ಕಳವು ಮಾಡಲೆಂದು ಬಂದಾತ ಮನೆ ಮಾಲಕನಿಗೆ ಇರಿಯಲೆತ್ನಿಸಿ ಪರಾರಿಯಾದ
Team Udayavani, Mar 21, 2018, 6:00 AM IST
ಉಳ್ಳಾಲ: ಕಳವು ಮಾಡಲು ಬಂದ ವ್ಯಕ್ತಿ ಮನೆ ಮಾಲಕನಿಗೆ ಎಚ್ಚರವಾದಾಗ ಚೂರಿಯಿಂದ ಇರಿಯಲು ಯತ್ನಿಸಿ ಪರಾರಿಯಾದ ಘಟನೆ ಪಿಲಾರು ಲಕ್ಷ್ಮೀಗುಡ್ಡೆ ಬಳಿ ನಡೆದಿದೆ. ಮಾಲಕ ಅಪಾಯವಿಲ್ಲದೆ ಪಾರಾಗಿದ್ದಾರೆ.
ಲಕ್ಷ್ಮಿಗುಡ್ಡೆ ನಿವಾಸಿ ಸಂಜೀವ ಗಟ್ಟಿ ಚೂರಿ ಇರಿತದಿಂದ ಪಾರಾದವರು. ನಿನ್ನೆ ತಡರಾತ್ರಿ ಮನೆಯ ಹಿಂಬದಿಯ ಬಾಗಿಲಿನ ಸರಳು ಮುರಿದು ಒಳನುಗ್ಗಿದ್ದ ಕಳ್ಳ ಮನೆಯೊಳಗೆ ತಡಕಾಡುತ್ತಿದ್ದಾಗ ಸಂಜೀವ ಗಟ್ಟಿ ಅವರಿಗೆ ಎಚ್ಚರವಾಯಿತು., ಬೆಳಗಿನ ಜಾವ ಪುತ್ರ ಜಾಗಿಂಗ್‌ಗೆ ತೆರಳಲು ಎದ್ದಿರಬೇಕು ಎಂದು ಮಲಗಿದಲ್ಲೇ ಯಾರು ಎಂದು ಕೇಳಿ ಟಾರ್ಚ್ ಹಾಕಿದಾಗ ಕಳ್ಳ ಓಡಲು ಅನುವಾಗಿದ್ದ. ಈ ಸಂದರ್ಭದಲ್ಲಿ ಅಪರಿಚಿತ ಮನೆಯೊಳಗಿಇರುವ ವಿಚಾರ ತಿಳಿಯುತ್ತಿದ್ದಂತೆ ಹಿಡಿಯಲು ಮುಂದೆ ಬಂದಾಗ ಆತ ಚೂರಿಯಿಂದ ಇರಿಯಲು ಯತ್ನಿಸಿದ್ದು, ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಕಳ್ಳ ಈ ವೇಳೆ ಪರಾರಿಯಾದ,
ಮನೆಯ ಬಗ್ಗೆ ತಿಳಿದವರಿಂದಲೇ ಕೃತ್ಯ: ಗಟ್ಟಿಯವರ ಕುಟುಂಬದ ದೈವಸ್ಥಾನದ ಕೆಲಸಕ್ಕೆ ಮಂಗಳವಾರ ಕೇರಳದಿಂದ ಮರ ತರುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದ ಹಣ ಇಟ್ಟಿರುವ ಮಾಹಿತಿ ತಿಳಿದೇ ಕಳ್ಳ ಮನೆಗೆ ನುಗ್ಗಿದ್ದ. ಮನೆಯ ಕುರಿತು ಮತ್ತು ಸಂಜೀವ ಗಟ್ಟಿಯ ವಿಚಾರದಲ್ಲಿ ತಿಳಿದವರೇ ಈ ಕೃತ್ಯದಲ್ಲಿ ಭಾಗವಹಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂದರ್ಭದಲ್ಲಿ ಹಿಂಬದಿಯ ಬಾಗಿಲಿನ ಬಳಿ ರಕ್ತದ ಕಲೆ ಕಂಡು ಬಂದಿದ್ದು, ಕಳ್ಳನಕೈಗೆ ಗಾಯವಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
R Ashwin: ಅಶ್ವಿನ್‌ಗೆ ಖೇಲ್ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ
Virat Kohli: ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ವಿರಾಟ್ ನೂತನ ಕೇಶ ವಿನ್ಯಾಸ
Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ
Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.