ಗುಡ್ಡಗಾಡು, ತೋಟದ ನಡುವೆ ರಸ್ತೆ ನಿರ್ಮಾಣ
Team Udayavani, Jan 30, 2018, 3:27 PM IST
ಕಿನ್ಯ: ಕಿನ್ಯ ಗ್ರಾಮ ಪಂಚಾಯತ್ ಕಚೇರಿಯಿರುವ ಕುತುಬಿ ನಗರದಿಂದ ಕೋಟೆಕಾರು ಗ್ರಾಮದ ಉಕ್ಕುಡಕ್ಕೆ ಕೊನೆಗೂ ಸಂಪರ್ಕ ಭಾಗ್ಯ ಸಿಕ್ಕಿದೆ. ಗುಡ್ಡಗಾಡು, ತೋಟದ ನಡುವೆ ಕಾಲುದಾರಿಯಲ್ಲಿ ಸುಮಾರು 2 ಕಿ.ಮೀ. ಕ್ರಮಿಸುತ್ತಿದ್ದ ಜನರಿಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ರಸ್ತೆ ಭಾಗ್ಯ ಒದಗಿ ಬಂದಿದ್ದು, ಶೀಘ್ರವೇ ಸಂಚಾರಕ್ಕೆ ಮುಕ್ತವಾಗಲಿದೆ.
ಉಕ್ಕುಡ ವ್ಯಾಪ್ತಿಯಿಂದ ಕಿನ್ಯ ಪಂ. ಕಚೇರಿ ಸೇರಿದಂತೆ, ಇಲ್ಲಿನ ಧಾರ್ಮಿಕ ಕ್ಷೇತ್ರಗಳಿಗೆ ಬರುವ ಜನರು ಸುತ್ತು ಬಳಸಿಯೇ ಸಂಚಾರ ಮಾಡುತ್ತಿದ್ದರು. ಕಾಲುದಾರಿಯಲ್ಲಿ ಸಂಚರಿಸುವವರು ಸುಮಾರು ಒಂದರಿಂದ ಎರಡು ಕಿ.ಮೀ. ನಡೆದುಕೊಂಡು ಹೋಗುವ ಸ್ಥಿತಿಯಿತ್ತು. ಎರಡೂ ಕಡೆಯಲ್ಲೂ ಒಂದು ಕಿ.ಮೀ. ಕಚ್ಛಾ ರಸ್ತೆಯಿದ್ದರೂ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಗುಡ್ಡ ಗಾಡು ಹತ್ತಿ ಇಳಿದು, ಕಂಗಿನ ತೋಟವನ್ನು ದಾಟಿ ಕಾಲು ದಾರಿಯಿಂದ ಜನರು ನಡೆದು ಕೊಂಡು ಹೋಗುತ್ತಿದ್ದರು.
ಭರದಿಂದ ನಿರ್ಮಾಣ ಕಾರ್ಯ
ಈ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಸುಮಾರು 20 ವರ್ಷಗಳ ಹಿಂದೆಯೇ ಬೇಡಿಕೆಯಿತ್ತು. ಆದರೆ ಕಿನ್ಯ ಪಾದೆ ಬಳಿ ಕಡಿದಾದ ಗುಡ್ಡ ಕುತುಬಿನಗರ ಬಳಿ ಸಮೃದ್ಧವಾದ ತೋಟ ಸುಮಾರು 15ಕ್ಕೂ ಹೆಚ್ಚು ಜಾಗದ ಮಾಲಕರು ಜಾಗ ಬಿಟ್ಟುಕೊಡಲು ಸಿದ್ಧರಿರಲಿಲ್ಲ.
ಐದು ವರ್ಷದ ಹಿಂದೆ ಪಿಡಬ್ಲ್ಯೂಡಿ ರಸ್ತೆ ನಿರ್ಮಾಣಕ್ಕೆ ಹಣ ಬಿಡುಗಡೆಯಾದರೂ ಜಾಗದ ತಕರಾರಿನಿಂದ ಯೋಜನೆ
ನೆನಗುದಿಗೆ ಬಿದ್ದಿತ್ತು. ಆದರೆ ಛಲ ಬಿಡದ ಸ್ಥಳೀಯ ಜನಪ್ರತಿನಿಧಿಗಳು ಜಾಗದ ಮಾಲಕರನ್ನು ಒಪ್ಪಿಸುವಲ್ಲಿ ಸಫಲರಾಗಿದ್ದು, ಈಗ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.
ಸಾವಿರಕ್ಕೂ ಅಧಿಕ ಜನರಿಗೆ ಉಪಯೋಗ
ಉಕ್ಕುಡ – ಕುತುಬಿನಗರ ನಡುವಿನ ರಸ್ತೆ ನಿರ್ಮಾಣದಿಂದ ಈ ಭಾಗದ ಸುಮಾರು 2,000ಕ್ಕೂ ಅಧಿಕ ಜನರು ಈ ರಸ್ತೆಯ
ಉಪಯೋಗ ಪಡದುಕೊಳ್ಳಲಿದ್ದಾರೆ. ಮಳೆಗಾಲದಲ್ಲಿ ಕೃತಕ ನೆರೆಯಿಂದ ಈ ಪ್ರದೇಶದಲ್ಲಿ ಸಂಚರಿಸುವುದೇ ದುಸ್ತರವಾಗುತ್ತಿತ್ತು. ಮುಖ್ಯವಾಗಿ ಕಿನ್ಯ, ದೇವಿಪುರ, ಕನಕಮುಗೇರು, ಪಂಜಳ, ಕೆ.ಸಿ. ರೋಡ್, ತಲಪಾಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಧಾರ್ಮಿಕ ಕ್ಷೇತ್ರಕ್ಕೆ ತೆರಳಲು ಜನರಿಗೆ ಉಪಯೋಗವಾಗಲಿದೆ. ಇನ್ನೊಂದು ಬದಿಯಲ್ಲಿ ಕಿನ್ಯ ಜುಮಾ ಮಸೀದಿ ಸೇರಿದಂತೆ ವಾದಿತೈಬ, ಪಾಲಡಿ, ನಾಟೆಕಲ್, ಮಂಜನಾಡಿ ಪ್ರದೇಶಗಳಿಗೆ ಸಂಪರ್ಕ ಇದೀಗ ಸುಲಭವಾಗಿದೆ.
ಸಂಚರಿಸುವುದೇ ದುಸ್ತರವಾಗಿತ್ತು
ಹಲವು ವರ್ಷಗಳಿಂದ ನಾವು ದಿನನಿತ್ಯದ ಕೆಲಸಕ್ಕಾಗಿ ನಡೆದುಕೊಂಡೇ ಹೋಗುವ ಪರಿಸ್ಥಿತಿ ಇತ್ತು. ಅನಾರೋಗ್ಯದ ಸಂದರ್ಭದಲ್ಲಿ ಹಿರಿಯರಿಗೆ ಈ ಪ್ರದೇಶದಲ್ಲಿ ಸಂಚರಿಸುವುದೇ ದುಸ್ತರವಾಗಿತ್ತು. ಇದೀಗ ರಸ್ತೆ ನಿರ್ಮಾಣದ ಮೂಲಕ ಹಲವು ವರ್ಷದ ಬೇಡಿಕೆ ಈಡೇರಿದೆ.
– ಅಬ್ಬುಸಾಲಿ
ರಸ್ತೆಗೆ ಸ್ಥಳದಾನ ಮಾಡಿದ ಸ್ಥಳೀಯರು
ತೋಟ, ಗುಡ್ಡಗಳಲ್ಲಿ ರಸ್ತೆ
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ 2.4 ಕಿ.ಮೀ.ರಸ್ತೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಕುತುಬಿನಗರ ನಿವಾಸಿಗಳಾದ ಕೆ. ಫಾರೂಕು, ಮೊದಿನ್ ಕುಂಞಿ ಅವರು ತೋಟವನ್ನೇ ರಸ್ತೆ ನಿರ್ಮಾಣ ಕಾರ್ಯಕ್ಕೆ ಬಿಟ್ಟುಕೊಟ್ಟರೆ ಅಬ್ಬುಸಾಲಿ, ಕೆ. ಮಹಮ್ಮದ್ ಅವರು ತಮ್ಮ ಗುಡ್ಡವನ್ನು ಬಿಟ್ಟಿದ್ದಾರೆ. ಉಳಿದಂತೆ ಸುಮಾರು 10ಕ್ಕೂ ಹೆಚ್ಚು ಜನರು ಈ ರಸ್ತೆ ನಿರ್ಮಾಣಕ್ಕೆ ತಮ್ಮ ಜಾಗವನ್ನು ತ್ಯಾಗ ಮಾಡಿದ್ದಾರೆ. ಗುಡ್ಡವನ್ನು ಕೊರೆದು, ತೋಟವನ್ನು ಕಡಿದು ಸುಂದರವಾದ ರಸ್ತೆ ನಿರ್ಮಾಣದೊಂದಿಗೆ ಕಾಂಕ್ರೀಟ್ ನಡೆಯುತ್ತಿದೆ.
ಹಲವು ವರ್ಷದ ಬೇಡಿಕೆ
30 ದಶಕಗಳಿಂದ ಇಲ್ಲಿನ ಜನರ ಬೇಡಿಕೆಯನ್ನು ಸಚಿವ ಯು.ಟಿ. ಖಾದರ್ ಪೂರೈಸಿದ್ದಾರೆ. 1974ರಲ್ಲಿ ಈ ಪ್ರದೇಶದಲ್ಲಿ ನೆರೆ ಬಂದು ದೋಣಿಯನ್ನು ಬಳಸಿದ ಇತಿಹಾಸವಿದ್ದು, ಈಗ ರಸ್ತೆ ನಿರ್ಮಾಣವಾಗುತ್ತಿರುವುದು ಒಂದು ಇತಿಹಾಸ. ಮುಂದಿನ ದಿನಗಳಲ್ಲಿ ಸರಕಾರಿ ಬಸ್ ಈ ವ್ಯಾಪ್ತಿಯಲ್ಲಿ ಸಂಚರಿಸುವ ನಿಟ್ಟಿನಲ್ಲಿ ಬೇಡಿಕೆ ಇಡಲಾಗಿದೆ.
– ಸಿರಾಜ್ ಕಿನ್ಯ
ಕಿನ್ಯ ಗ್ರಾ. ಪಂ. ಉಪಾಧ್ಯಕ್ಷ
ವಸಂತ ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.