೈಸೂರಿನ ಮಾದೇಸ್ವಾಮಿ ಹೈನುಗಾರಿಕೆಯಲ್ಲಿ ತಮ್ಮ ವಿಕಸನದ ಬಗ್ಗೆ ಮಾಹಿತಿ ನೀಡಿದರು. ನೆಲ್ಯಾಡಿ ಹಾ.ಉ.ಸ. ಸಂಘದ ಅಧ್ಯಕ್ಷ ಮಹಾಬಲ ಶೆಟ್ಟಿ, ಇಚ್ಲಂಪಾಡಿ ಸ.ಸಂಘದ ಮಾಜಿ ಅಧ್ಯಕ್ಷ ಜಾನ್ ಅಬ್ರಹಾಂ, ಎಂಜಿರ ಸ.ಸಂಘದ ಅಧ್ಯಕ್ಷ ಮ್ಯಾಥ್ಯು, ರಾಮನಗರ ಸಂಘದ ಅಧ್ಯಕ್ಷೆ ಆಶಾ ಜೋಗಿತ್ತಾಯ ಮೊದಲಾದವರು ಉಪಸ್ಥಿತರಿದ್ದರು. ದ.ಕ ಜಿಲ್ಲಾ ಹಾ.ಉ. ಒಕ್ಕೂಟದ ವಿಸ್ತರಣಾಧಿಕಾರಿ ಮಂಜುನಾಥರವರು ಸ್ವಾಗತಿಸಿ, ಕಾರ್ಯದರ್ಶಿ ಬಾಲಕೃಷ್ಣ ವಂದಿಸಿದರು. ಉದನೆ ಗಣಕ ಯಂತ್ರ ನಿರ್ವಾಹಕಿ ರೋಹಿಣಿ, ಸಂಘದ ಹಾ. ಪರೀಕ್ಷಕ ಯಶೋಧರ, ಪಿ.ಎಂ.ಸಿ. ಕಾರ್ಯಕರ್ತ ಸುನಿಲ್ ಸಹಕರಿಸಿದರು.
ಚೆಕ್ ವಿತರಣೆ
ಸಂಘದ ವತಿಯಿಂದ ನೀಡಲಾಗುವ ರೈತ ಕಲ್ಯಾಣ ಟ್ರಸ್ಟ್ ನಿಧಿಯಿಂದ ಸತ್ತ ದನದ ಮಾಲಕರಾದ ರಾಮನಗರ ಸಂಘದ ಕಮಲಾಕ್ಷಿ, ಕೌಕ್ರಾಡಿ ಸಂಘದ ದುರ್ಗಾವತಿ, ಶಿರಾಡಿ ಸಂಘದ ಮೋಹನ ಅವರಿಗೆ ಪರಿಹಾರದ ಚೆಕ್ಕನ್ನು ನೀಡಲಾಯಿತು.
ಉತ್ತಮ ಕಾರ್ಯ
ಅಧ್ಯಕ್ಷತೆಯನ್ನು ವಹಿಸಿದ್ದ ಉದನೆ ಹಾ.ಉ.ಸ.ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಮಾತನಾಡಿ, ಸುಮಾರು 15 ಸಂಘಗಳ ಆಡಳಿತ ಮಂಡಳಿ ಯವರನ್ನು ಸೇರಿಸಿ ನಮ್ಮ ಈ ಉದನೆ ಸಹಕಾರ ಸಂಘದಲ್ಲಿ ಒಂದು ದಿನದ ತರಬೇತಿ ನೀಡುವುದರೊಂದಿಗೆ ಹೈನುಗಾರಿಕೆಯ ಮಹತ್ವ ಹಾಗೂ ಲಾಭದಾಯಕ ಉದ್ಯಮವಾಗಿಸುವಲ್ಲಿ ಸರ್ವ ರೀತಿಯಲ್ಲಿ ಮಾಹಿತಿಯನ್ನು ಒದಗಿಸಿ ಕೆಎಂಎಫ್ನವರು ಉತ್ತಮ ಕಾರ್ಯ ಮಾಡಿದ್ದಾರೆ. ಉತ್ತಮ ಮಾಹಿತಿಗಳನ್ನು ಅಳವಡಿಸಿಕೊಂಡು ಹೈನು ಗಾರಿಕೆಯನ್ನು ಮಾಡುವುದರ
ಮೂಲಕ ಅಭಿವೃದ್ಧಿಯಾಗೋಣ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.