ಇಂದು ಮಂಗಳೂರು ದಸರಾ ಉದ್ಘಾಟನೆ
Team Udayavani, Oct 10, 2021, 5:37 AM IST
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುವ ಮಂಗಳೂರು ದಸರಾ ಮಹೋತ್ಸವವನ್ನು ಅ. 10ರ ಸಂಜೆ 6ಕ್ಕೆ ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ಉದ್ಘಾಟಿಸಲಿದ್ದಾರೆ.
ದಸರಾ ಮಹೋತ್ಸವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅ. 7ರಂದು ಚಾಲನೆ ನೀಡಲಾಗಿತ್ತು.
ಮೂರು ದಿನಗಳಲ್ಲಿ ಸಾವಿರಾರು ಮಂದಿ ದಸರಾ ಮಹೋತ್ಸವನ್ನು ವೀಕ್ಷಣೆ ಮಾಡಿದ್ದು, ಪ್ರತಿನಿತ್ಯ 5 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಪ್ರಸಾದ ಸ್ವೀಕರಿಸಿದ್ದಾರೆ.
ನವರಾತ್ರಿ ಮಹೋತ್ಸವದ ಸಂಭ್ರಮ
ನವರಾತ್ರಿ ಮಹೋತ್ಸವದ ಪ್ರಯುಕ್ತ ಮಂಗಳೂರು ನಗರ ಮತ್ತು ಗ್ರಾಮಾಂತರ ದೇವಸ್ಥಾನಗಳು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ.
ನವರಾತ್ರಿ ಉತ್ಸವದ ತೃತೀಯ ದಿನವಾದ ಶನಿವಾರ ವಿವಿಧ ದೇವಸ್ಥಾನಗಳಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆದವು. ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.
ದಸರಾ ಮಹೋತ್ಸವವನ್ನು ಸಾಮಾನ್ಯ ವಾಗಿ 10 ದಿನ ಆಚರಿಸಲಾಗುತ್ತಿದ್ದು, ಈ ವರ್ಷ ಅದು 9 ದಿನಗಳ ಕಾಲ ನಡೆಯಲಿದೆ. ರವಿವಾರ (ಅ. 10) ಪಂಚಮಿ ಆಚರಿಸಲಾ ಗುತ್ತಿದೆ. ಹಾಗಾಗಿ ನವರಾತ್ರಿಯ ತೃತೀಯ ಮತ್ತು ಚತುರ್ಥ ದಿನಗಳೆರಡನ್ನೂ ಶನಿವಾರ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ನವ ದುರ್ಗೆಯರಲ್ಲಿ ಚಂದ್ರ ಘಂಟಾ ಮತ್ತ ಕೂಷ್ಮಾಂಡಿನಿ ಸಹಿತ ಇಬ್ಬರೂ ದೇವಿಯರ ಪೂಜೆ ನೇರವೇರಿತು.
ಇದನ್ನೂ ಓದಿ:ಲಖೀಂಪುರ ಹಿಂಸೆ: ಆಶಿಷ್ ಮಿಶ್ರಾ ಬಂಧನ; ಸತತ 8 ಗಂಟೆ ಎಸ್‌ಐಟಿ ವಿಚಾರಣೆ
ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶನಿವಾರ ಆರ್ಯ ದುರ್ಗಾಹೋಮ, ಪುಷ್ಪಾಲಂಕಾರ ಮಹಾ ಪೂಜೆ, ಭಜನೆ ಹಾಗೂ ರಾತ್ರಿ ಶ್ರೀದೇವಿ ಪುಷ್ಪಾಲಂಕಾರ ಮಹಾ ಪೂಜೆ ಜರಗಿತು. ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಸರ್ವಾಲಂಕಾರ ಪೂಜೆ, ಮಂಗಳಾದೇವಿ ದೇವಸ್ಥಾನ ಮತ್ತು ಕೊಡಿಯಾಲಬೈಲ್‌ನ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ ಮಹಾಪೂಜೆ, ಕುಂಜತ್ತಬೈಲ್ ತೋಡ್ಲ ಮಜಲು ಶ್ರೀ ದುರ್ಗಾ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚಂಡಿಕಾಯಾಗ, ಕೊಲ್ಯ ಶ್ರೀ ದೇವಿ ಮೂಕಾಂಬಿಕೆ ದೇವಸ್ಥಾನದಲ್ಲಿ ಲಲಿತ ಸಹಸ್ರನಾಮ ಪಠನ ನಡೆಯಿತು.
ಇಂದು ಲಲಿತ ಪಂಚಮಿ
ನವರಾತ್ರಿ ಮಹೋತ್ಸವದ ಪ್ರಯುಕ್ತ ರವಿವಾರ ಲಲಿತ ಪಂಚಮಿ ಆಚರಣೆಯಾಗಲಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಮಂಗಳಾದೇವಿ ದೇವಸ್ಥಾನದಲ್ಲಿ ಲಲಿತ ಪಂಚಮಿ ಆಚರಣೆ, ಕೊಡಿಯಾಲಬೈಲ್ ಶ್ರೀ ಭಗವತೀ ಕ್ಷೇತ್ರದಲ್ಲಿ ವಿಶೇಷ ಕುಂಕುಮಾರ್ಚನ ಸೇವೆ ನೆರವೇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.