ಕಾಡು ನಿವಾಸಿಗಳಿಂದ ಪಶ್ಚಿಮಘಟ್ಟದ ಕಾಡುಗಳಿಗೆ ಬೆಂಕಿ !


Team Udayavani, Mar 11, 2017, 12:14 PM IST

11-REPORTER-16.jpg

ಬೆಳ್ತಂಗಡಿ: ಕಸ್ತೂರಿ ರಂಗನ್‌ ವರದಿ ಜನಸಾಮಾನ್ಯರಲ್ಲಿ ಒಂದು ರೀತಿಯ ಆತಂಕ ಮೂಡಿಸಿದ್ದರೆ, ಎಸ್ಟೇಟ್‌ ಮಾಲಕರಲ್ಲಿ ಇನ್ನೊಂದು ರೀತಿಯ ಭಯ ಮೂಡಿಸಿದೆ. ಇದರ ಜತೆಗೆ ಕಾಡಿನಂಚಿನಲ್ಲಿ, ಕಾಡಿನಲ್ಲಿಯೇ ವಾಸವಾಗಿರುವ ಅದೆಷ್ಟೋ ಅಮಾಯಕರ ಭೀತಿ ಬೇರೆಯೇ ಇದೆ. ಅದಕ್ಕಾಗಿ ಅವರು ಕಂಡುಕೊಂಡ ದಾರಿಯೇ ಕಾಡಿಗೆ ಬೆಂಕಿ ಹಚ್ಚಿ ಕಾಡು ನಾಶ ಮಾಡುವುದು. ಕಳೆದ ಕೆಲವು ದಿನಗಳಿಂದ ಸಂಭವಿಸುತ್ತಿರುವ ಕಾಡಿನ ಬೆಂಕಿಗೆ ಕಾರಣ ಕಾಡಿನೊಳಗಿನ ಮಂದಿಯೂ ಬೆಂಕಿ ಹಚ್ಚುತ್ತಿರುವುದು ಎನ್ನುವುದು ಭಯಾನಕ ಸತ್ಯ ಈಗ ಬೆಳಕಿಗೆ ಬರುತ್ತಿದೆ. 

ಕಸ್ತೂರಿ ರಂಗನ್‌ ವರದಿ ಜಾರಿಯಾದರೆ ನಮ್ಮ ಬದುಕು ಅತಂತ್ರವಾಗಲಿದೆ ಎನ್ನುವುದು ಪಶ್ಚಿಮಘಟ್ಟದ ಕಾಡುಗಳ ನಡುವೆ ಬದುಕು ಸವೆಸುತ್ತಿರುವ ಆದಿವಾಸಿಗಳ ಅಳಲು. ಏಕೆಂದರೆ ಎಸ್ಟೇಟ್‌ ಮಾಫಿಯಾಗಳು ಪಶ್ಚಿಮ ಘಟ್ಟದ ಸಹಸ್ರಾರು ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿ ಕಾಡು ಭಸ್ಮ ಮಾಡುವ ಕಾರ್ಯಾಚರಣೆಗೆ ಇಳಿದಿವೆ. ಕಸ್ತೂರಿ ರಂಗನ್‌ ವರದಿಯ ದುರ್ಲಾಭ ಪಡೆಯುವ ಹುನ್ನಾರ ಈ ವನ ದಹನದ ಹಿನ್ನೆಲೆಯಲ್ಲಿದೆ ಎನ್ನಲಾಗಿದೆ. ಏಕೆಂದರೆ ಕಸ್ತೂರಿಯ ವ್ಯಾಪ್ತಿ ಎಲ್ಲೆಲ್ಲಿ ಬರಲಿದೆಯೋ ಅಲ್ಲೆಲ್ಲ ಕಾಡ್ಗಿಚ್ಚು ಹೆಚ್ಚೇ ಇದೆ. ಬಡವರಿಗೂ ಇಂತಹ ದುಷ್ಕೃತ್ಯಕ್ಕೆ ಪ್ರೇರಣೆ ನೀಡಿ ಅವರಿಂದಲೂ ಬೆಂಕಿ ಹಚ್ಚಿಸುವ ಕಾರ್ಯವ್ಯವಸ್ಥಿತವಾಗಿ ನಡೆಯುತ್ತಿದೆ. ಇಂತಹ ಬೆಂಕಿ ಹಚ್ಚುವ ದುರುಳರಿಗೆ ಅದೇನು ಶಿಕ್ಷೆ ಪ್ರಕಟ ವಾಗಲಿದೆ.

ಘಾಟಿಯಲ್ಲಿ ಬೆಂಕಿ
ದ.ಕ. ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಶಾಲವಾಗಿ ಹಬ್ಬಿರುವ ಚಾರ್ಮಾಡಿ ಘಾಟಿಯ ಕಡಿದಾದ ಪ್ರದೇಶಗಳಲ್ಲಿ ಬೆಂಕಿ ವ್ಯಾಪಿಸಿದೆ. ಕೆಲವು ದಿನಗಳ ಹಿಂದೆಯೇ ಬೆಂಕಿ ಬಿದ್ದಿರುವ/ ಹಾಕಿರುವ ಸಾಧ್ಯತೆಯಿದ್ದು, ಈಚೆಗೆ ಬೀಸುತ್ತಿರುವ ಶೀತ ಗಾಳಿಯಿಂದ ಬೆಂಕಿಯ ವ್ಯಾಪ್ತಿ ವಿಶಾಲವಾಗುತ್ತಿದೆ. ಇದೇ ಕಾರಣದಿಂದ ಬೆಂಕಿ ನಿಯಂತ್ರಣಕ್ಕೂ ಬಂದಿಲ್ಲ. ಇಲಾಖೆಯೂ ಅಂತಹ ದೊಡ್ಡ ಮಟ್ಟದ ಪ್ರಯತ್ನ ಮಾಡಲಿಲ್ಲ. ಚಾರ್ಮಾಡಿ ಘಾಟಿಯ ಬಾರಿಮಲೆ, ರಾಮನಬೆಟ್ಟ, ಸೊಪ್ಪಿನಗುಡ್ಡ, ಹೊಸಮನೆಗುಡ್ಡ, ಕಡ್ತಕಲ್‌ ಘಾಟಿಯ ಕೃಷ್ಣಗಿರಿ, ಎಳ ನೀರು ಘಾಟಿಯ ಹಿರಿಮರಿಗುಪ್ಪೆ, ಬೈರಾಪುರ ಘಾಟಿಯ ದೀಪದಕಲ್ಲು, ಉಳಿಯಮಲೆ, ಮೇರುತಿಗಿರಿ, ಅಬ್ಬಿನೆಟ್ಟಿ, ವೆಂಕಟಗಿರಿ, ಮುಗಿಲಗಿರಿ, ಅಮೆದಿಕ್ಕೆಲ್‌ ಮೊದಲಾದ ಕಡೆಗಳಲ್ಲಿ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದೆ. ದೊಡ್ಡ ಬೆಂಕಿಯ ಎದುರು ಇಲಾಖೆಯ ಸಣ್ಣ ಪ್ರಯತ್ನ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂದಂತಾಗಿದೆ. ಈ ಪ್ರದೇಶಗಳಿಗೆ ವಾಹನಗಳಲ್ಲಿ ಹೋಗಲು ಸಾಧ್ಯವಿಲ್ಲ. ಇಲಾಖೆಯೂ ಚುರುಕಿನ ಕಾರ್ಯಾಚರಣೆ ಕೈಗೊಂಡಿಲ್ಲ. ಇದರ ಪರಿಣಾಮ ಊಹಿಸಲೂ ಅಸಾಧ್ಯ.

ಆನೆಗಳಿಲ್ಲ
ಚಾರ್ಮಾಡಿಯ ಅತೀ ಹೆಚ್ಚು ಆನೆಗಳಿರುವ ಪ್ರದೇಶಗಳಾದ ಚಾರ್ಮಾಡಿ, ಅಂಬಟೆಮಲೆ, ಬಾಂಜಾರುಮಲೆ, ಇಳಿಮಲೆ, ಬಾರಿಮಲೆ, ದೇವಗರಿ ಅಳಿಯೂರು ಕಣಿವೆ ಪ್ರದೇಶಗಳ 50 ಎಕರೆ ಇಂದು ಕಾಫಿ ಎಸ್ಟೇಟ್‌ನವರು ಇಡೀ ಅರಣ್ಯ ಕಡಿದು ಕಾಫಿ ಗಿಡ ನೆಟ್ಟಿದ್ದಾರೆ. ಕೇಂದ್ರದ ರಕ್ಷಿತಾರಣ್ಯದ ನಿಯಮಗಳು ಇಲ್ಲಿ ಗಾಳಿಗೆ ತೂರಿದಂತಾಗಿದ್ದು, ಎಸ್ಟೇಟ್‌ ಕುಳಗಳ ದಾಸರಾಗಿ ಇಲಾಖಾಧಿಕಾರಿಗಳು ವರ್ತಿಸುವಂತಿದೆ. ಅಲ್ಲಿ ಆನೆಗಳ ಆವಾಸಸ್ಥಾನ ಹಾನಿಗೀಡಾಗಿದೆ. ಕಾಡಿನೊಳಗೆ ಹೋಗಲು ಎಸ್ಟೇಟ್‌ ಮಾಲಕರ ಅನುಮತಿ ಕೇಳಬೇಕಾದ ದಯನೀಯ ಸ್ಥಿತಿ ಇಲಾಖೆಗಿದೆ. ಕೆಲವೆಡೆ ಕಾಡು ಕೋಣಗಳು ಕುಡಿಯುವ ನೀರಿಗಾಗಿ ಮೈಲು ಗಟ್ಟಲೆ ಪಯಣಿಸುವ ದುರ್ಗತಿ ಬಂದಿದೆ.

ಲೂಟಿಯೇ ಉದ್ದೇಶ
ಅರಣ್ಯ ನಾಶ ಹಾಗೂ ಲೂಟಿಯೇ ಉದ್ದೇಶವಾಗಿಟ್ಟ ಅಧಿಕಾರಿಗಳು, ಸಚಿವರಿಂದ ಕಾಡು ಉಳಿಸುವ ಪ್ರಕ್ರಿಯೆ ನಿರೀಕ್ಷೆ ಅಸಾಧ್ಯ. ಕಾಡು
ಗಳ್ಳರು ಹಾಗೂ ಸುತ್ತಮುತ್ತಲಿನ ಎಸ್ಟೇಟ್‌ ಕುಳಗಳೇ ಈ ಬೆಂಕಿ ಹಾಕುತ್ತಿದ್ದಾರೆ ಎನ್ನಲಾಗಿದೆ. ಅಲ್ಲಲ್ಲಿ ಹೊತ್ತಿ ಉರಿಯುತ್ತಿದೆ, ವನ್ಯಜೀವಿಗಳು ಜೀವಭಯದಿಂದ ಆತಂಕಕ್ಕೊಳಗಾಗಿವೆ ! ಚಿಕ್ಕಚಿಕ್ಕ ಕೀಟಗಳು, ಹಾರಲಾಗದ ಹಕ್ಕಿಯ ಮರಿಗಳು, ಮೊಟ್ಟೆಗಳು, ಹಾವುಗಳು, ನವಿಲುಗಳು ಸುಟ್ಟು ಭಸ್ಮವಾಗುತ್ತಿವೆ, ಮಳೆಗೆ ಮೂಲಾಧಾರವಾಗಿರುವ ಹುಲ್ಲುಗಾವಲು, ಶೋಲಾರಣ್ಯ ಹೊತ್ತಿ ಬೂದಿಯಾಗುತ್ತಿವೆ. ಜುಗಲ್ಬಂದಿ ತರಹ ಅಲ್ಲಲ್ಲಿ ಬೆಂಕಿಯ ಕೆನ್ನಾಲಿಗೆ ಪಶ್ಚಿಮ ಘಟ್ಟದ ಗಿರಿ ಕಾನನವನ್ನು ಆವರಿಸುತ್ತಿದೆ.  

ಹೆಲಿಕಾಪ್ಟರ್‌ ಇಲ್ಲ
ಬೇರೆ ದೇಶಗಳಲ್ಲಿ ಕಾಡಿನ ಬೆಂಕಿ ನಂದಿಸಲು ಹೆಲಿಕಾಪ್ಟರ್‌ ಬಳಕೆ ಮಾಡುತ್ತಾರೆ. ರಾಸಾಯನಿಕ ಮೂಲಕ ಅಗ್ನಿಶಮನ ನಡೆಸುತ್ತಾರೆ. ಆದರೆ ಕೋಟ್ಯಂತರ ರೂ. ಸಾರ್ವಜನಿಕರ ತೆರಿಗೆ ಹಣವನ್ನು ಅರಣ್ಯ ಉಳಿಸುವ ನೆಪದಲ್ಲಿ ಲೂಟಿ ಮಾಡುವ ಅರಣ್ಯ ಇಲಾಖೆ ಏನು ಮಾಡುತ್ತಿದೆ. ನಮ್ಮಲ್ಲಿ ಮಂತ್ರಿಗಳಿಗೆ ತಿರುಗಾಡಲು ಹೆಲಿಕಾಪ್ಟರ್‌ ಇದೆ, ಅರಣ್ಯ ಉಳಿಸಲು, ಆಪತ್ತು ನಿಭಾಯಿಸಲು ಅಂತಹ ಸಾಧನಗಳಿಲ್ಲ ಎನ್ನುತ್ತಾರೆ ಚಾರಣಿಗ ಶಶಿಧರ ಶೆಟ್ಟಿ.

ಬೇಕೆಂದೇ ಹಾಕಿದ ಬೆಂಕಿ
ಕಸ್ತೂರಿ ರಂಗನ್‌ ವರದಿಯ ದುರ್ಲಾಭ ಪಡೆಯಲು ಎಸ್ಟೇಟ್‌ ಕುಳಗಳು ಪ್ರಯತ್ನಿಸುತ್ತಿರುವಂತಿವೆ. ಬೆಂಕಿ ಹಾಕಿ ಮರಗಳ ನಾಶವಾದರೆ ಮರಗಳಿಲ್ಲ ಎಂದು ಅದನ್ನು ಡೀಮ್ಡ್ ಅರಣ್ಯ ಎಂದು ಉಲ್ಲೇಖೀಸುತ್ತಾರೆ. ಅದನ್ನು ಎಸ್ಟೇಟ್‌ ಹಾಗೂ ಖಾಸಗಿಯವರಿಗೆ ಒತ್ತುವರಿ ಮಾಡಿಕೊಳ್ಳಬಹುದು ಎಂಬ ದುಷ್ಟ ಯೋಚನೆ. 

ಶಶಿಧರ ಶೆಟ್ಟಿ, ಮಂಗಳೂರು

ಬೆಂಕಿ ಭಾಗ್ಯ
ಅರಣ್ಯ ಇಲಾಖೆಯಲ್ಲಿ ಬೇಕಾದಷ್ಟು ಕಂದಾಯ ಬರುತ್ತಿದ್ದರೂ ಮೂಲ ಸೌಕರ್ಯ ಒದಗಿಸಲು ಸರಕಾರಕ್ಕೆ ಆಗುತ್ತಿಲ್ಲ. ಅಂದರೆ ಇದ್ಯಾವ ಬರಪೀಡಿತ ಸರಕಾರ ! ಗೊರಕೆ ಹೊಡೆಯುತ್ತಿರುವ ಅರಣ್ಯ ಸಚಿವರಿಗೆ ಇಷ್ಟೆಲ್ಲ ಆದರೂ ಎಚ್ಚರಿಕೆ ಆಗುವುದಿಲ್ಲ, ಅಂದ್ರೆ ಎಷ್ಟು ಅರಣ್ಯ ಸಂರಕ್ಷಣೆ ಆದೀತು ? ಬಹುಶಃ ರಾಜ್ಯ ಸರಕಾರದ ಶಾದಿ ಭಾಗ್ಯ, ಗೋಧಿ ಭಾಗ್ಯ, ವಿಸ್ಕೀ ಭಾಗ್ಯ ಎಂಬಂತೆ ಇದು ಬೆಂಕಿ ಭಾಗ್ಯ ಯೋಜನೆಯಾ?
ದಿನೇಶ್‌ ಹೊಳ್ಳ,  ಪರಿಸರ ಹೋರಾಟಗಾರ

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

death

Puttur: ಅಪಘಾತದಲ್ಲಿ ಗಾಯಾಳಾಗಿದ್ದ ಬೈಕ್‌ ಸಹ ಸವಾರ ಸಾವು

1-bhatru

Subrahmanya: ಅರ್ಚಕರ ಮನೆಯಿಂದ ನಗ-ನಗದು ಕಳವು

death

Belthangady : ಸೊಪ್ಪು ತರಲು ಹೋಗಿದ್ದ ವ್ಯಕ್ತಿ ಆಕಸ್ಮಿಕ ಸಾ*ವು

baby

Sullia: ಒಂಟಿಯಾಗಿ ಪತ್ತೆಯಾದ ಮಗು ಪೋಷಕರ ಮಡಿಲಿಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

court

Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ

death

Puttur: ಅಪಘಾತದಲ್ಲಿ ಗಾಯಾಳಾಗಿದ್ದ ಬೈಕ್‌ ಸಹ ಸವಾರ ಸಾವು

arrested

BC Road; ಎರಡು ತಂಡಗಳ ಮಧ್ಯೆ ಮಾರಾಮಾರಿ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.