94ಸಿ -94ಸಿಸಿ ಹಕ್ಕು ಪತ್ರ ನೀಡಲು ಮನೆ ನಂಬರ್ ಕಡ್ಡಾಯ ಅಲ್ಲ
Team Udayavani, Jul 21, 2017, 6:15 AM IST
ಪುತ್ತೂರು : 94ಸಿ ಮತ್ತು 94 ಸಿಸಿ ಯೋಜನೆಯಡಿ ಅರ್ಜಿ ಸಲ್ಲಿಸುವ ಫಲಾನುಭವಿಗಳು ಮನೆ ನಂಬರ್ ಕಡ್ಡಾಯವಾಗಿ ಸಲ್ಲಿಸಬೇಕಿಲ್ಲ. ಡೋರ್ ನಂಬರ್ ಇಲ್ಲ ಎಂಬ ಕಾರಣವೊಡ್ಡಿ ಗ್ರಾ.ಪಂ. ಅಧಿಕಾರಿಗಳು ಅರ್ಜಿ ತಿರಸ್ಕರಿಸಿದರೆ, ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಎಚ್ಚರಿಸಿದ್ದಾರೆ.
ತಾ.ಪಂ. ಸಭಾಂಗಣದಲ್ಲಿ ಗುರುವಾರ ಗ್ರಾ.ಪಂ. ಭೂ ಮಾಪನ, ಗ್ರಾಮ ಲೆಕ್ಕಾಧಿ ಕಾರಿ ಹಾಗೂ ಎಂಜಿನಿಯರ್‌ಗಳ ಸಭೆ ಶಾಸಕಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮನೆ ನಂಬ್ರ ಇಲ್ಲ ಎಂಬ ಕಾರಣವೊಡ್ಡಿ ಹಕ್ಕು ಪತ್ರ ನೀಡುತ್ತಿಲ್ಲ ಎಂದು ಅನೇಕ ದೂರುಗಳು ಬಂದಿವೆ. ಸರಕಾರಿ ಜಾಗದಲ್ಲಿ ಮನೆ ಕಟ್ಟಿದ ಕಾರಣ, ಕೆಲವರಿಗೆ ನಂಬರ್ ಸಿಗದಿರಬಹುದು. ಆದರೆ ಹತ್ತಾರು ವರ್ಷ ಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿರು ವವರ ಬಗ್ಗೆ ಗ್ರಾ.ಪಂ. ಅಧಿಕಾರಿಗಳಿಗೆ ಮಾಹಿತಿ ಇರುತ್ತದೆ. ಹಾಗಾಗಿ ಇಂತಿಷ್ಟು ವರ್ಷಗಳಿಂದ ವಾಸಿಸುತ್ತಿದ್ದಾರೆ ಎಂದು ದೃಢೀಕರಣ ಪತ್ರ ನೀಡಬೇಕೆಂದು ಗ್ರಾ.ಪಂ. ಅಧಿಕಾರಿಗಳಿಗೆ ಅವರು ಸೂಚಿಸಿದರು.
ಸತಾಯಿಸಿದರೆ ಕ್ರಮ
ಕಂದಾಯ ಅಧಿಕಾರಿಗಳು, ಗ್ರಾ.ಪಂ. ಜಂಟಿಯಾಗಿ ಸ್ಥಳ ಸಮೀಕ್ಷೆ ನಡೆಸಿ ದೃಢೀಕ ರಣ ಪತ್ರ ನೀಡಬಹುದು. ನಂಬರ್ ಕೇಳಿ ಫಲಾನುಭವಿಗಳನ್ನು ಸತಾಯಿಸ ಬೇಡಿ. ಒಂದಿಷ್ಟು ಮಾನವೀಯತೆ ತೋರಿ. ಇನ್ನು ಮುಂದೆ ಸಾರ್ವಜನಿಕರಿಂದ ದೂರು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಸಿದರು.
ಎಸಿ ರಘುನಂದನ್ ಮೂರ್ತಿ ಮಾತ ನಾಡಿ, ಮನೆ ನಂಬರ್ ಕಡ್ಡಾಯ ಅಲ್ಲ ಎಂದು ಈ ಹಿಂದೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಅದನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಗ್ರಾಮ ಮಟ್ಟದಲ್ಲಿ ಗ್ರಾ.ಪಂ. ಅಧಿಕಾರಿಗಳು, ನಗರ ವ್ಯಾಪ್ತಿಯಲ್ಲಿ ನಗರಸಭೆಯಿಂದ ದೃಢೀಕರಣ ಪತ್ರ ನೀಡಬೇಕು ಎಂದರು.
ಶಾಸಕಿ ಮಾತನಾಡಿ, ಲೋಕೋಪಯೋಗಿ ಇಲಾಖೆ ರಸ್ತೆ ಬದಿಯಿಂದ 40 ಮೀ., ಜಿ.ಪಂ. ರಸ್ತೆ ಬದಿಯಿಂದ 25 ಮೀ. ದೂರ ಸರಕಾರಿ ಜಾಗದಲ್ಲಿ ಮನೆ ಕಟ್ಟಿದವರಿಗೆ ಹಕ್ಕುಪತ್ರ ನೀಡ ಬಹುದು. ಕೆಲವೆಡೆ ಅನುಮತಿ ಕೊಟ್ಟಿದ್ದಾರೆ. ಇನ್ನು ಕೆಲವೆಡೆ ಕೊಟ್ಟಿಲ್ಲ. ಇಂತಹ ಸಮಸ್ಯೆ ಪುನಾರವರ್ತನೆ ಆಗಬಾರದು. ಹಕ್ಕು ಪತ್ರ ಪಡೆಯುವ ಅವಧಿ ವಿಸ್ತರಿತಗೊಂಡಿದ್ದು, ಅರ್ಹರಿಗೆ ಅವಕಾಶ ಕಲ್ಪಿಸಿ ಎಂದರು.
ಸ್ಥಳದ ಕೊರತೆ?
ಗ್ರಾ.ಪಂ. ವ್ಯಾಪ್ತಿಯಲ್ಲಿ ಘನತ್ಯಾಜ್ಯ ಘಟಕ, ಶ್ಮಶಾನ, ಮನೆ ನಿವೇಶನಕ್ಕೆ ಕಾದಿರಿಸಿದ ಸ್ಥಳದ ಬಗ್ಗೆ ಮಾಹಿತಿ ನೀಡುವಂತೆ ಶಾಸಕಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗ್ರಾ. ಪಂ. ಅಧಿಕಾರಿಗಳಿಗೆ ಸೂಚಿಸಿದರು. ಆದರೆ, ಬಹುತೇಕ ಗ್ರಾ.ಪಂ.ಗಳಲ್ಲಿ ಸ್ಥಳದ ಕೊರತೆ, ಗಡಿ ಗುರುತು ಮಾಡದಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಸಮರ್ಪಕ ಮಾಹಿತಿ ಇಲ್ಲದೆ ಸಭೆಯಲ್ಲಿ ಉತ್ತರಿಸುವುದು ಬೇಡ ಎಂದು ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸೂಚಿಸಿದರಲ್ಲದೇ, ಕಾದಿರಿಸಿದ ಸ್ಥಳದ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು ಎಂದರು.
ಒಂದೇ ಕಡೇ..
ಆರ್ಯಾಪು ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾಗ ಮೀಸಲಿಟ್ಟಿರುವ ಮಾಹಿತಿ ನೀಡುವಂತೆ ಸೂಚನೆ ನೀಡಿದ ಸಂದರ್ಭ ಉತ್ತರಿಸಿದ ಗ್ರಾ.ಪಂ. ಅಧಿಕಾರಿ, ಕಿನ್ನಿ ಮಜಲು ಬಳಿ ಶ್ಮಶಾನ, ಮನೆ ನಿವೇಶನ, ಘನತ್ಯಾಜ್ಯ ಘಟಕಕ್ಕೆ ಮೂರೂವರೆ ಎಕ್ರೆ ಸ್ಥಳ ಕಾದಿರಿಸಲಾಗಿದೆ ಎಂದರು. ಒಂದೇ ಕಡೆ ಮನೆ, ಶ್ಮಶಾನ, ಘನತ್ಯಾಜ್ಯ ಘಟಕ ನಿರ್ಮಿ ಸುವುದು ಹೇಗೆ ಎಂದು ಶಾಸಕಿ ಮರು ಪ್ರಶ್ನಿಸಿದರು. ಈಸ್ಥಳವನ್ನು ಮನೆ ನಿವೇಶನಕ್ಕೆ ಮೀಸಲಿಡಿ, ಉಳಿದವುಗಳಿಗೆ ಪ್ರತ್ಯೇಕ ಜಾಗ ಕಾದಿರಿಸಿ ಎಂದು ಅವರು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.